
‘ಆಶಿಕಿ ಆ ಗಯಿ’ ಎಂದ ಪ್ರಭಾಸ್-ಪೂಜಾ: ಟ್ರೆಂಡಿಂಗ್ ನಲ್ಲಿದೆ ರಾಧೆ ಶ್ಯಾಮ್ ಚಿತ್ರದ ಹೊಸ ಹಾಡು
Team Udayavani, Dec 1, 2021, 2:06 PM IST

ಭಾರೀ ನಿರೀಕ್ಷೆ ಹುಟ್ಟಿಸಿರುವ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್’ ಚಿತ್ರದ ಹೊಸ ಹಾಡೊಂದು ಇಂದು ಬಿಡುಗಡೆಯಾಗಿದೆ. ಚಿತ್ರತಂಡ ಇಂದು ‘ಆಶಿಕಿ ಆ ಗಯಿ’ ಎಂಬ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಸದ್ಯ ಟ್ರೆಂಡಿಂಗ್ ನಲ್ಲಿದೆ.
‘ನಾಳೆ ಎನ್ನುವುದೇ ಇಲ್ಲ ಎನ್ನುವಂತೆ ಪ್ರೀತಿಸಿ” ಎಂದು ಬರೆದುಕೊಂಡು ಯುವಿ ಕ್ರಿಯೇಷನ್ಸ್ ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಇದು ಅಪ್ಪಟ ಪ್ರೇಮಕಾವ್ಯವಾಗಿದ್ದು, ಮಿಥೂನ್ ಅವರು ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಈ ಸುಮಧರ ಹಾಡನ್ನು ಅರಿಜಿತ್ ಸಿಂಗ್ ಹಾಡಿದ್ದಾರೆ.
ಇದನ್ನೂ ಓದಿ:ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ
ಹಾಡಿನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಸಖತ್ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದ್ದು, ಹಾಡಿನ ಸೊಬಗಿಗೆ ಮತ್ತಷ್ಟು ಮೆರುಗು ನೀಡುತ್ತಿದೆ.
‘ರಾಧೆ ಶ್ಯಾಮ್’ ಚಿತ್ರವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಟಿ ಸಿರೀಸ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಭೂಷಣ್ ಕುಮಾರ್, ವಂಸಿ ಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಾಪತಿ ಮತ್ತು ಪ್ರಸೀಧ ಉಪ್ಪಲಾಪತಿ ನಿರ್ಮಿಸಿದ್ದಾರೆ. ಚಿತ್ರ ಮುಂದಿನ ವರ್ಷದ ಜನವರಿ 14ರಂದು ಬಿಡುಗಡೆ ಕಾಣುತ್ತಿದೆ.
Love like there’s no tomorrow. Presenting the first from #MusicalOfAges #Radheshyam, #AashiquiAaGayi by @mithoon11 & @arijitsinghhttps://t.co/p7PBccMz8v
Starring #Prabhas & @hegdepooja pic.twitter.com/s31YRZa77V
— UV Creations (@UV_Creations) December 1, 2021
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್

ಇಂಡಿಯನ್ ಪವರ್ ಹೌಸ್ ನಲ್ಲಿ ನಿಖೀಲ್ ಸಿದ್ಧಾರ್ಥ್

Actress: ಮೊದಲ ಮಗುವಿನ ನಿರೀಕ್ಷೆ; ಬಣ್ಣದ ಲೋಕ ತೊರೆಯಲು ನಿರ್ಧರಿಸಿದ ಖ್ಯಾತ ನಟಿ

ನಾನು ಅಲ್ಲಿಗೆ ಹೋದರೆ ನನ್ನನ್ನು ಕೊಲ್ಲುತ್ತಾರೆ.. ʼThe Diary of West Bengal’ ನಿರ್ದೇಶಕ
MUST WATCH
ಹೊಸ ಸೇರ್ಪಡೆ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ