Salman khan; ಕರಣ್ ಜೋಹರ್ ಜೊತೆ ಸಲ್ಲು ಚಿತ್ರ
Team Udayavani, Aug 9, 2023, 3:14 PM IST
ನಟ ಸಲ್ಮಾನ್ ಖಾನ್ ಮತ್ತೆ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿನ ಅವರ ಅತಿಯಾದ ಆ್ಯಕ್ಷನ್ ನೋಡಿ ಬೇಸತ್ತ ಪ್ರೇಕ್ಷಕ ಅವರ ಕೆಲವು ಸಿನಿಮಾಗಳನ್ನು ಸೈಲೆಂಟಾಗಿ ಸೈಡ್ ಮಾಡಿದ್ದರು. ಅದರ ಪರಿಣಾಮ ಸಲ್ಲು ಕೂಡಾ ಬೇರೆ ಜಾನರ್ನ ಸಿನಿಮಾವನ್ನು ಪ್ರಯತ್ನಿಸಿದ್ದು ಸುಳ್ಳಲ್ಲ.
ಈಗ ಮತ್ತೆ ತಮ್ಮ ಮೋಸ್ಟ್ ಫೆವರೇಟ್ ಜಾನರ್ ಆದ ಆ್ಯಕ್ಷನ್ಗೆ ಸಲ್ಲು ಮರಳಿದ್ದಾರೆ. ವಿಶೇಷವೆಂದರೆ ಈ ಬಾರಿ ಸಲ್ಮಾನ್ ಖಾನ್ ಹಾಗೂ ಕರಣ್ ಜೋಹರ್ ಜೊತೆಯಾಗುತ್ತಿದ್ದಾರೆ. ಸಲ್ಮಾನ್ ಖಾನ್ ಸಿನಿಮಾವನ್ನು ಈ ಬಾರಿ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದು, ವಿಷ್ಣುವರ್ಧನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಈ ಸಿನಿಮಾ ಕುರಿತು ಕಳೆದ ಆರೇಳು ತಿಂಗಳಿನಿಂದ ಮಾತುಕತೆ ನಡೆಯುತ್ತಲೇ ಇತ್ತು. ಆದರೆ, ಈಗ ಸಿನಿಮಾಕ್ಕೆ ಅಂತಿಮ ಮುದ್ರೆ ಬಿದ್ದಿದ್ದು, ನವೆಂಬರ್ನಿಂದ ಚಿತ್ರೀಕರಣ ಆರಂಭವಾಗಲಿದೆಯಂತೆ. ಸತತ ಎಂಟು ತಿಂಗಳುಗಳ ನಡೆಯಲಿರುವ ಈ ಸಿನಿಮಾಕ್ಕೆ ಸಲ್ಮಾನ್ ಖಾನ್ ಕೂಡಾ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತಿದ್ದಾರಂತೆ.
ಸದ್ಯ ಸಲ್ಮಾನ್ ಖಾನ್ ನಟನೆಯ “ಟೈಗರ್ 3′ ಚಿತ್ರದ ಕೆಲಸ ಭರದಿಂದ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ