ಟ್ರೇಲರ್ನಲ್ಲಿ ಸನಿಹಕೆ ಸೆಳೆತ!
Team Udayavani, Aug 3, 2021, 10:38 AM IST
ಬೆಂಗಳೂರು: ವರನಟ ಡಾ. ರಾಜಕುಮಾರ್ ಮೊಮ್ಮಗಳು, ನಟ ರಾಮಕುಮಾರ್ ಪುತ್ರಿ, ದೊಡ್ಮನೆ ಹುಡುಗಿ ಧನ್ಯಾ ರಾಮಕುಮಾರ್ ಅಭಿನಯದ “ನಿನ್ನ ಸನಿಹಕೆ’ ಚಿತ್ರದ ಟ್ರೇಲರ್ ಇದೇ ಆ. 1ರಂದು ಬಿಡುಗಡೆಯಾಗಿದೆ.
ಧನ್ಯಾ ರಾಮಕುಮಾರ್ ಅಭಿನಯದ ಚೊಚ್ಚಲ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲೂ “ನಿನ್ನ ಸನಿಹಕೆ’ ಟ್ರೇಲರ್ ಜೋರಾಗಿ ಸೌಂಡ್ ಮಾಡುತ್ತಿದೆ.
ಇನ್ನು ನಟರಾದ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ವಿನಯ್ ರಾಜಕುಮಾರ್, ಗುರು ರಾಜಕುಮಾರ್, ಧೀರನ್ ರಾಮಕುಮಾರ್ ಸೇರಿದಂತೆ ರಾಜ್ಕುಟುಂಬದ ಸದಸ್ಯರು ಮತ್ತು ರಾಜಕುಮಾರ್ ಅಭಿಮಾನಿಗಳು ದೊಡ್ಮನೆ ಹುಡುಗಿಯ ಚೊಚ್ಚಲ ಚಿತ್ರದ ಟ್ರೇಲರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ನಾಯಕ ಸೂರಜ್ ಗೌಡ ಮತ್ತು ಧನ್ಯಾ ರಾಮಕುಮಾರ್ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ಚೆನ್ನಾಗಿ ಮೂಡಿಬಂದಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳು ಕೇಳಿ ಬರುತ್ತಿವೆ. ಇಷ್ಟೊತ್ತಿಗಾಗಲೇ “ನಿನ್ನ ಸನಿಹಕೆ’ ಚಿತ್ರ ಥಿಯೇಟರ್ ಗೆ ಬಂದಿರಬೇಕಿತ್ತು. ಈ ವರ್ಷದ ಆರಂಭದಿಂದಲೇ ಭರ್ಜರಿಯಾಗಿ ಚಿತ್ರದ ಪ್ರಚಾರಕಾರ್ಯ ಆರಂಭಿಸಿದ್ದ ಚಿತ್ರತಂಡ, ಇದೇ ಏಪ್ರಿಲ್ನಲ್ಲಿ “ನಿನ್ನ ಸನಿಹಕೆ’ ಚಿತ್ರವನ್ನು ಪ್ರೇಕ್ಷಕರ ಸನಿಹಕೆ ತರುವ ಯೋಜನೆ ಹಾಕಿಕೊಂಡಿತ್ತು.
ಆದರೆ ಕೋವಿಡ್ ಎರಡನೇ ಅಲೆಯ ಆತಂಕ ಮತ್ತು ಲಾಕ್ ಡೌನ್ನಿಂದಾಗಿ ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಿತ್ತು. ಇದೀಗ “ನಿನ್ನ ಸನಿಹಕೆ’ ಚಿತ್ರದ ಟ್ರೇಲರ್ ಬಿಡುಗ ಡೆ ಮಾಡಿ ಭರ್ಜರಿಯಾಗಿ ಚಿತ್ರದ ಪ್ರಚಾರಕಾರ್ಯ ಆರಂಭಿಸಿರುವ ಚಿತ್ರತಂಡ, ಇದೇ ಆಗಸ್ಟ್ 20ಕ್ಕೆ ಚಿತ್ರವನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?