
31 ನೇ ವಯಸ್ಸಿನಲ್ಲಿ ನಿಧನರಾದ ಮಲಯಾಳಂ ನಿರ್ದೇಶಕ ಜೋಸೆಫ್ ಮನು
Team Udayavani, Feb 27, 2023, 10:17 AM IST

ಎರ್ನಾಕುಲಂ: ಚಲನಚಿತ್ರ ನಿರ್ಮಾಪಕ ಜೋಸೆಫ್ ಮನು ಜೇಮ್ಸ್ ಫೆಬ್ರವರಿ 25 ರಂದು ಕೇರಳದ ಎರ್ನಾಕುಲಂನ ಆಲುವಾದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
31 ವರ್ಷದ ಚಿತ್ರ ನಿರ್ದೇಶಕ ಜೋಸೆಫ್ ಮನು ಅವರ ಅಂತ್ಯಕ್ರಿಯೆ ಭಾನುವಾರ ಕುರವಿಲಂಗಾಡ್ ನ ಮೇಜರ್ ಆರ್ಕಿಪಿಸ್ಕೋಪಲ್ ಮಾರ್ತ್ ಮರಿಯಮ್ ಆರ್ಚ್‌ಡೀಕನ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ನ್ಯಾನ್ಸಿ ರಾಣಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಹಾನಾ ಕೃಷ್ಣ ಮತ್ತು ಅರ್ಜುನ್ ಅಶೋಕನ್ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ:ದೇವಸ್ಥಾನದಲ್ಲಿ ಯಾಂತ್ರಿಕ ಆನೆಯಿಂದ ಪೂಜೆ; ಕೇರಳದ ತ್ರಿಶೂರ್ ನಲ್ಲಿ ಹೊಸ ನಡೆ
ನಟಿ ಅಹಾನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ರೆಸ್ಟ್ ಇನ್ ಪೀಸ್ ಮನು! ಇದು ನಿಮಗೆ ಸಂಭವಿಸಬಾರದಿತ್ತು!” ಎಂದು ಬರೆದುಕೊಂಡಿದ್ದಾರೆ. ಅಜು ವರ್ಗೀಸ್ ಅವರು ಸಂತಾಪ ಸೂಚಿಸಿ, “ತುಂಬಾ ಬೇಗ ಹೋದ ಸಹೋದರ” ಎಂದು ಬರೆದಿದ್ದಾರೆ.
ಜೋಸೆಫ್ ಮನು ಅವರು ಬಾಲನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. 2004ರಲ್ಲಿ ಅವರು ನಟಿಸಿದ ಮೊದಲ ಚಿತ್ರ ಬಿಡುಗಡೆಯಾಗಿತ್ತು. ಅವರು ಮಲಯಾಳಂ, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲೂ ಅಸಿಸ್ಟೆಂಟ್ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್ – ನಯನತಾರಾ ನಟನೆ; ಯಾವ ಸಿನಿಮಾ?

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್ ಹಾಸನ್

Rashmika Mandanna: ‘ಅನಿಮಲ್’ ನಲ್ಲಿ ‘ಗೀತಾಂಜಲಿ’ ಆದ ರಶ್ಮಿಕಾ; ಫಸ್ಟ್ ಲುಕ್ ಔಟ್

Actor: ಶೂಟಿಂಗ್ ದುರಂತದಲ್ಲಿ 30 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ತಮಿಳು ನಟ ಬಾಬು ವಿಧಿವಶ