
Rajinikanth: ಕೋಟಿ ಕೋಟಿ ಗಳಿಸಿದ ʼಜೈಲರ್ʼ ಒಂದು ಸಾಧಾರಣ ಸಿನಿಮಾವೆಂದ ತಲೈವಾ.!
Team Udayavani, Sep 19, 2023, 1:27 PM IST

ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹತ್ತಾರು ದಾಖಲೆಗಳನ್ನು ಬ್ರೇಕ್ ಮಾಡಿ ಈ ವರ್ಷದ ದೊಡ್ಡ ಹಿಟ್ ಸಿನಿಮಾವಾಗಿ ಮೂಡಿಬಂದಿದೆ.
ಕಾಲಿವುಡ್ ಸಿನಿಮಾರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ʼಜೈಲರ್ʼ ಸಿನಿಮಾ ಕೂಡ ಒಂದಾಗಿದೆ. ವರ್ಲ್ಡ್ ವೈಡ್ 600 ಕೋಟಿಗೂ ಅಧಿಕ ಕಮಾಯಿ ಮಾಡುವುದರ ಜೊತೆಗೆ ನೆಲ್ಸನ್ ದಿಲೀಪ್ ಕುಮಾರ್ ಅವರು ಕಂಬ್ಯಾಕ್ ಮಾಡುವಂತೆ ʼಜೈಲರ್ʼ ಮಾಡಿದೆ.
“ಜೈಲರ್ ಒಂದು ಸಾಧಾರಣ (ಆ್ಯವರೇಜ್) ಸಿನಿಮಾವೆಂದು ನಾನು ಭಾವಿಸುತ್ತೇನೆ. ಸಿನಿಮಾದ ರೀ ರೆಕಾರ್ಡ್ ಆಗುವ ಮುನ್ನ ನಾನು ಅದನ್ನು ನೋಡಿದ್ದೆ. ಆಗ ನನಗೆ ಇದೊಂದು ಆ್ಯವರೇಜ್ ಸಿನಿಮಾವೆಂದು ನನಗನ್ನಿಸಿತು. ಆದರೆ ಅನಿರುದ್ಧ್ ಅವರ ಬಿಜಿಎಂ ಸಿನಿಮಾವನ್ನು ಉತ್ತುಂಗಕ್ಕೇರಿಸಿತು” ಎಂದು ರಜಿನಿಕಾಂತ್ ಸಕ್ಸಸ್ ಮೀಟ್ ನಲ್ಲಿ ಹೇಳಿರುವುದಾಗಿ ʼಗಲ್ಲಾಟ್ಟಾ.ಕಾಂ.ʼ ವರದಿ ಮಾಡಿದೆ.
ಇದನ್ನೂ ಓದಿ: SS Rajamouli: ಇಂಡಿಯನ್ ಸಿನಿಮಾದ ಬಯೋಪಿಕ್ ಹೇಳಲು ಹೊರಟ ರಾಜಮೌಳಿ; ಹೊಸ ಸಿನಿಮಾ ಅನೌನ್ಸ್
ಕೆಲ ದಿನಗಳ ಹಿಂದಷ್ಟೇ ನಿರ್ಮಾಪಕ ಕಲಾನಿಧಿ ಮಾರನ್ ಅವರು ರಜಿನಿಕಾಂತ್, ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಅನಿರುದ್ಧ್ ಸೇರಿದಂತೆ ಇತರರಿಗೆ ಕಾರು ಹಾಗೂ ನಗದು ರೂಪದಲ್ಲಿ ಉಡುಗೊರೆಯನ್ನು ನೀಡಿದ್ದರು. ರಜಿನಿಕಾಂತ್ ಅವರಿಗೆ 100 ಕೋಟಿ ರೂ.ವಿನ ಚೆಕ್ ನೀಡಿದ್ದರು.
ʼಜೈಲರ್ʼ ಅಮೇಜಾನ್ ಪ್ರೈಮ್ ಸ್ಟ್ರೀಮ್ ಆಗುತ್ತಿದೆ. ಇನ್ನೊಂದೆಡೆ ರಜಿನಿಕಾಂತ್ ಲೋಕೇಶ್ ಕನಕರಾಜ್ ಅವರೊಂದಿಗೆ ‘Thalaivar 171’ ಸಿನಿಮಾವನ್ನು ಮಾಡಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್
MUST WATCH
ಹೊಸ ಸೇರ್ಪಡೆ

Cauvery ಮತ್ತು ನಂಬಿಕೆ… ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ?

Katapadi: ಕೊರಗಜ್ಜನಿಗೆ ಲಾರಿ, ಟೆಂಪೋ ಮಾಲಕರ ಮೊರೆ

World Cup; ಲೆಗ್ ಸ್ಪಿನ್ನರ್ ಚಾಹಲ್ ಕಡೆಗಣಿಸಿರುವುದು ತಪ್ಪು : ಯುವರಾಜ್ ಸಿಂಗ್

Mangaluru ಪ್ರತಿ ಟನ್ ಗೆ 150 ರೂ. ಬಾಡಿಗೆ ಏರಿಕೆ ಭರವಸೆ: ಮುಷ್ಕರ ಹಿಂತೆಗೆದ ಲಾರಿ ಯೂನಿಯನ್

ICC World Cup 2023; ಎಲ್ಲಾ ಹತ್ತು ತಂಡಗಳ ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ