‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?
Team Udayavani, Jan 21, 2021, 6:38 PM IST
ಮುಂಬೈ: ಬಿ ಟೌನ್ ಅಂಗಳದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಪಠಾಣ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ನಡುವೆ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ಮೇಲೆ ಹಲ್ಲೆಯಾಗಿದೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕ ಸಿದ್ದಾರ್ಥ್ ಆನಂದ್ ಮತ್ತು ಸಹಾಯಕ ನಿರ್ದೇಶಕರೊಬ್ಬರ ನಡುವೆ ಕಲಹ ಉಂಟಾಗಿದ್ದು. ಇಬ್ಬರೂ ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ. ಈ ಸಮಯದಲ್ಲಿ ನಿರ್ದೇಶಕರ ಮೇಲೆ ಹಲ್ಲೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ ಈ ಕುರಿತು ಚಿತ್ರತಂಡ ಮಾಹಿತಿ ನೀಡಿದ್ದು, ಚಿತ್ರೀಕರಣದ ವೇಳೆ ಯಾವುದೆ ಗಲಾಟೆಗಳು ನಡೆದಿಲ್ಲ, ಇದೊಂದು ಆಧಾರ ರಹಿತವಾದ ಸುದ್ದಿಯಾಗಿದೆ. ನಿರ್ದೇಶಕ ಸಿದ್ದಾರ್ಥ್ ಆನಂದ್ ಹಾಗೂ ಸಹಾಯಕ ನಿರ್ದೇಶಕರು ಬಹಳಾ ವರ್ಷಗಳಿಂದ ಆತ್ಮೀಯರು ಮತ್ತು ಅವರಿಬ್ಬರೂ ಪರಸ್ಪರ ಸಹೋದರರ ರೀತಿ ಇದ್ದವರು ಎಂದು ತಿಳಿಸಿದೆ.
ಇದನ್ನೂ ಓದಿ:“ಪ್ರೋಟೀನ್ ಯುಕ್ತ ಆಹಾರ ಸೇವನೆ : ಪಥ್ಯೆಯಿಲ್ಲದೆ ಬೊಜ್ಜು ಕರಗಲು ಸಾಧ್ಯ”
ಹಾಗಾದರೆ ನಡೆದಿದ್ದೇನು?
ಚಿತ್ರತಂಡದ ಮೂಲಗಳ ಪ್ರಕಾರ ಚಿತ್ರೀಕರಣದ ಸಮಯದಲ್ಲಿ ಒಬ್ಬ ಲೈಟ್ ಮ್ಯಾನ್ ಗೆ ಗಾಯವಾಗಿತ್ತು. ಆದರೆ ಆತನಿಗೆ ಯಾವುದೇ ತೀವ್ರ ಗಾಯಗಳಾಗಿಲ್ಲ. ಈ ಕುರಿತಾಗಿ ಚಿತ್ರತಂಡದ ವ್ಯಕ್ತಿಯೋರ್ವ ವಿಡಿಯೋ ಸಂದೇಶದ ಮೂಲಕ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಿದ್ದ. ಈ ವರ್ತನೆಯನ್ನು ನಿರ್ದೇಶಕರು ವಿರೋಧಿಸಿದ್ದರು ಎನ್ನಲಾಗಿದೆ.
ನಿರ್ದೇಶಕರ ಮಾತಿಗೆ ಬೆಲೆ ನೀಡದ ವ್ಯಕ್ತಿ ಅವರೊಂದಿಗೆ ಗಲಾಟೆಗೆ ಬಂದಾಗ ನಿರ್ದೇಶಕರು ಆತನಲ್ಲಿ ಮೂಬೈಲ್ ಪೋನ್ ಅನ್ನು ನೀಡಿ ಸೆಟ್ ನಿಂದ ಹೊರನಡೆಯುವಂತೆ ತಿಳಿಸಿದ್ದರು. ಆಗ ಆ ವ್ಯಕ್ತಿ ಮತ್ತೆ ಜಗಳಕ್ಕೆ ಬಂದ ಕಾರಣ ಭದ್ರತಾ ಸಿಬ್ಬಂದಿಗಳ ಮೂಲಕ ಸೆಟ್ ನಿಂದ ಹೊರಗೆ ಕಳುಹಿಸಲಾಯಿತು. ಈ ಘಟನೆಯಿಂದ ನಿರ್ದೇಶಕರು ನೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು
ಕಳೆದ ಸುಮಾರು ಎರಡು ವರ್ಷಗಳ ನಂತರ ನಟ ಶಾರೂಕ್ ಖಾನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿದ್ದು, ನಾಯಕಿಯಾಗಿ ದೀಪಿಕಾ ಬಣ್ಣ ಹಚ್ಚುತ್ತಿದ್ದಾರೆ. ನಟ ಜಾನ್ ಅಬ್ರಾಹಂ ನೆಗೆಟೀವ್ ರೋಲ್ ನಲ್ಲಿ ತೆರಮೇಲೆ ಬರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಾಸನದ ಮಗುವನ್ನು 5 ಲಕ್ಷ ರೂ. ಗೆ ಕಾರ್ಕಳದಲ್ಲಿ ಮಾರಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಇಬ್ಬರು ಒಪ್ಪಿದ್ದಾರೆ, ಅದು ಅತ್ಯಾಚಾರವಾಗಲ್ಲ: ಜಾರಕಿಹೊಳಿ ಬೆಂಬಲಕ್ಕೆ ರೇಣುಕಾಚಾರ್ಯ
ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ
ತಮಿಳುನಾಡು: ನೀತಿ ಸಂಹಿತೆ ಉಲ್ಲಂಘನೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಬಾಂಡ್ v/s ಈಕ್ವಿಟಿ: ಮುಂಬಯಿ ಷೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 440 ಅಂಕ ಕುಸಿತ