
Salaar: ಈ ವರ್ಷ ರಿಲೀಸ್ ಆಗಲ್ಲ ಪ್ಯಾನ್ ಇಂಡಿಯಾ ʼಸಲಾರ್ʼ?: ಕಾರಣವೇನು?
Team Udayavani, Sep 21, 2023, 6:22 PM IST

ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ ಅವರ ʼಸಲಾರ್ʼ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರ ಸಿನಿಮಾ ತೆರೆಗೆ ಬರಬೇಕಿತ್ತು.
ಸೆ.28 ರಂದು ʼಸಲಾರ್ʼ ಸಿನಿಮಾ ರಿಲೀಸ್ ಆಗಲ್ಲ ಎಂದು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿತ್ತು. ʼಸಲಾರ್ʼ ಸಿನಿಮಾಕ್ಕೆ ನೀವು ನೀಡುತ್ತಿರುವ ಬೆಂಬಲವನ್ನು ನಾವು ಶ್ಲಾಘಿಸುತ್ತೇವೆ. ಅನಿವಾರ್ಯ ಕಾರಣಗಳಿಂದಾಗಿ ಸಾವು ʼಸಲಾರ್ʼ ಸಿನಿಮಾವನ್ನು ಸೆ.28 ಕ್ಕೆ ರಿಲೀಸ್ ಮಾಡಲು ಆಗುತ್ತಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕ ಸಿನಿಮಾವನ್ನು ನಾವು ನೀಡಲು ಸಿದ್ದರಿದ್ದೇವೆ. ನಮ್ಮ ಈ ನಿರ್ಧಾರವನ್ನು ನೀವು ಗೌರವಿಸಿ, ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಸಿನಿಮಾವನ್ನು ಅತ್ಯುತ್ತಮ ರೀತಿಯಲ್ಲಿ ತೆರೆಗೆ ತರಲು ನಮ್ಮ ತಂಡ ಪ್ರಯತ್ನಿಸುತ್ತಿದೆ. ಹೊಸ ರಿಲೀಸ್ ಡೇಟ್ ಶೀಘ್ರದಲ್ಲಿ ಹೇಳಲಾಗುವುದೆಂದು ಹೊಂಬಾಳೆ ಟ್ವೀಟ್ ಮಾಡಿತ್ತು.
ಇನ್ನೇನು ಹೊಸ ರಿಲೀಸ್ ಡೇಟ್ ಗಣೇಶ ಹಬ್ಬಕ್ಕೆ ಅನೌನ್ಸ್ ಮಾಡುತ್ತಾರೆ ಅಂದುಕೊಂಡಿದ್ದ ಪ್ರೇಕ್ಷಕರಿಗೆ ನಿರಾಶೆಯಾಗಿದೆ. ಇದೀಗ ʼಸಲಾರ್ʼ ಸಿನಿಮಾ ರಿಲೀಸ್ ಡೇಟ್ ಮತ್ತಷ್ಟು ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಮಾಡಿರುವ ಟ್ವೀಟ್ ʼಸಲಾರ್ʼ ಗಾಗಿ ಕಾಯುತ್ತಿರುವವರಿಗೆ ಶಾಕ್ ನೀಡಿದೆ.
“ಟ್ರೇಡ್ ಪ್ರಕಾರ ಪ್ಯಾನ್ ಇಂಡಿಯಾ ʼಸಲಾರ್ʼ ಸಿನಿಮಾ ಈ ವರ್ಷ ಬಿಡಗಡೆ ಆಗುವ ಸಾಧ್ಯತೆಯಿಲ್ಲ. 2024 ರಂದು ಸಿನಿಮಾ ರಿಲೀಸ್ ಆಗಲಿದೆ. ಉತ್ತಮ ಗುಣಮಟ್ಟದಲ್ಲಿ ಸಿನಿಮಾ ಮೂಡಿಬರಲು ಚಿತ್ರತಂಡ ನಿರಂತರ ಪರಿಶ್ರಮ ಹಾಕುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ʼಸಲಾರ್ʼ ವಿಳಂಬಕ್ಕೆ ಕೆಲ ಕಾರಣಗಳಿವೆ ಎನ್ನಲಾಗುತ್ತಿದೆ. ಮುಖ್ಯವಾಗಿ ವಿಎಫ್ ಎಕ್ಸ್ ಕೆಲಸ ಬಾಕಿಯಿರುವುದರಿಂದಲೇ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಲು ಮುಖ್ಯ ಕಾರಣ ಎನ್ನಲಾಗಿದೆ.
ಆದರೆ ಪ್ರೇಕ್ಷಕರು ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬದಂದು ರಿಲೀಸ್ ಆಗುತ್ತದೆ ಎನ್ನುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಯಾವುದಕ್ಕೂ ಮುಂದಿನ ಅಪ್ಡೇಟ್ ವರೆಗೆ ಕಾದು ನೋಡಬೇಕಿದೆ.
ʼಸಲಾರ್ʼ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಶ್ರುತಿ ಹಾಸನ್, ಜಗಪತಿ ಬಾಬು, ತಿನ್ನು ಆನಂದ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
As per trade, Pan India Star #Prabhas‘ #Salaar is not looking at a release date this year.#SalaarCeaseFire is aiming at 2024 release.
The team is working tirelessly to meet the highest standards. They are making the final touches on the film and committed to delivering an… pic.twitter.com/UhxkiX45Tx
— Manobala Vijayabalan (@ManobalaV) September 21, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral ‘drunk’ video; ವದಂತಿಗಳಿಗೆ ತೆರೆ ಎಳೆದ ಸನ್ನಿ ಡಿಯೋಲ್

Ranbir Kapoor; ಬಾಕ್ಸ್ ಆಫೀಸ್ ನಲ್ಲಿ 500 ಕೋಟಿ ಕ್ಲಬ್ ನತ್ತ ಮುನ್ನುಗ್ಗುತ್ತಿರುವ ಅನಿಮಲ್

Chennai flood: ಜನಸಾಮಾನ್ಯರ ಜೊತೆ ಪ್ರವಾಹದಲ್ಲಿ ಸಿಲುಕಿದ ನಟ ಅಮೀರ್ ಖಾನ್, ವಿಷ್ಣು ವಿಶಾಲ್

Dinesh Phadnis: ಫಲಿಸದ ಚಿಕಿತ್ಸೆ… ‘CID’ ಖ್ಯಾತಿಯ ದಿನೇಶ್ ಫಡ್ನಿಸ್ ನಿಧನ

‘Animal’ box office: ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ʼಅನಿಮಲ್ʼ