Buzz: ಒಂದೇ ದಿನ ʼಸಲಾರ್-ಡಂಕಿʼ ರಿಲೀಸ್: ವರ್ಷಾಂತ್ಯಕ್ಕೆ ದೊಡ್ಡ ಬಾಕ್ಸ್ ಆಫೀಸ್ ದಂಗಲ್?
Team Udayavani, Sep 26, 2023, 11:08 AM IST
ಮುಂಬಯಿ: ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ʼಸಲಾರ್ʼ ರಿಲೀಸ್ ಡೇಟ್ ಯಾವಾಗ ಅನ್ನೋದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸೆ.28 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ʼಸಲಾರ್ʼ ದೊಡ್ಡ ಹಿಟ್ ಕೊಡುವ ನಿರೀಕ್ಷೆಯಿದೆ. ಚಿತ್ರದ ಟೀಸರ್ ನಿಂದ ʼಸಲಾರ್ʼ ಮತ್ತಷ್ಟು ಹೈಪ್ ಹೆಚ್ಚಿಸಿದೆ. ಇನ್ನೇನು ರಿಲೀಸ್ ಆಗಬೇಕು ಎನ್ನುವಾಗಲೇ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ ಆಗಿರುವುದು ಅಭಿಮಾನಿಗಳಿಗೆ ನಿರಾಸೆಯಾಗಿಸಿದೆ.
ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಶೀಘ್ರದಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತದೆ ಎಂದಿತ್ತು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ʼಸಲಾರ್ʼ ಇದೇ ವರ್ಷದ ಡಿಸೆಂಬರ್ 22 ರಂದು ರಿಲೀಸ್ ಆಗಲಿದೆ ಎನ್ನುವುದು ವೈರಲ್ ಆಗಿದೆ. ಆದರೆ ಹೊಂಬಾಳೆ ಫಿಲ್ಮ್ಸ್ ಈ ದಿನಾಂಕವನ್ನು ಇನ್ನು ಕೂಡ ಅಧಿಕೃತವಾಗಿ ಹೇಳಿಲ್ಲ.
ಒಂದು ವೇಳೆ ಅದೇ ದಿನ ಸಿನಿಮಾ ರಿಲೀಸ್ ಆದರೆ ಬಾಲಿವುಡ್ ಹಾಗೂ ಟಾಲಿವುಡ್ ಬಾಕ್ಸ್ ಆಫೀಸ್ ಸೇರಿ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಶಾರುಖ್ – ಪ್ರಭಾಸ್ ಬಾಕ್ಸ್ ಆಫೀಸ್ ದಂಗಲ್ ಉಂಟಾಗಲಿದೆ.
ಶಾರುಖ್ ಖಾನ್ – ರಾಜ್ ಕುಮಾರ್ ಹಿರಾನಿ ʼಡಂಕಿʼ ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೆ ರಿಲೀಸ್ ಮಾಡುವುದಾಗಿ ಶಾರುಖ್ ಖಾನ್ ಅವರೇ ಇತ್ತೀಚೆಗೆ ಹೇಳಿದ್ದರು. ಇದೇ ಡಿಸೆಂಬರ್ 22 ರಂದು ʼಡಂಕಿʼ ಸಿನಿಮಾವನ್ನು ರಿಲೀಸ್ ಮಾಡಲಿದ್ದೇವೆ ಎಂದು ಶಾರುಖ್ ಹೇಳಿದ್ದರು.
ʼಡಂಕಿʼ ಸಿನಿಮಾದಲ್ಲಿ ಈ ಸಿನಿಮಾದಲ್ಲಿ ತಾಪ್ಸಿ ಪನ್ನು , ದಿಯಾ ಮಿರ್ಜಾ, ಬೊಮನ್ ಇರಾನಿ, ಧರ್ಮೇಂದ್ರ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಸಲಾರ್ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ರಾಮಚಂದ್ರರಾಜು, ಶ್ರೀಯಾ ರೆಡ್ಡಿ, ಈಶ್ವರಿ ರಾವ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?