
ವಿಜಯ್ ದೇವರಕೊಂಡ ಆಯಿತು ಈಗ ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್?: ಫೋಟೋಸ್ ವೈರಲ್
Team Udayavani, Apr 1, 2023, 5:06 PM IST

ಹೈದರಾಬಾದ್: ಬಹುಭಾಷಾ ಬೆಡಗಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ʼಕಿರಿಕ್ ಪಾರ್ಟಿʼ ನಟಿ ಇದೀಗ ಡೇಟಿಂಗ್ ವಿಚಾರದಲ್ಲಿ ಮತ್ತೆ ಚರ್ಚೆಗೆ ಬಂದಿದ್ದಾರೆ.
ʼಗೀತಾ ಗೋವಿಂದಂʼ ನಟಿ ವಿಜಯ್ ದೇವರಕೊಂಡ ಅವರೊಂದಿಗೆ ಆತ್ಮೀಯವಾಗಿ ಇರುವುದು ಗೊತ್ತೇ ಇದೆ. ಇಬ್ಬರೂ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷದಂದು ಮಾಲ್ಡೀವ್ಸ್ ನಲ್ಲಿ ಇಬ್ಬರೂ ಜೊತೆಯಾಗಿಯೇ ಸುತ್ತಾಡಿದ್ದರು ಎನ್ನಲಾಗಿತ್ತು. ಇದೆಲ್ಲದರ ನಡುವೆ ರಶ್ಮಿಕಾ – ದೇವರಕೊಂಡ ಜಸ್ಟ್ ಫ್ರೆಂಡ್ಸ್ ಎನ್ನುವುದನ್ನು ಸ್ವತಃ ರಶ್ಮಿಕಾ ಅವರೇ ಈ ಹಿಂದೆ ಹೇಳಿದ್ದಾರೆ.
ಆದರೀಗ ನಟಿ ರಶ್ಮಿಕಾ ಟಾಲಿವುಡ್ ನಟ ಬೆಲ್ಲಂಕೊಂಡ ಶ್ರೀನಿವಾಸ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮುಂಬೈ ಏರ್ ಪೋರ್ಟ್ ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ರಶ್ಮಿಕಾ – ಬೆಲ್ಲಂಕೊಂಡ ಶ್ರೀನಿವಾಸ್ ಡೇಟಿಂಗ್ ಬಗ್ಗೆ ಗಾಸಿಪ್ ಹಬ್ಬಿದೆ.
ರಶ್ಮಿಕಾ – ರಶ್ಮಿಕಾ – ಬೆಲ್ಲಂಕೊಂಡ ಕಳೆದ ಕೆಲ ಸಮಯದಿಂದ ಒಟ್ಟಾಗಿ ತಿರುಗಾಡುತ್ತಿದ್ದಾರೆ. ಇಬ್ಬರು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಇಬ್ಬರು ಡೇಟಿಂಗ್ ನಲ್ಲಿರುವ ಸಾಧ್ಯತೆಯಿದೆ. ಜನರ ಊಹೆ ಸತ್ಯವಾಗಿರಬಹುದು ಎಂದು “ಈಟೈಮ್ಸ್” ವರದಿ ಮಾಡಿದೆ.
ರಶ್ಮಿಕಾ ʼವಾರಿಸುʼ, ʼಮಿಷನ್ ಮಜ್ನುʼ ಸಿನಿಮಾ ಹಿಟ್ ಆದ ಸಂತಸದಲ್ಲಿದ್ದು, ಬೆಲ್ಲಂಕೊಂಡ ʼಛತ್ರಪತಿʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BOLLYWOOD: ದೇವಸ್ಥಾನಗಳಿಗೆ ಸಾರಾ ಆಲಿಖಾನ್ ಭೇಟಿ; ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ ನಟಿ

ಮಲೈಕಾ ಆರೋರಾ ಗರ್ಭಿಣಿ ಗಾಸಿಪ್: “ನಮ್ಮ ವೈಯಕ್ತಿಕ ಜೀವನ..” ಮೌನ ಮುರಿದ ಪ್ರಿಯಕರ Arjun

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
