
ಆಲ್ ಟೈಮ್ ರೆಕಾರ್ಡ್: ಮೊದಲ ದಿನ ಗಳಿಸಿದ್ದೆಷ್ಟು ಕಿಂಗ್ ಖಾನ್ ʼಪಠಾಣ್ʼ ಸಿನಿಮಾ
Team Udayavani, Jan 26, 2023, 10:37 AM IST

ಮುಂಬಯಿ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರ ʼಪಠಾಣ್ʼ ಸಿನಿಮಾಕ್ಕೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಕೇಳಿ ಬರುತ್ತಿದೆ. ನಿರೀಕ್ಷೆಯಂತೆ ಶಾರುಖ್ ಫ್ಯಾನ್ಸ್ ಗಳು ಮಾರ್ನಿಂಗ್ ಶೋಗೂ ಮೊದಲು ಸಾಲುಗಟ್ಟಿ ನಿಂತು, ಕೇಕ್ ಕತ್ತರಿಸಿ, ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.
ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾದ ಬಗ್ಗೆ ಹಾಗೂ ಶಾರುಖ್ ನಟನೆಯ ಬಗ್ಗೆ ಫಿದಾ ಆಗಿದ್ದಾರೆ. 100 ಕ್ಕೂ ಹೆಚ್ಚಿನ ದೇಶದಲ್ಲಿ ರಿಲೀಸ್ ಆದ ಸಿನಿಮಾ ಫಸ್ಟ್ ಡೇ ಗಳಿಸಿದ್ದೆಷ್ಟು ಎನ್ನುವ ರಿಪೋರ್ಟ್ ಹೊರ ಬಿದ್ದಿದೆ.
ಅಡ್ವಾನ್ಸ್ ಬುಕಿಂಗ್ ನಲ್ಲಿ ಕೆಜಿಎಫ್ -2 ಸಿನಿಮಾವನ್ನೇ ಮೀರಿಸಿದ ʼಪಠಾಣ್ʼ ಭಾರತದಲ್ಲಿ ಮೊದಲ ದಿನವೇ 54 ಕೋಟಿ ರೂ. ಗಳಿಸಿದ್ದು, ಆಲ್ ಟೈಮ್ ರೆಕಾರ್ಡ್ ಮಾಡಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.
ಮೊದಲ ದಿನವೇ ಆಸ್ಟ್ರೇಲಿಯಾದಲ್ಲಿ $600k ( 4,89,18,300.00 ರೂ.) ಮತ್ತು USA ನಲ್ಲಿ $1 ಮಿಲಿಯನ್ ( ಬುಧವಾರ ಮಧ್ಯಾಹ್ನದವರೆಗೆ) ಕಲೆಕ್ಷನ್ ಮಾಡಿದೆ ಎಂದಿದ್ದಾರೆ.
ವರ್ಲ್ಡ್ ಬಾಕ್ಸ್ ಆಫೀಸ್ ಪ್ರಕಾರ ಎರಡನೇ ದಿನ ಪಠಾಣ್ ಸಿನಿಮಾ ಅಂದಾಜು 175 ಕೋಟಿ ರೂ. ಗಳಿಸಬಹುದು ಎಂದು ಊಹಿಸಿದೆ. ಪಿವಿಆರ್ ನಲ್ಲಿ ಮೊದಲ ದಿನ 11:40 ಕೋಟಿ, ಐನಾಕ್ಸ್ ನಲ್ಲಿ 8.75 ಕೋಟಿ, ಸಿನಿಪೋಲಿಸ್ 4.90 ಕೋಟಿ ರೂ.ಗಳಿಸಿದೆ ಎಂದು ಮತ್ತೊಬ್ಬ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಸಿದ್ದಾಥ್ ಆನಂದ್ ನಿರ್ದೇಶನದ ಸಿನಿಮಾದಲ್ಲಿ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಜೊತೆಗೆ ಜಾನ್ ಅಬ್ರಹಾಂ ಕಾಣಿಸಿಕೊಂಡಿದ್ದಾರೆ.
#Pathaan Day 1 India 🇮🇳 opening ₹ 54 Crs Nett..
A new All-time record.. 🔥
Early estimates..
— Ramesh Bala (@rameshlaus) January 26, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್ ವಿರುದ್ದ ನೆಟ್ಟಿಗರು ಗರಂ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್

ಐಟಂ ಡ್ಯಾನ್ಸ್ ಮಾಡ್ಬೇಡ… ʼಊ ಅಂಟವಾʼ ಹಾಡಿಗೆ ಸಮಂತಾ ಆಪ್ತರಿಂದಲೇ ವ್ಯಕ್ತವಾಗಿತ್ತು ವಿರೋಧ

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು