
ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣ
ಆಗಾಗ ಟ್ವೀಟ್ ನಲ್ಲಿ ಏನಿದ್ದರೂ ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ.
Team Udayavani, Aug 8, 2022, 3:42 PM IST

ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ‘ಸೀತಾ ರಾಮಂʼ ಚಿತ್ರಕ್ಕೆ ಕೇಳಿ ಬರುತ್ತಿರುವ ಪಾಸಿಟಿವ್ ರೆಸ್ಪಾನ್ಸ್ ನಿಂದ ಖುಷಿಯಾಗಿದ್ದಾರೆ. ಕೊಡಗಿನ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿದ್ದು,ಯಾವುದೇ ವಿಷಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರೂ ಅದು ಸುದ್ದಿಯಾಗುತ್ತದೆ. ಇದೀಗ ರಶ್ಮಿಕಾ ಅವರು ಸಾರ್ವಜನಿಕರ ಸುರಕ್ಷತೆಗೆ ಟ್ವೀಟ್ ವೊಂದನ್ನು ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಬ್ಯುಸಿಯಾಗಿರುತ್ತಾರೆ. ಆಗಾಗ ಟ್ವೀಟ್ ನಲ್ಲಿ ಏನಿದ್ದರೂ ತಮ್ಮ ಚಿತ್ರದ ಬಗ್ಗೆ ಹಂಚಿಕೊಳ್ಳುತ್ತಾರೆ. ಆದರೆ ನಟಿ ರಶ್ಮಿಕಾ ಸಾರ್ವಜನಿಕರಿಗಾಗಿ ಟ್ವೀಟ್ ಮಾಡಿ ಕಾಳಜಿ ತೋರಿಸಿದ್ದಾರೆ.
ಎಲ್ಲೆಡೆ ವಿಪರೀತ ಮಳೆಯಾಗುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಿಟ್ಟಿನಲ್ಲಿ ಕಿರಿಕ್ ಪಾರ್ಟಿ ಸುಂದರಿ ರಶ್ಮಿಕಾ “ಎಲ್ಲರೂ ಕೇಳಿ ನಾನೀಗ ಹೇಳುತ್ತಿರುವುದು ಸಹಜ ವಿಷಯ ಅನ್ನಿಸಬಹುದು ಆದರೆ ಹೇಳಲೇ ಬೇಕು ಅನ್ನಿಸಿತು. ಕೆಲಸಕ್ಕೆ ಹೋಗುವವರು ರಾತ್ರಿ ಹೊತ್ತು ಮಳೆಯ ಸಮಯದಲ್ಲಿ ಮನೆಗೆ ವಾಪಾಸ್ ಬರುವಾಗ ಬಹಳ ಎಚ್ಚರವಹಿಸಿ” ಎಂದು ಮನವಿ ಮಾಡಿದ್ದಾರೆ.
ದುಲ್ಕರ್ ಸಲ್ಮಾನ್ ನಟನೆಯ ʼಸೀತಾ ರಾಮಂʼ ಚಿತ್ರದಲ್ಲಿ ನಟಿ ರಶ್ಮಿಕಾ ವಿಶೇಷವಾದ ಪಾತ್ರವನ್ನು ಮಾಡಿದ್ದಾರೆ. ಬಾಲಿವುಡ್ ನ ‘ಗುಡ್ ಬೈʼ ಸಿನಿಮಾದಲ್ಲೂ ಅವರು ಬ್ಯುಸಿಯಾಗಿದ್ದಾರೆ. ಅವರ ʼಪುಷ್ಪ-2ʼ ಚಿತ್ರ ಕೂಡ ನಿರೀಕ್ಷೆ ಹೆಚ್ಚಿಸಿದೆ.
Guys listen.
This is a very random note but just felt like saying –
Those of you who are going to work or getting back from work on bikes in the night, in this rain..
please please be careful .. ?— Rashmika Mandanna (@iamRashmika) August 7, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ

Mumbai: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ

Viral ‘drunk’ video; ವದಂತಿಗಳಿಗೆ ತೆರೆ ಎಳೆದ ಸನ್ನಿ ಡಿಯೋಲ್