
Shruti Haasan: ಫಾಲೋ ಮಾಡಿಕೊಂಡು ಬಂದ ವ್ಯಕ್ತಿ; ಭೀತಿಗೊಳಗಾಗಿ ಕಾರು ಹತ್ತಿದ ನಟಿ
Team Udayavani, Sep 18, 2023, 1:43 PM IST

ಮುಂಬಯಿ: ಬಹುಭಾಷಾ ನಟಿ ಶ್ರುತಿ ಹಾಸನ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಪ್ರಿಯಕರನ ಬಗ್ಗೆ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಏರ್ಪೋರ್ಟ್ ನಲ್ಲಿ ಅಭಿಮಾನಿಯೊಬ್ಬನ ವಿಚಾರದಲ್ಲಿ ಗರಂ ಆಗಿದ್ದಾರೆ.
ಸೆಲೆಬ್ರಿಟಿಗಳು ಎಲ್ಲಿಗೆ ಹೋದರೂ ಅವರ ಹಿಂದೆ ಹತ್ತಾರು ಮಂದಿ ಕ್ಯಾಮೆರಾ ಹಿಡಿದುಕೊಂಡು ಬಂದು ಅವರ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಹೆಚ್ಚಾಗಿ ಏರ್ಪೋರ್ಟ್ ನಲ್ಲಿ ಸ್ಟಾರ್ ಗಳು ಬಂದಿಳಿದ ವೇಳೆ ಅಥವಾ ಅಲ್ಲಿಂದ ಹೋಗುವ ವೇಳೆ ಫ್ಯಾನ್ಸ್ ಗಳು ಸೇರಿದಂತೆ ಬಿಟೌನ್ ಸಿನಿ ಮೀಡಿಯಾಗಳು ಅವರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯುತ್ತಾರೆ.
ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇಂಥದ್ದೇ ಒಂದು ಘಟನೆ ಶ್ರುತಿ ಹಾಸನ್ ಅವರೊಂದದಿಗೆ ಆಗಿದೆ. ಇತ್ತೀಚೆಗೆ ನಟಿ ಶ್ರುತಿ ಹಾಸನ್ ಅವರು ಮುಂಬಯಿ ಏರ್ಪೋರ್ಟ್ ಗೆ ಬಂದ ವೇಳೆ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.
ಕಪ್ಪು ಬಟ್ಟೆ, ನೀಲಿ ಜೀನ್ಸ್ ಹಾಕಿಕೊಂಡ ವ್ಯಕ್ತಿಯೊಬ್ಬ ನಟಿ ಹಾಗೂ ಅವರ ತಂಡವನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಈ ವೇಳೆ ಶ್ರುತಿ ಹಾಸನ್ ಅವರ ತಂಡದವರ ಬಳಿ ಆತ ಯಾರೆಂದು ಎರಡ್ಮೂರು ಬಾರಿ ಕೇಳಿದ್ದಾರೆ. “ಅವನು ಯಾಕೆ ಅಲ್ಲಿ ನಿಂತಿದ್ದಾನೆ?” ಎಂದಿದ್ದಾರೆ.
ಇದನ್ನೂ ಓದಿ: Thothapuri-2: ಹಾಸ್ಯದ ಜೊತೆ ಸಾಗುವ ಭಿನ್ನ ಪ್ರೇಮಯಾನ.. ʼತೋತಾಪುರಿ-2ʼ ಟ್ರೇಲರ್ ಔಟ್
ಆತನ ವರ್ತನೆಯನ್ನು ನೋಡಿದ ಮೇಲೆ ನಟಿ ಸ್ವಲ್ಪ ಭೀತಿಗೊಳಗಾಗಿದ್ದು, ಕಾರು ಹತ್ತರು ಪಾರ್ಕಿಂಗ್ ಜಾಗಕ್ಕೆ ಬಂದಿದ್ದಾರೆ. ಆದರೆ ಈ ವೇಳೆ ವ್ಯಕ್ತಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.
ವ್ಯಕ್ತಿ ನಟಿಯ ಪಕ್ಕಕ್ಕೆ ಬಂದಾಗ, ಶ್ರುತಿ “ನೀವು ಯಾರೆಂದು ನನಗೆ ತಿಳಿದಿಲ್ಲ, ಸರ್” ಎಂದು ಬೇಗ ಕಾರು ಹತ್ತಿ ಹೋಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕೆಲವರು ಈತ ಅಭಿಮಾನಿಯಾಗಿರಬಹುದು ಸೆಲ್ಫಿಗಾಗಿ ಬಂದಿರಬಹದೆಂದು ಕಮೆಂಟ್ ಮಾಡಿದ್ದಾರೆ.
ಶ್ರುತಿ ಹಾಸನ್ ಪ್ರಭಾಸ್ ಅವರ ʼಸಲಾರ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ʼನಾನಿ30ʼ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ