

Team Udayavani, Jan 7, 2020, 10:36 AM IST
“ದಯವಿಟ್ಟು ಕ್ಷಮಿಸಿ…’ – ಹೀಗೆ ಕ್ಷಮೆ ಕೇಳಿರೋದು “ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್. ಅಷ್ಟಕ್ಕೂ ಅವರು ಕ್ಷಮೆ ಕೇಳಲು ಕಾರಣ. ಯಶ್ ಬರ್ತ್‌ಡೇಗೆ ಟೀಸರ್ ಬಿಡುಗಡೆ ಯಾಗದಿರುವುದು.
ಹೌದು, ಜನವರಿ 8 ರಂದು ಯಶ್ ಬರ್ತ್ ಡೇ. ಹಾಗಾಗಿ, ಅಂದು “ಕೆಜಿಎಫ್ 2′ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ ಎಂಬ ಸುದ್ದಿ ಇತ್ತು. ಆದರೆ, ಯಶ್ ಹುಟ್ಟುಹಬ್ಬದ ದಿನ “ಕೆಜಿಎಫ್ 2′ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿಲ್ಲ. ಯಶ್ ಅಭಿಮಾನಿಗಳು ಟೀಸರ್ ಬಿಡುಗಡೆಯಾಗಲಿದೆ ಎಂಬ ಖುಷಿಯಲ್ಲಿದ್ದರು. ಆದರೆ, ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿಯನ್ನು ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಪ್ರಶಾಂತ್ ನೀಲ್ ತಮ್ಮ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
“ಕೆ.ಜಿ.ಎಫ್ 2′ ಚಿತ್ರದ ಟೀಸರ್ ಜನವರಿ 8 ರಂದು ಬಿಡುಗಡೆ ಆಗುತ್ತಿಲ್ಲ. ಯಾಕಂದರೆ, ಜನವರಿ 6 ರವರೆಗೂ ಶೂಟಿಂಗ್ ನಡೆಯಲಿದೆ. ನಾವೆಲ್ಲರೂ ವಾಪಸ್ ಬರುವುದೇ ಜನವರಿ 7 ರಂದು. “ಕೆ.ಜಿ.ಎಫ್ 2′ ಬಗ್ಗೆ ನೀವೆಲ್ಲ ತೋರಿಸುತ್ತಿರುವ ಪ್ರೀತಿ ಮತ್ತು ನಿರೀಕ್ಷೆ ತುಂಬಾ ದೊಡ್ಡದು. ಹೀಗಾಗಿ, ಚಿತ್ರದ ಔಟ್ ಕಮ್ ಬಗ್ಗೆ ನಾವು ರಾಜಿ ಆಗುವುದಿಲ್ಲ. ನಿಮಗೆ ಅತ್ಯುತ್ತಮವಾದುದ್ದನ್ನು ನೀಡಲು ನಾವು ಮುಂದಾಗಿದ್ದೇವೆ. ದಯವಿಟ್ಟು ಕ್ಷಮಿಸಿ’ ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ.
ಬರ್ತ್‌ಡೇ ಟೀಸರ್ ಬದಲು ಯಶ್ ಅವರ ಹುಟ್ಟುಹಬ್ಬದ ದಿನ “ಕೆ.ಜಿ.ಎಫ್ 2′ ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ ಆಗಲಿದೆ ಎಂಬುದನ್ನು ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಸ್ಪಷ್ಟನೆಗೆ ಯಶ್ ಅಭಿಮಾನಿಗಳು ಫುಲ್ ಗರಂ ಆಗಿರು ವುದೂ ಉಂಟು. ಕಾರಣ, ಯಶ್ ಹುಟ್ಟುಹಬ್ಬಕ್ಕೆ ಜೋರು ತಯಾರಿ ಮಾಡಿಕೊಂಡಿರುವ ಅಭಿಮಾನಿಗಳು, ಅಂದು “ಕೆಜಿಎಫ್ 2′ ಚಿತ್ರದ ಟೀಸರ್ ನೋಡುವ ಕಾತುರದಲ್ಲಿದ್ದರು. ಆದರೆ, ಟೀಸರ್ ಬರುತ್ತಿಲ್ಲ ಎಂಬ ವಿಷಯ ಕೇಳಿದ ಅನೇಕ ಅಭಿಮಾನಿಗಳು, ಟ್ವೀಟ್ ಮೂಲಕ ಕಾಮೆಂಟ್ ಮಾಡುತ್ತಿದ್ದಾರೆ.
“ಯಶ್ ಅಭಿಮಾನಿಗಳಿಗೆ ಈ ರೀತಿ ನಿರಾಸೆ ಮೂಡಿಸಿದ್ದು ಸರಿಯಲ್ಲ’ ಎಂದು ಹಲವು ಬರೆದುಕೊಂಡರೆ, ಇನ್ನೂ ಕೆಲವರು ಏನಾದರೂ ಮಾಡಿ, ಟೀಸರ್ ಬಿಡುಗಡೆ ಮಾಡಲೇಬೇಕು ಎಂದು ಒತ್ತಾಯವನ್ನೂ ಮಾಡಿದ್ದಾರೆ. ಅದೇನೆ ಇರಲಿ, ಯಶ್ ಬರ್ತ್‌ಡೇ ಆಚರಿಸಲು ಅಣಿಯಾಗುತ್ತಿರುವ ಅಭಿಮಾನಿಗಳು, ನಾಯಂಡಹಳ್ಳಿ ಸಮೀ ಪದ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಅದ್ಧೂರಿ ಹುಟ್ಟುಹಬ್ಬ ಆಚರಿಸಲು ವೇದಿಕೆ ಸಿದ್ಧ ಪಡಿಸುತ್ತಿದ್ದಾರೆ. ಐದು ಸಾವಿರ ಕೆ.ಜಿ ಕೇಕ್ ನಿರ್ಮಿಸಿ, ಕತ್ತರಿಸುವ ತಯಾರಿಯೂ ಜೋರಾಗಿದ್ದು, ಅಂದು ಸುಮಾರು 20 ಸಾವಿರ ಅಭಿಮಾನಿಗಳು ಅಲ್ಲಿ ಸೇರುವ ನಿರೀಕ್ಷೆ ಇದೆ. ಅಖೀಲ ಭಾರತ ಯಶ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಬರ್ತ್‌ಡೇಕಾರ್ಯಕ್ರಮ ನಡೆಯಲಿದ್ದು, ಅಂದು ಬೃಹತ್ ಎತ್ತರದ ಕಟೌಟ್ ಹಾಕಲು ನಿರ್ಧರಿಸಲಾಗಿದೆ.
Ad
ಶ್ರೀಲೀಲಾ – ರಣ್ವೀರ್ ಜತೆಗಿನ ಪ್ರಾಜೆಕ್ಟ್‌ಗೆ ಅಟ್ಲಿ ಕುಮಾರ್ ಆ್ಯಕ್ಷನ್ ಕಟ್
ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮನೆಯಿಂದ 4 ಲಕ್ಷ ರೂ. ಕಳ್ಳತನ: ಮನೆ ಕೆಲಸದವನ ವಿರುದ್ಧ FIR
Buzz: ಶ್ರೀಕೃಷ್ಣದೇವರಾಯನ ಬಯೋಪಿಕ್‌ನಲ್ಲಿ ರಿಷಬ್; ಬಾಲಿವುಡ್ ನಿರ್ದೇಶಕ ಆ್ಯಕ್ಷನ್ ಕಟ್
Bollywood: ಸೈಫ್ ಬಳಿಕ ಕರೀನಾ ಮೇಲೂ ಆಗಿತ್ತಂತೆ ದಾಳಿ – ಶಾಕಿಂಗ್ ಸಂಗತಿ ರಿವೀಲ್
ರವಿಶಂಕರ್ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ
Chamarajanagar: ಹುಲಿಗಳ ಸಾ*ವು ಪ್ರಕರಣದಲ್ಲಿ ಕರ್ತವ್ಯಲೋಪ… ಡಿಸಿಎಫ್ ಚಕ್ರಪಾಣಿ ಅಮಾನತು
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
You seem to have an Ad Blocker on.
To continue reading, please turn it off or whitelist Udayavani.