ಪಠಾಣ್ ಅಬ್ಬರಕ್ಕೆ ನಡುಗಿದ ಬಾಕ್ಸಾಫೀಸ್: ಭಾರತದಲ್ಲೇ 300 ಕೋಟಿ ಗಳಿಸಿದ ಶಾರುಖ್ ಸಿನಿಮಾ
Team Udayavani, Jan 31, 2023, 6:40 PM IST
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ ಅಭಿನಯದ ‘ಪಠಾಣ್ ‘ ಸಿನಿಮಾವು ದಿನಕ್ಕೊಂದು ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿದೆ. ಜ.25ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡ ಶಾರುಖ್ ಸಿನಿಮಾವು ಈಗಲೇ 300 ಕೋಟಿ ಕ್ಲಬ್ ನತ್ತ ದಾಪುಕಾಲಿಟ್ಟಿದೆ.
ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರ ಪ್ರಕಾರ ಸಿದ್ದಾರ್ಥ್ ಆನಂದ್ ನಿರ್ದೇಶನದ ಚಿತ್ರವು ಭಾರತದಲ್ಲಿ ಮೊದಲ ಆರು ದಿನದಲ್ಲಿ 296.50 ಕೋಟಿ ರೂ ಗಳಿಸಿದೆ. 7ನೇ ದಿನದಲ್ಲಿ ಇದು 300 ಕೋಟಿ ಗಳಿಸುವುದು ಪಕ್ಕಾ ಆಗಿದ್ದು, ಈ ಮೂಲಕ ಬಾಹುಬಲಿ 2 ಮತ್ತು ಕೆಜಿಎಫ್2 ಹಿಂದಿ ವರ್ಷನ್ ಗಳ ದಾಖಲೆ ಮುರಿದಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ 2 ಹತ್ತು ದಿನದಲ್ಲಿ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರವು 11 ದಿನದಲ್ಲಿ ಭಾರತದಲ್ಲಿ ಮುನ್ನೂರು ಕೋಟಿ ರೂ ಗಳಿಸಿತ್ತು.
ಇದನ್ನೂ ಓದಿ:ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
ವಿಶ್ವದಾದ್ಯಂತ ಚಿತ್ರವು ಈಗಾಗಲೇ 500 ಕೋಟಿ ಗಡಿ ದಾಟಿದೆ. ಪಠಾಣ್ ಚಿತ್ರವು ಈಗಾಗಲೇ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಇದು ಬಾಲಿವುಡ್ ನ ಅತಿದೊಡ್ಡ ಆರಂಭ ಪಡೆದ ಚಿತ್ರ ಮತ್ತು ವೇಗವಾಗಿ 200 ಕೋಟಿ ರೂ ಮತ್ತು 250 ಕೋಟಿ ರೂ. ಗಳಿಸಿದ ಚಿತ್ರವಾಗಿದೆ. ಒಂದೇ ದಿನದಲ್ಲಿ ಸುಮಾರು 70 ಕೋಟಿ ರೂ. ಗಳಿಸಿದ ಏಕೈಕ ಹಿಂದಿ ಚಿತ್ರವೂ ಹೌದು.
‘PATHAAN’ FASTEST TO ENTER ₹ 300 CR CLUB…
⭐️ #Pathaan: Day 7
⭐️ #Baahubali2 #Hindi: Day 10
⭐️ #KGF2 #Hindi: Day 11
⭐️ #Dangal: Day 13
⭐️ #Sanju: Day 16
⭐️ #TigerZindaHai: Day 16
⭐️ #PK: Day 17
⭐️ #War: Day 19
⭐️ #BajrangiBhaijaan: Day 20
⭐️ #Sultan: Day 35#India biz. Nett BOC. pic.twitter.com/xmoBvX0m9g— taran adarsh (@taran_adarsh) January 31, 2023