Movies: ಮಲ್ಟಿಪ್ಲೆಕ್ಸ್‌ ನಲ್ಲಿ ಈ ದಿನ ಯಾವುದೇ ಸಿನಿಮಾ ನೋಡಿ ಟಿಕೆಟ್‌ ಬೆಲೆ 99 ರೂ. ಮಾತ್ರ

ಯಾವೆಲ್ಲಾ ಸಿನಿಮಾಗಳಿಗೆ ಲಾಭವಾಗಬಹುದು..?

Team Udayavani, Sep 21, 2023, 5:14 PM IST

Movies: ಮಲ್ಟಿಪ್ಲೆಕ್ಸ್‌ ನಲ್ಲಿ ಈ ದಿನ ಯಾವುದೇ ಸಿನಿಮಾ ನೋಡಿ ಟಿಕೆಟ್‌ ಬೆಲೆ 99 ರೂ. ಮಾತ್ರ

ಮುಂಬಯಿ: ಕಳೆದ ವರ್ಷ 75 ರೂಪಾಯಿಗೆ ಸಿನಿಮಾ ಟಿಕೆಟ್‌ ಮಾರಾಟ ಮಾಡಿ ʼರಾಷ್ಟ್ರೀಯ ಸಿನಿಮಾ ದಿನʼವನ್ನು ವಿಭಿನ್ನವಾಗಿ ಆಚರಿಸಿದ್ದ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಈ ವರ್ಷ ಮತ್ತೆ ಅದೇ ಯೋಜನೆಯನ್ನು ಮುಂದುವೆರಸಲು ನಿರ್ಧರಿಸಿದೆ.

ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಗುರುವಾರ(ಸೆ.21 ರಂದು) ಈ ಬಗ್ಗೆ ಟ್ವೀಟ್‌ ಮಾಡಿದ್ದು, ಅಕ್ಟೋಬರ್ 13, 2023 ರಂದು ಆಚರಿಸಲಾಗುವ ʼರಾಷ್ಟ್ರೀಯ ಸಿನಿಮಾ ದಿನʼದಂದು ಕೇವಲ 99 ರೂಪಾಯಿಗೆ ಟಿಕೆಟ್‌ ಪಡೆದು ಸಿನಿಮಾಗಳನ್ನು ವೀಕ್ಷಿಸಿ ಎಂದು ಹೇಳಿದೆ.

ಈ ದಿನ ಭಾರತದಾದ್ಯಂತ ಪ್ರಮುಖ ಸಿನಿಮಾ ಚೈನ್ಸ್ ಮತ್ತು ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್‌ಗಳ ಬೆಲೆ 99 ರೂಪಾಯಿ ಇರಲಿದೆ. 4000 ಕ್ಕೂ ಹೆಚ್ಚಿನ ಸಿನಿಮಾ ಸ್ಕ್ರೀನ್‌ ಗಳಲ್ಲಿ  99 ರೂಪಾಯಿಗೆ ಟಿಕೆಟ್‌ ಮಾರಾಟವಾಗಲಿದೆ.

ಪಿವಿಆರ್‌ ಐನಾಕ್ಸ್‌, ಸಿನೆಪೋಲಿಸ್, ಮಿರಾಜ್, ಸಿಟಿಪ್ರೈಡ್, ಏಷ್ಯನ್, ಮುಕ್ತಾ ಅಝ್,ವೇವ್‌, ಎಂ2ಕೆ,ಡಿಲೈಟ್‌ ಸೇರಿದಂತೆ ಅನೇಕ ಮಲ್ಟಿಪ್ಲೆಕ್ಸ್‌ ಗಳಲ್ಲಿ ʼರಾಷ್ಟ್ರೀಯ ಸಿನಿಮಾʼ ದಿನದಂದು 99 ರೂಪಾಯಿಗೆ ಟಿಕೆಟ್‌ ಸೇಲ್‌ ಮಾಡಲಾಗುತ್ತದೆ. ಇದರೊಂದಿಗೆ ಕೆಲ ಹೆಚ್ಚುವರಿ ಆಫರ್‌ ಗಳು ಇರಬಹುದು. ಅದನ್ನು ಆಯಾ ಮಲ್ಟಿಪ್ಲೆಕ್ಸ್ ಗಳು ಅವರ ಸೋಶಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಬಹುದೆಂದು ಹೇಳಿದೆ.

ಕಳೆದ ವರ್ಷ ರಾಷ್ಟ್ರೀಯ ಸಿನಿಮಾ ದಿನಕ್ಕೆ 65 ಲಕ್ಷ ಟಿಕೆಟ್‌ ಗಳು ಮಾರಾಟವಾಗಿತ್ತು. ನೂರಾರು ಥಿಯೇಟರ್‌ ಗಳು ಮೊದಲ ಬಾರಿ ಹೌಸ್‌ ಫುಲ್‌ ಆಗಿದ್ದರ ಬಗ್ಗೆ ವರದಿ ಆಗಿದ್ದವು. ಅದೇ ಯಶಸ್ಸಿನ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ಈ ಪ್ರಯೋಗವನ್ನು ಮಾಡಲು ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಮುಂದಾಗಿದೆ.

ಯಾವೆಲ್ಲಾ ಸಿನಿಮಾಗಳಿಗೆ ಲಾಭವಾಗಬಹುದು..?  ಅಕ್ಟೋಬರ್‌ 13 ರಂದು ಹಿಂದಿ, ತೆಲುಗು, ತಮಿಳು ಸೇರಿದಂತೆ ಇತರ ಸಿನಿಮಾರಂಗದಲ್ಲಿ ಯಾವುದೇ ಪ್ರಮುಖವಾದ ಸಿನಿಮಾಗಳು ರಿಲೀಸ್‌ ಆಗುತ್ತಿಲ್ಲ. ಆದರೆ ಅದರ ಹಿಂದಿನ ಕೆಲ ವಾರಗಳಲ್ಲಿ ದೊಡ್ಡ ಸಿನಿಮಾಗಳು ತೆರೆ ಕಾಣಲಿದೆ. ಮುಖ್ಯವಾಗಿ ವಿವೇಕ್‌ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್‌ ವಾರ್‌ʼ, (ಸೆ.28 ರಂದು ತೆರೆಗೆ),ʼ ಫುಕ್ರೆ 3ʼ (ಸೆ.28 ರಂದು ತೆರೆಗೆ), ಅಕ್ಷಯ್‌ ಕುಮಾರ್‌ ಅವರ ʼ ಮಿಷನ್ ರಾಣಿಗಂಜ್ʼ(ಅ.6 ರಂದು ತೆರೆಗೆ), ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ “800” ಸಿನಿಮಾ ಕೂಡ ಅ. 6ರಂದು ರಿಲೀಸ್‌ ಆಗಲಿದೆ. ಇದರೊಂದಿಗೆ ವಿಜಯ್‌ ಆಂಟೋನಿ ಅವರ “ರಥಂ” ಸಿನಿಮಾ ಕೂಡ ಅ.6 ರಂದು ರಿಲೀಸ್‌ ಆಗಲಿದೆ.

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.