
ಆಮಿರ್, ಹೃತಿಕ್ ಆಯ್ತು ಈಗ ಶಾರುಖ್ ಖಾನ್ ʼಪಠಾಣ್ʼಗೂ ತಟ್ಟಿತು boycott ಬಿಸಿ
ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ ಚಿತ್ರವನ್ನು ನೋಡಿದ ಬಳಿಕ, ಸಿನಿಮಾಕ್ಕೆ ಬೆಂಬಲ ಕೊಟ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು.
Team Udayavani, Aug 16, 2022, 5:13 PM IST

ಮುಂಬಯಿ: ಬಾಲಿವುಡ್ ನಲ್ಲಿ ಯಾವ ಸಿನಿಮಾ ಬಂದರೂ ಅವು ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಲೆಕ್ಷನ್ ಮಾಡುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಆಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ, ಅಕ್ಷಯ್ ಕುಮಾರ್ ನಟನೆಯ ʼರಕ್ಷಾ ಬಂಧನ್ʼ ಕೂಡ ಹೆಚ್ಚೇನೂ ಕಮಾಲ್ ಮಾಡಿಲ್ಲ.
ರಿಲೀಸ್ ಗೂ ಮುನ್ನ ವಿವಾದದ ಕೇಂದ್ರ ಬಿಂದುವಾಗಿದ್ದ ಆಮಿರ್ ಖಾನ್ ʼಲಾಲ್ ಸಿಂಗ್ ಚಡ್ಡಾʼ ಬಾಯ್ ಕಾಟ್ ಅಭಿಯಾನಕ್ಕೆ ತುತ್ತಾಗಿ ಮುಗ್ಗರಿಸಿತು. ಚಿತ್ರದ ಬಗ್ಗೆ ಒಂದಿಷ್ಟು ಪಾಸಿಟಿವ್ ವಿಮರ್ಶೆ ಕೇಳಿ ಬಂದರೂ ಅವು ಬಾಯ್ ಕಾಟ್ ಧ್ವನಿಯಲ್ಲಿ ಕಳೆದು ಹೋಯಿತು.
ನಟ ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ ಚಿತ್ರವನ್ನು ನೋಡಿದ ಬಳಿಕ, ಸಿನಿಮಾಕ್ಕೆ ಬೆಂಬಲ ಕೊಟ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದನ್ನೇ ವಿಷಯವಾಗಿಸಿಕೊಂಡ ಕೆಲವರು ಹೃತಿಕ್ ರೋಷನ್ ರನ್ನು ಬಾಯ್ಕಾಟ್ ಅಭಿಯಾನದ ವಸ್ತುವನ್ನಾಗಿ ಮಾಡಿದೆ. ಅವರ ಮುಂದಿನ ಚಿತ್ರ ʼವಿಕ್ರಂ ವೇದʼವನ್ನು ನಿಷೇಧಿಸಿ, ಚಿತ್ರವನ್ನು ವೀಕ್ಷಿಸಬೇಡಿ ಎಂದು ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಇದರ ಮುಂದುವರೆದ ಭಾಗವೆಂಬಂತೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಗೂ ಬಾಯ್ಕಾಟ್ ಬಿಸಿ ತಟ್ಟಿದೆ. ಅವರ ಮುಂದಿನ ಚಿತ್ರ ʼಪಠಾಣ್ʼ ನಿಷೇಧಿಸಿಯೆಂದು ಅಭಿಯಾನ ಶುರುವಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಕೂಡ ನಟಿಸುತ್ತಿದ್ದಾರೆ. ಪಠಾಣ್ ನೋಡಬೇಡಿ ಪ್ರಭಾಸ್ ಅವರ ʼಆದಿಪುರುಷ್ʼ ಚಿತ್ರವನ್ನು ಬೆಂಬಲಿಸಿಯೆಂದು ಕೆಲವರು ಬಾಯ್ಕಾಟ್ ಕೂಗಿಗೆ ಧ್ವನಿಯಾಗಿದ್ದಾರೆ.
ಯಾವ ಕಾರಣಕ್ಕೆ ಚಿತ್ರವನ್ನು ಬಾಯ್ಕಾಟ್ ಮಾಡಬೇಕೆಂದು ನಿರ್ದಿಷ್ಟವಾಗಿ ಎಲ್ಲೂ ಹೇಳಿಲ್ಲ. ಕೆಲವರು ಧರ್ಮದ ಕಾರಣವನ್ನಿಟ್ಟುಕೊಂಡು ಚಿತ್ರವನ್ನು ಬಾಯ್ ಕಾಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ಎಲ್ಲಾ ಅಂಶ ಶಾರುಖ್ ಚಿತ್ರಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Big B: ಸೊಸೆ ಐಶ್ವರ್ಯಾರನ್ನು ಅನ್‌ಫಾಲೋ ಮಾಡಿದ ಬಿಗ್‌ಬಿ?

Lakshmika Sajeevan: ಹಠಾತ್ ಹೃದಯಾಘಾತ; 24 ರ ಹರೆಯದಲ್ಲಿ ಖ್ಯಾತ ನಟಿ ಕೊನೆಯುಸಿರು

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ