
ಸದ್ದು ಮಾಡುತ್ತಿದೆ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅಭಿನಯದ ‘ಶ್ಯಾಮ್ ಸಿಂಗ ರಾಯ್’ ಟೀಸರ್
Team Udayavani, Nov 18, 2021, 11:23 AM IST

ಟಕ್ ಜಗದೀಶ್ ಚಿತ್ರದ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ಅವರ ಮತ್ತೊಂದು ಚಿತ್ರ ತೆರೆಗೆ ಸಿದ್ದವಾಗಿದೆ. ರಾಹುಲ್ ಸಂಕ್ರಿತ್ಯಾನ್ ನಿರ್ದೇಶನದ ‘ಶ್ಯಾಮ್ ಸಿಂಗ ರಾಯ್’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಚಿತ್ರ ಡಿಸೆಂಬರ್ 24ರಂದು ತೆರೆ ಕಾಣಲಿದೆ.
ಕೋಲ್ಕತ್ತಾದಲ್ಲಿನ ದೇವದಾಸಿ ಪದ್ದತಿ ಮತ್ತು ಈ ಪದ್ದತಿಯನ್ನು ತೊಡೆದುಹಾಕಲು ಜನರು ಹೇಗೆ ಹೋರಾಡುತ್ತಾರೆ ಎನ್ನುವ ಬಗ್ಗೆ ಟೀಸರ್ ನಲ್ಲಿ ತೋರಿಸಲಾಗಿದೆ.
ಚಿತ್ರದಲ್ಲಿ ನಾನಿ ಜೊತೆ ಸಾಯಿ ಪಲ್ಲವಿ, ಕೃತಿ ಶೆಟ್ಟಿ, ಮಡೊನ್ನಾ ಸೆಬಾಸ್ಟಿಯನ್, ಜಿಶ್ನು ಸೆನ್ ಗುಪ್ತಾ, ಮುರಳಿ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ಜಿಂಗಾ ಸತ್ಯದೇವ್ ಚಿತ್ರಕ್ಕೆ ಕಥೆ ಬರೆದಿದ್ದು, ನಿಹಾರಿಕಾ ಎಂಟರ್ಟೈನ್ ಮೆಂಟ್ ಬ್ಯಾನರ್ ನಡಿಯಲ್ಲಿ ವೆಂಕಟ್ ಬೊಯನಪಳ್ಳಿ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ:ಟಿ20 ಪಂದ್ಯದ ವೇಳೆ ಸಿರಾಜ್ ತಲೆಗೆ ಹೊಡೆದ ನಾಯಕ ರೋಹಿತ್: ವಿಡಿಯೋ ವೈರಲ್
ಚಿತ್ರವು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯಂತೆ ತೋರಿಸಲಾಗಿದೆ. ದೇವದಾಸಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಪದ್ದತಿಯನ್ನು ತೊಡೆದು ಹಾಕುವ ಮತ್ತೆ ಶ್ರೀಮಂತರ ವಿರುದ್ದ ಹೋರಾಡುವ ನಾಯಕನ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ.
ಚಿತ್ರ ನಾಲ್ಕು ಭಾಷೆಗಳನ್ನು ನಿರ್ಮಾಣವಾಗಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಲಂ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಕನ್ನಡ ಹಾಡುಗಳನ್ನು ಚಿತ್ರ ಸಾಹಿತಿ ಕವಿರಾಜ್ ಅವರು ಬರೆದಿದ್ದಾರೆ.
Khobordaarrrr
DECEMBER 24th ?#SSRTeaser #SSRonDEC24thTelugu – https://t.co/ctKMZcyFye
Tamil – https://t.co/icScRgswr9
Malayalam – https://t.co/sc35iChRzx
Kannada – https://t.co/s4qpUyQ37y#ShyamSinghaRoy pic.twitter.com/Sh03ubMg8Y— Nani (@NameisNani) November 18, 2021
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಾನು ಇಂಥ ಸಿನಿಮಾಗಳಿಗೆ..” The Kerala Story ಬಗ್ಗೆ ನಟ ಕಮಲ್ ಹಾಸನ್ ಹೇಳಿದ್ದೇನು?

Kerala Story; “ದಿ ಕೇರಳ ಸ್ಟೋರಿ” ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ ಆಸ್ಪತ್ರೆಗೆ ದಾಖಲು

Tollywood ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ವಾಸು ವಿಧಿವಶ

Ileana D’Cruz ತುಂಬು ಗರ್ಭಿಣಿ; ಮಗುವಿನ ತಂದೆ ಯಾರೆಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ!!

Nithyananda ನೊಂದಿಗೆ ನನ್ನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ: ನಟ ಅಶೋಕ್ ಕುಮಾರ್