
MAA ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್‍ಗೆ ಸೋಲು
Team Udayavani, Oct 11, 2021, 1:36 PM IST

ಹೈದ್ರಬಾದ್ : ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಶನ್ (MAA) ನಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಸೋಲಾಗಿದೆ. ಇವರ ಪ್ರತಿಸ್ಪರ್ಧಿ ನಟ ಮಂಚು ವಿಷ್ಣು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು, MAA ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ವಿಷ್ಣು ಅವರು ಪ್ರತಿಸ್ಪರ್ಧಿ ಪ್ರಕಾಶ್ ರಾಜ್ ಅವರನ್ನು 106 ಮತಗಳಿಂದ ಸೋಲಿಸಿದರು. ವಿಷ್ಣು 380 ಮತಗಳನ್ನು ಪಡೆದರೆ, ಪ್ರಕಾಶ್ ರಾಜ್ ಅವರು 274 ಮತಗಳನ್ನು ಪಡೆದುಕೊಂಡಿದ್ದಾರೆ.
ಪ್ರಕಾಶ್ ರಾಜ್ ಅವರು ಅವರು ಸ್ಥಳೀಯರಲ್ಲ ಎನ್ನುವ ಅಂಶವನ್ನು ಪ್ರತಿಸ್ಪರ್ಧಿ ಬೆಂಬಲಿಗರು ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು.
ಮಾ ಚುನಾವಣೆಗಳು ಸಾಮಾನ್ಯವಾಗಿ ಕಡಿಮೆ ಪ್ರಾಮುಖ್ಯತೆ ಹೊಂದಿದ್ದರೂ ಈ ಬಾರಿ ಮಂಚು ವಿಷ್ಣು ಮತ್ತು ಪ್ರಕಾಶ್ ರಾಜ್ ಅವರ ತೀವ್ರ ಪ್ರಚಾರವು ಚುನಾವಣೆಗೆ ರಾಜ್ಯ ಚುನಾವಣೆಗಳ ಪರಿಮಳ ನೀಡಿತ್ತು ಮತ್ತು ಸುದ್ದಿ ವಾಹಿನಿಗಳ ಪ್ರೈಮ್ ಟೈಮ್ ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸಿತು.
ಮಂಚು ವಿಷ್ಣು ತನ್ನ ಚುನಾವಣೆಯ ಪ್ರಚಾರದಲ್ಲಿ ನಟ ಪ್ರಕಾಶ್ ರಾಜ್ ಅವರನ್ನು ಹೊರಗಿನಿಂದ ಬಂದವರು ಎಂದು ಪ್ರತಿಬಿಂಬಿಸಿದ್ದರು. ಈ ಅಂಶವು ವಿಷ್ಣುವಿನ ಬಲವನ್ನು ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿಸಿತು ಮತ್ತು ಕೆಲಸ ಮಾಡಿತು ಎಂದು ಹೇಳಲಾಗುತ್ತಿದೆ. ವಿಷ್ಣು ಮಂಚು ಸಮಿತಿಯ ಹಲವಾರು ಸದಸ್ಯರು ಸಂಘದ ಇತರ ಉನ್ನತ ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gaming App Case:ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ

Gayatri Joshi: ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ಮತ್ತೊಂದು ಕಾರಿನಲ್ಲಿದ್ದ ದಂಪತಿ ಮೃತ್ಯು

Bolllywood: ಡಯಟ್‌ನಿಂದ ನಟಿ ಶ್ರೀದೇವಿ ಸಾವು- ಬೋನಿ ಕಪೂರ್ ಹೇಳಿಕೆ

Raj Kundra: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲಿನ ದಿನಗಳ ಸುತ್ತ ಬರಲಿದೆ ಸಿನಿಮಾ

‘Thalaivar 170’: 32 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ರಜಿನಿ – ಬಿಗ್ ಬಿ ನಟನೆ
MUST WATCH
ಹೊಸ ಸೇರ್ಪಡೆ

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ