ತನ್ನ ಜೀವನಾಧಾರಿತ ಚಿತ್ರದ ನಾಯಕ ರಣ್‌ವೀರ್‌ನನ್ನು ಹಾಡಿ ಹೊಗಳಿದ ಕಪಿಲ್ ದೇವ್
Team Udayavani, Dec 23, 2021, 2:55 PM IST
ನವದೆಹಲಿ: ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರ ‘83 ಬಿಡುಗಡೆಗೆ ಸಿದ್ಧವಾಗಿದೆ. ಈ ವೇಳೆ ಕಪಿಲ್ ದೇವ್ ಈ ಚಿತ್ರದ ನಾಯಕ ರಣ್‌ವೀರ್ ಸಿಂಗ್ ನ್ನು ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಹಾಡಿ ಹೊಗಳಿದ್ದಾರೆ.
ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಚಿತ್ರವು ಕಪಿಲ್ ದೇವ್ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾಗದ ಅಂದರೆ, 1983ರ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಐತಿಹಾಸಿಕ ಗೆಲುವನ್ನು ಈ ಚಿತ್ರ ಕಥೆ ಆಧರಿಸಿದೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ನಟಿಸುತ್ತಿದ್ದು, ಕಪಿಲ್ ಪತ್ನಿ ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
View this post on Instagram
ಇದನ್ನೂ ಓದಿ: ಲೂಧಿಯಾನ ಕೋರ್ಟ್ ಆವರಣದಲ್ಲಿ ಸ್ಫೋಟ: ಕನಿಷ್ಠ ಇಬ್ಬರು ಸಾವು
ರಣವೀರ್ ಸಿಂಗ್ ಬಗ್ಗೆ ಮಾತನಾಡಿದ ಕಪಿಲ್, ರಣ್‌ವೀರ್‌ನ ನಟನೆ ಮತ್ತು ಉತ್ಸಾಹ ಅದ್ಭುತ ಎಂದು ಹೊಗಳಿದರು. ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕಪಿಲ್ ತಿಳಿಸಿದರು.
View this post on Instagram
ಈ ಚಿತ್ರದ ಟ್ರೈಲರ್‌ನಲ್ಲಿರುವ ಸಣ್ಣ ತುಣುಕುಗಳನ್ನು ನೋಡಿಯೇ ನನ್ನ ಮೈ ರೋಮಾಂಚನವಾಗುತ್ತಿದೆ, ಈ ಚಿತ್ರಕ್ಕೆ ನಟ – ನಟಿಯರು ಮಾಡಿದ ಪ್ರಯತ್ನ ವಿಶೇಷವಾದದ್ದು ಎಂದು ಕಪಿಲ್ ಚಿತ್ರ ತಂಡವನ್ನು ಪ್ರಶಂಸೆ ಮಾಡಿದರು. ಕಬೀರ್ ಖಾನ್ ನಿರ್ದೇಶನದ 83 ಚಿತ್ರವು ಡಿಸೆಂಬರ್ 24 ರಂದು ಥಿಯೇಟರ್‌ಗಳಲ್ಲಿ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಫೋಟೋ ವಿವಾದ: ಬಾಲಿವುಡ್ ನಟ ರಣವೀರ್ ಸಿಂಗ್ಗೆ ನೋಟಿಸ್
10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್: ಫ್ಯಾನ್ಸ್ ಫುಲ್ ಖುಷ್
ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?
ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣ
“ನನ್ನ ಲೈಂಗಿಕ ಜೀವನ… ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ನಟಿ ತಾಪ್ಸಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
ಸಾಲ ವಸೂಲಿ ವೇಳೆ ಬೆದರಿಕೆ ಹಾಕುವಂತಿಲ್ಲ: ಆರ್ಬಿಐ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ