Mumbai: ಬಿಗ್‌ ಬಾಸ್‌ ಶೂಟಿಂಗ್‌ ಅರ್ಧದಲ್ಲೇ ಬಿಟ್ಟು ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್

Team Udayavani, Oct 13, 2024, 10:36 AM IST

salman-khan

ಮುಂಬೈ: ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ 18 ರ (Bigg Boss 18) ಚಿತ್ರೀಕರಣವನ್ನು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಸಾವಿನ ಸುದ್ದಿಯನ್ನು ಕೇಳಿದ ಹಠಾತ್ತನೆ ಸ್ಥಗಿತಗೊಳಿಸಿದ್ದಾರೆ. ಕಾರ್ಯಕ್ರಮದ ಶೂಟಿಂಗ್‌ ನಲ್ಲಿದ್ದ ನಟ, ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾವಿಸಿದರು, ಅಲ್ಲಿ ಸಿದ್ದಿಕ್ ಚಿಕಿತ್ಸೆ ಪಡೆಯುತ್ತಿದ್ದರು.

ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಶನಿವಾರ (ಅ.12) ರಾತ್ರಿ 66 ವರ್ಷದ ಬಾಬಾ ಸಿದ್ದಿಕಿ ಮೇಲೆ ದಾಳಿ ನಡೆಸಲಾಯಿತು. ಗಾಯಗೊಂಡಿದ್ದ ಅವರು ಚಿಕಿತ್ಸೆಯ ಫಲಕಾರಿಯಾಗದೆ ಸಾವನ್ನಪ್ಪಿದರು.

ಬಾಬಾ ಸಿದ್ದಿಕ್ ಜೊತೆ ನಿಕಟ ಸಂಬಂಧ ಹೊಂದಿದ್ದ ಸಲ್ಮಾನ್ ಮಧ್ಯರಾತ್ರಿ 12:30 ರ ಸುಮಾರಿಗೆ ಲೀಲಾವತಿ ಆಸ್ಪತ್ರೆಗೆ ಆಗಮಿಸಿದರು. ಬಾಲಿವುಡ್‌ ನ ದೊಡ್ಡ ತಾರೆಯರನ್ನು ಹೆಚ್ಚಾಗಿ ಒಟ್ಟುಗೂಡಿಸುವ ಸಿದ್ದಿಕಿ ಅವರ ಹೆಸರಾಂತ ವಾರ್ಷಿಕ ಇಫ್ತಾರ್ ಪಾರ್ಟಿಗಳಲ್ಲಿ ನಟ ಸಲ್ಮಾನ್ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದರು.

ತನ್ನ ರಾಜಕೀಯ ಪರಂಪರೆ ಮತ್ತು ಸಾಮಾಜಿಕ ಪ್ರಭಾವಕ್ಕೆ ಹೆಸರುವಾಸಿಯಾಗಿರುವ ಬಾಬಾ ಸಿದ್ದಿಕಿ, ಬಾಲಿವುಡ್‌ನ ಅತ್ಯಂತ ಕುಖ್ಯಾತ ದ್ವೇಷವನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2013 ರಲ್ಲಿ, ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಐದು ವರ್ಷಗಳ ವೈರತ್ವ ಮರೆಯಿಸಿ ಒಂದಾಗಿಸಿದರು. ಸಲ್ಮಾನ್-‌ ಶಾರುಖ್‌ ವೈರತ್ವ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳದ ನಂತರ ಪ್ರಾರಂಭವಾಗಿತ್ತು. 2013ರ ಅವರ ಇಫ್ತಾರ್ ಕೂಟದಲ್ಲಿ ಇಬ್ಬರು ಸೂಪರ್‌ ಸ್ಟಾರ್‌ ಗಳು ಮತ್ತೆ ಒಂದಾದರು.

ಹತ್ಯೆಯಾದ ಬಾಬಾ ಸಿದ್ದಿಕಿ ಅವರು ಬಾಂದ್ರಾ (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಾರಾಗಿ ಆಯ್ಕೆಯಾಗಿದ್ದರು. ಮುಂಬೈನ ಪ್ರಮುಖ ವ್ಯಕ್ತಿಯಾಗಿದ್ದ ಅವರು 2004ರಿಂದ 2008ರವರೆಗೆ ವಿಲಾಸ್‌ರಾವ್‌ ದೇಶ್‌ಮುಖ್‌ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಕಾಂಗ್ರೆಸ್‌ ತೊರೆದು ಅಜಿತ್‌ ಪವಾರ್‌ ಅವರ ಎನ್‌ ಸಿಪಿಗೆ ಸೇರ್ಪಡೆಯಾಗಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Gujarat ವಡೋದರ: ತೈಲ ಸಂಸ್ಕರಣ ಘಟಕ‌ ಸ್ಫೋಟ, ಓರ್ವ ಸಾವು

Gujarat ವಡೋದರ: ತೈಲ ಸಂಸ್ಕರಣ ಘಟಕ‌ ಸ್ಫೋಟ, ಓರ್ವ ಸಾವು

Kota-Governer

Kota: ಜಗತ್ತಿಗೆ ಅನ್ನ, ಅಕ್ಷರ, ಆರ್ಥಿಕ ಜ್ಞಾನ ನೀಡಿದ ಉಡುಪಿ: ರಾಜ್ಯಪಾಲ ವಿಜಯಶಂಕರ್‌

Pro Kabaddi: ಗುಜರಾತ್‌ಗೆ 7ನೇ ಸೋಲು

Pro Kabaddi: ಗುಜರಾತ್‌ಗೆ 7ನೇ ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Gujarat ವಡೋದರ: ತೈಲ ಸಂಸ್ಕರಣ ಘಟಕ‌ ಸ್ಫೋಟ, ಓರ್ವ ಸಾವು

Gujarat ವಡೋದರ: ತೈಲ ಸಂಸ್ಕರಣ ಘಟಕ‌ ಸ್ಫೋಟ, ಓರ್ವ ಸಾವು

ಟ್ರಂಪ್‌, ಕಮಲಾ ಭಾರತದ ಮೇಲೆ ಅವಲಂಬಿತರಾಗಿದ್ರು: ಸಿಎಂ ಮೋಹನ್‌ ಯಾದವ್‌

Trump, Kamala: ಭಾರತದ ಮೇಲೆ ಅವಲಂಬಿತರಾಗಿದ್ರು: ಸಿಎಂ ಮೋಹನ್‌ ಯಾದವ್‌

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Udupi: ಗೀತಾರ್ಥ ಚಿಂತನೆ-91: ಸಂತ್ರಸ್ತನಿಂದಲೇ ಸರಿಪಡಿಸುವ ಯುಕ್ತಿ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

Jharkhand: “ನುಸುಳುಕೋರರಿಗೆ ಭೂಮಿ ಸಿಗದಂತೆ ಕಾಯ್ದೆ’: ಸಚಿವ ಅಮಿತ್‌ ಶಾ

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

WhatsApp: ಗ್ರೂಪ್‌ ರಚನೆ: ಐಎಎಸ್‌ ಅಧಿಕಾರಿ ಅಮಾನತು

School bag

Kalotsava; 9ರಿಂದ 12ನೇ ತರಗತಿಗೆ ಕಲೋತ್ಸವ ಸ್ಪರ್ಧೆ

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Supreme Court: ವಿದ್ಯಾರ್ಥಿನಿಯರ ಮುಟ್ಟಿನ ನೈರ್ಮಲ್ಯ ನೀತಿಗೆ ಕೇಂದ್ರ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.