
Ashish Vidyarthi: 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ʼಖಳನಟʼ ಆಶಿಶ್ ವಿದ್ಯಾರ್ಥಿ
Team Udayavani, May 25, 2023, 5:08 PM IST

ಪಶ್ಚಿಮ ಬಂಗಾಳ: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ತನ್ನ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.
ಜೂನ್ 19,1962 ರಲ್ಲಿ ದೆಹಲಿ ಹುಟ್ಟಿದ ಅವರು 1986ರಲ್ಲಿ ನಟನಾ ಲೋಕಕ್ಕೆ ಕಾಲಿಟ್ಟರು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್, ಒಡಿಯಾ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ ಸುಮಾರು 11 ಭಾಷೆಯಲ್ಲಿ 300 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಆಶಿಶ್ ನಟಿಸಿದ್ದಾರೆ.
1995ರಲ್ಲಿ ಬಂದ ʼ ದ್ರೋಹ್ಕಾಲ್ʼ ಸಿನಿಮಾದಲ್ಲಿನ ಅವರ ಪೋಷಕ ನಟನೆಗಾಗಿ ಆಶಿಶ್ ಅವರಿಗೆ ನ್ಯಾಷನಲ್ ಅವಾರ್ಡ್ ಸಿಕ್ಕಿತ್ತು.
ಬಹುತೇಕ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಅಸ್ಸಾಂ ಮೂಲದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ತನ್ನ 60ನೇ ವಯಸ್ಸಿನಲ್ಲಿ ವರಿಸಿದ್ದಾರೆ.
ಆತ್ಮೀಯರ ಸಮ್ಮುಖದಲ್ಲಿ ಕೋಲ್ಕತ್ತಾದಲ್ಲಿ ಈ ಮದುವೆ ಸಮಾರಂಭ ನೆರವೇರಿದ್ದು, ವಧು – ವರರ ಸ್ನೇಹಿತರು ಪಾಲ್ಗೊಂಡಿಗೊಂಡಿದ್ದಾರೆ.
ನಟ ಈ ಹಿಂದೆ ಆಶಿಶ್ ಗಾಯಕಿ ಮತ್ತು ರಂಗಭೂಮಿ ಕಲಾವಿದ ರಾಜೋಶಿ ವಿದ್ಯಾರ್ಥಿ ಅವರನ್ನು ವಿವಾಹವಾಗಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10ಸಾವಿರ ಆದಿಪುರುಷ್ ಟಿಕೆಟ್‌ಗಳನ್ನು ಫ್ರೀಯಾಗಿ ನೀಡಲು ಮುಂದಾದ ಕಾಶ್ಮೀರ್ ಫೈಲ್ಸ್ ನಿರ್ಮಾಪಕ

ದೇಗುಲದ ಮುಂದೆ ʼಆದಿಪುರುಷ್ʼ ನಟಿಗೆ ಮುತ್ತು ಕೊಟ್ಟ ನಿರ್ದೇಶಕ: ಬಿಜೆಪಿ ನಾಯಕ ಕೆಂಡಾಮಂಡಲ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್ – ಸ್ವರಾ ಭಾಸ್ಕರ್ ದಂಪತಿ: Baby Bump ಫೋಟೋ ವೈರಲ್

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್ ದೇವರಿಗೆ ಮೀಸಲು

Gufi Paintal: ʼಮಹಾಭಾರತʼದ ʼಶಕುನಿ ಮಾಮಾʼ ಖ್ಯಾತಿಯ ನಟ ಗುಫಿ ಪೈಂಟಲ್ ನಿಧನ
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
