ಜ.7ರಂದು ಬಿಡುಗಡೆಯಾಗಲ್ಲ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’
Team Udayavani, Jan 2, 2022, 8:57 AM IST
ಮುಂಬೈ: ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದ ಸಿನಿರಸಿಕರಿಗೆ ಚಿತ್ರತಂಡ ಹೊಸ ವರ್ಷದ ದಿನವೇ ಶಾಕ್ ಕೊಟ್ಟಿದೆ. ಜ.7ರಂದು ತೆರೆ ಕಾಣಬೇಕಿದ್ದ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ ತಿಳಿಸಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, “ಕೊರೊನಾ ಹೆಚ್ಚುತ್ತಿರುವುದರಿಂದಾಗಿ ಅನೇಕ ರಾಜ್ಯಗಳಲ್ಲಿ ಥಿಯೇಟರ್‌ಗಳಿಗೆ ನಿರ್ಬಂಧ ಹೇರಲಾಗಿದೆ. ಆ ಹಿನ್ನೆಲೆಯಲ್ಲಿ ನಾವು ಸಿನಿಮಾ ಬಿಡುಗಡೆಯನ್ನು ಮುಂದೂಡಲೇಬೇಕಾಯಿತು. ನಿಮ್ಮ ಕುತೂಹಲವನ್ನು ಇನ್ನಷ್ಟು ದಿನ ಕಾಪಿಟ್ಟುಕೊಳ್ಳಿ’ ಎಂದು ಬರೆದುಕೊಂಡಿದೆ.
ಆರ್‌ಆರ್‌ಆರ್ ಜೊತೆ ಸಂಘರ್ಷವಾಗುತ್ತದೆ ಎನ್ನುವ ಕಾರಣಕ್ಕೇ ಗಂಗೂ ಬಾಯಿ ಕಥಿಯಾವಾಡಿ, ಭೀಮ್ಲಾ ನಾಯಕದಂತಹ ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಆದರೆ ಇದೀಗ ಆರ್‌ಆರ್‌ಆರ್ ಬಿಡುಗಡೆಯೂ ಮುಂದೂ ಡಿರುವುದು ಅನೇಕರಿಗೆ ಅಘಾತ ತಂದಿದೆ.
ಕನ್ನಡ, ತಮಿಳು, ಮಲಯಾಳಂ,ತೆಲುಗು ಸೇರಿದಂತೆ ಹಲವು ಭಾಷೆಗಳ ಚಿತ್ರಗಳು ತಮ್ಮ ಬಿಡುಗಡೆ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಿಸಬೇಕಾದ ಅನಿವಾರ್ಯತೆಗೆ ಬಿದ್ದಿವೆ.