ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ
Team Udayavani, Jan 24, 2023, 8:39 PM IST
ಮುಂಬಯಿ: ಬಹಳ ಕುತೂಹಲದಿಂದ ಕಾಯುತ್ತಿದ್ದ ಆಸ್ಕರ್ ಪ್ರಶಸ್ತಿ ನಾಮಿನೇಷನ್ ಪಟ್ಟಿ ಕೊನೆಗೂ ಹೊರಬಿದ್ದಿದೆ.
ಮಂಗಳವಾರ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ಆಸ್ಕರ್ ಪ್ರಶಸ್ತಿಯ ನಾಮಿನೇಷನ್ ಲಿಸ್ಟ್ ಘೋಷಣೆ ಮಾಡಲಾಗಿದ್ದು ಸಿನಿಮಾ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ನಾಟು ನಾಟು ಹಾಡು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಇದೀಗ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿ ದಾಖಲೆ ನಿರ್ಮಿಸಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು ನಾಟು.. ಹಾಡಿಗೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡಿಗೆ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗೆ ಗೋಲ್ಡನ್ ಗ್ಲೋಬ್ 2023 ಅವಾರ್ಡ್ ಸಿಕ್ಕಿದ್ದು, ಈಗ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವುದು ಸಿನಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ಮಳೆಯಿಂದ ಮನೆ ಕಳೆದುಕೊಂಡಿದ್ದ ವೃದ್ಧೆಗೆ ದಾನಿಗಳಿಂದಲೇ ನಿರ್ಮಾಣವಾಗುತ್ತಿದೆ ಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
ಟಾಲಿವುಡ್ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್ ನಿಧನ
ಬಾಲಿವುಡ್ ಸ್ಟಾರ್ಸ್ ಅಕ್ಷಯ್ ಕುಮಾರ್,ಟೈಗರ್ ಶ್ರಾಫ್ ಡಾನ್ಸ್ ವೈರಲ್
ಹಸೆಮಣೆ ಏರಲು ಸಜ್ಜಾದ ʼಶೇರ್ ಷಾʼ ಜೋಡಿ ಸಿದ್ಧಾರ್ಥ್ – ಕಿಯಾರಾ: ಫೆ.6 ಕ್ಕೆ ಅದ್ಧೂರಿ ವಿವಾಹ
‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ