ಪಡ್ಡೆಹುಡುಗರ ನಿದ್ದೆಗೆಡಿಸಿದ್ದ “ಕಿನ್ನರತುಂಬಿಗಳ್” ಶಕೀಲಾ..ರೀಲ್ & ರಿಯಲ್ ಲೈಫ್!

Team Udayavani, May 9, 2019, 5:04 PM IST

  • Op90ರ ದಶಕದಲ್ಲಿ ಮುದುಕರಿಂದ ಹಿಡಿದು ಯುವಕರವರೆಗೂ ನಿದ್ದೆಗೆಡಿಸಿಬಿಟ್ಟಿದ್ದ ಈ ನಟಿ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಳು. ಪೋರ್ನ್ ಸ್ಟಾರ್ ಎನ್ನಿಸಿಕೊಂಡಿದ್ದ ಈಕೆಯ ಸಿನಿಮಾ ನೇಪಾಳಿ, ಚೀನಾ, ಸಿಂಹಳಿ ಸೇರಿದಂತೆ ವಿವಿಧ ವಿದೇಶಿ ಭಾಷೆಗಳಿಗೂ ಡಬ್ ಆಗುತ್ತಿತ್ತು. ಇದರಿಂದಾಗಿ ಆಕೆಗೆ ವಿದೇಶಗಳಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡು ಬಿಟ್ಟಿದ್ದರು. ಯುವಕರ ಪಾಲಿನ ಕನಸಿನ ರಾಣಿಯಾಗಿದ್ದಳು… ಈ ನಟಿ ಬೇರಾರು ಅಲ್ಲ ಶಕೀಲಾ ಬೇಗಂ. 1975ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದ್ದ ಶಕೀಲಾ ಆರಂಭದ ಬದುಕು ಹೇಗಿತ್ತು? ಆಕೆಯ ನಟನೆಯಿಂದ ಹಣ, ಹೆಸರು ಮಾಡಿಕೊಂಡ ಘಟಾನುಘಟಿಗಳೇ ಮೋಸ ಮಾಡಿಬಿಟ್ಟಿದ್ದರು. ತೆರೆಮೇಲೆ ಮಿಂಚಿದ್ದ ಶಕೀಲಾ ನಿಜಜೀವನ ಗ್ಲ್ಯಾಮರಸ್ ಆಗಿರಲಿಲ್ಲ!

ಬಡತನದಲ್ಲಿ ಬೆಳೆದಿದ್ದ ಶಕೀಲಾ:

ಆಂಧ್ರಪ್ರದೇಶದ ನೆಲ್ಲೂರ್ ನಲ್ಲಿ ಜನಿಸಿದ್ದ ಶಕೀಲಾ ಬಡತನದಲ್ಲಿಯೇ ಬೆಳೆದಿದ್ದಳು. ತಂದೆ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದರು. ಪೋಷಕರ ದುಡಿಮೆಯಿಂದ ಹೊಟ್ಟೆ ಹೊರೆದುಕೊಳ್ಳುವುದು ಕಷ್ಟವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಶಾಲೆಗೆ ಗುಡ್ ಬೈ ಹೇಳಿದ್ದ ಶಕೀಲಾ ಕುಟುಂಬದ ನೆರವಿಗಾಗಿ ದುಡಿಯಲು ಮುಂದಾಗಿದ್ದಳು.  1980ರ ದಶಕದ ಕೊನೆಯಲ್ಲಿ ಶಕೀಲಾ ತನ್ನ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ದುಡಿಮೆ ಸಿಗದೆ ಕಷ್ಟಪಡುತ್ತಿದ್ದಳು. ಇವೆಲ್ಲಕ್ಕಿಂತ ಆಘಾತಕಾರಿಯಾದ ವಿಷಯ ಹಣಕ್ಕಾಗಿ ವೇಶ್ಯಾ ವೃತ್ತಿ ನಡೆಸುವಂತೆ ತಾಯಿ ಶಕೀಲಾಳನ್ನು ಒತ್ತಾಯಿಸಿದ್ದರಂತೆ!

ಏತನ್ಮಧ್ಯೆ ಆಕೆಯ ಮೈಮಾಟ ಮತ್ತು ಮುಖದ ಸೌಂದರ್ಯದ ಬಗ್ಗೆ ಹೊಗಳಿಕೆ ಕೇಳಿ ಬರತೊಡಗಿದ್ದವು. ಇದರಿಂದಾಗಿ ಸಿನಿಮಾ ರಂಗ ಪ್ರವೇಶಿಸುವ ಬಗ್ಗೆ ಶಕೀಲಾ ಕನಸು ಕಾಣತೊಡಗಿದ್ದಳು.

ಶಕೀಲಾ ಮೇಲೆ ಅಂದು ಹಾಟ್ ಬೆಡಗಿಯಾಗಿ, ಸೆಕ್ಸ್ ಬಾಂಬ್ ಎಂದೇ ಖ್ಯಾತಿಗಳಿಸಿದ್ದ ಸಿಲ್ಕ್ ಸ್ಮಿತಾ ಪ್ರಭಾವ ಸಾಕಷ್ಟು ಬೀರಿತ್ತು. ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಶಕೀಲಾಗೆ ಬಿಡುವಿಲ್ಲದಷ್ಟು ಶೂಟಿಂಗ್! ವಿಪರ್ಯಾಸವೆಂದರೆ ಅವೆಲ್ಲವೂ ‘ನೀಲಿ ಚಿತ್ರಗಳಾಗಿದ್ದವು! ಸಿಕ್ಕ ಅವಕಾಶ ಬಿಡಬಾರದು ಎಂದು ಶಕೀಲಾ ಒಂದರ ಹಿಂದೆ ಒಂದು ಎಂಬಂತೆ ವಯಸ್ಕರ ಸಿನಿಮಾಗಳಲ್ಲಿ ನಟಿಸುತ್ತಿದ್ದಳು. ಅದರಿಂದ ಯಾವುದೇ ಹೆಸರು ಬರಲಿಲ್ಲವಾಗಿತ್ತು!

ಪುಕ್ಸಟ್ಟೆ ನಟನೆಯಿಂದ ಫೇಮಸ್ ಆಗಿದ್ದಳು!

ಆರಂಭದಲ್ಲಿ ಶಕೀಲಾ ನೀಲಿ ಚಿತ್ರಗಳಲ್ಲಿ ಸಂಭಾವನೆ ಪಡೆಯದೆ ನಟಿಸುತ್ತಿದ್ದಳಂತೆ. ಬಳಿಕ ನಿಧಾನಕ್ಕೆ ಶಕೀಲಾ ಜನಪ್ರಿಯವಾಗತೊಡಗಿದ್ದಳು. 1986ರಲ್ಲಿ ಕನ್ನಡದ ಆಫ್ರಿಕಾದಲ್ಲಿ ಶೀಲಾ, ತಮಿಳಿನ ರಂಗನಾಯಕಿ, ತೆಲುಗಿನ ಡಿಯರ್ ಸ್ನೇಹಾ, ಮಲಯಾಳಂನ ಪರ್ವಂ, ಹಾಸ್ಟೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಳು.

2000ನೇ ಇಸವಿಯಲ್ಲಿ ಮಲಯಾಳಂನಲ್ಲಿ ತೆರೆಕಂಡಿದ್ದ ಕಿನ್ನರತುಂಬಿಗಳ್ ಸಿನಿಮಾ ಶಕೀಲಾ ಸಿನಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟಿತ್ತು. ಇದಕ್ಕೂ ಮುನ್ನ ಜಲ್ಲಿಕಟ್ಟು ಕಾಲೈ, ಬ್ಯೂಟಿ ಪ್ಯಾಲೇಸ್, ಕ್ಯಾಪ್ಟನ್ ಸಿನಿಮಾಗಳು ಶಕೀಲಾಗೆ ಜನಪ್ರಿಯತೆ ತಂದುಕೊಟ್ಟಿದ್ದವು. 2002ರಲ್ಲಿ ಶಕೀಲಾ ತೆಲುಗು ಸಿನಿಮಾರಂಗದಲ್ಲಿ ಹೆಸರು ಮಾಡಿದ್ದಳು. 2003ರಲ್ಲಿ ಜಯಂ, ನಿಜಂ, ಧೂಳ್, ದೋಗೋಡು ಸಿನಿಮಾಗಳು ಮತ್ತಷ್ಟು ಉತ್ತುಂಗಕ್ಕೇರಿಸಿದ್ದವು.

ಪ್ರತಿಷ್ಠಿತ ನಿರ್ಮಾಪಕರು ಹಣ ಮಾಡಿಕೊಂಡಿದ್ದರು!

ಶಕೀಲಾ ಮಲಯಾಳಂ ಸಿನಿಮಾರಂಗದಲ್ಲಿ ಅದೆಷ್ಟು ಖ್ಯಾತಳಾಗಿದ್ದಳೆಂದರೆ..ಆಕೆ ನಟಿಸಿದ್ದ ಸಿನಿಮಾಗಳಿಂದ ನಷ್ಟದ ಮಾತೇ ಇಲ್ಲ ಎಂಬತಾಗಿತ್ತು. ಹೀಗಾಗಿ ದೊಡ್ಡ, ದೊಡ್ಡ ಸ್ಟಾರ್ ನಟರ ಸಿನಿಮಾ ಪ್ರದರ್ಶನ ಕಾಣದ ಸಂದರ್ಭದಲ್ಲಿ ಶಕೀಲಾ ಸಿನಿಮಾ ಹೌಸ್ ಫುಲ್ ಆಗಿರುತ್ತಿತ್ತು! ದೊಡ್ಡ ಬಜೆಟ್ ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದ ನಿರ್ಮಾಪಕರು ಕೂಡಾ ಸದ್ದಿಲ್ಲದೇ ಶಕೀಲಾ ಬಳಿ ಬಂದು ನಟಿಸುವಂತೆ ಕೇಳಿಕೊಂಡು ಸಿನಿಮಾ ಮಾಡಿ ಹಣ ಗಳಿಸಿದ್ದರು. ಕೆಲವರು ತಮ್ಮ ಮನೆಗೆ ಆಕೆಯ ಹೆಸರನ್ನೂ ಇಟ್ಟಿದ್ದಾರಂತೆ! 2001ರಿಂದ 2002ರವರೆಗೆ ಶಕೀಲಾ ಮಲಯಾಳಂನಲ್ಲಿ ಬರೋಬ್ಬರಿ 40 ವಯಸ್ಕರ ಸಿನಿಮಾಗಳಲ್ಲಿ ನಟಿಸಿದ್ದಳು. ಅನಧಿಕೃತವಾಗಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಳು.

ನೂರಾರು ಸಿನಿಮಾ ನಿರ್ಮಾಪಕರು, ನಟರಿಂದ ಮದುವೆ ಆಗಲು ಆಫರ್!

ಪಡ್ಡೆ ಹುಡುಗರ ನಿದ್ದೆಗೆಡಿಸಿಬಿಟ್ಟಿದ್ದ ಶಕೀಲಾಳನ್ನು ಮದುವೆಯಾಗಲು ನಾ ಮುಂದು, ತಾ ಮುಂದು ಎಂದು ನಿರ್ಮಾಪಕರು, ಹಲವು ನಟರು ಮುಗಿಬಿದ್ದಿದ್ದರಂತೆ. ಆಕೆಯ ಜೀವನದ ಬಗ್ಗೆ, ಹಿನ್ನಲೆ ಬಗ್ಗೆ ಹಲವರಿಗೆ ಬಹಳಷ್ಟು ಕುತೂಹಲವಿದ್ದಿತ್ತು. ಅವೆಲ್ಲದಕ್ಕೂ ಉತ್ತರ ಕೊಟ್ಟಿದ್ದು ಆಕೆಯ ಆತ್ಮಕಥೆ ಪುಸ್ತಕ. ಹೌದು ಆಕೆಯಿಂದ ಅದೆಷ್ಟು ಮಂದಿ ಲಾಭ ಪಡೆದಿದ್ದರು, ಅದೆಷ್ಟು ಜನರು ಹಣಕಾಸಿನ ಸಹಾಯ ಪಡೆದಿದ್ದರು..ಆದರೆ ಕೊನೆಗೆ ಎಲ್ಲರೂ ಆಕೆಯನ್ನು ನಡು ನೀರಲ್ಲಿ ಕೈ ಬಿಟ್ಟು ಬಿಟ್ಟಿದ್ದರು.

ಸೆಕ್ಸ್ ನಟಿ ಎಂದು ಮನೆಯವರೂ ಮದುವೆಗೂ ಆಹ್ವಾನ ನೀಡುತ್ತಿರಲಿಲ್ಲವಂತೆ!

ಸೆಕ್ಸ್ ನಟಿಯಾಗಿ ಲಕ್ಷಾಂತರ ಪ್ರೇಕ್ಷಕರ ಮನ ಗೆದ್ದಿದ್ದ ಶಕೀಲಾ ವೈಯಕ್ತಿಕ ಬದುಕಿನಲ್ಲಿ ನೋವು ಉಂಡಿದ್ದೇ ಹೆಚ್ಚು, ಆಕೆಯ ಕುಟುಂಬದವರೂ ಕೂಡಾ ಆಕೆ ಯಾವುದೇ ಸಮಾರಂಭಕ್ಕೆ ಬಾರದಂತೆ ದೂರವೇ ಇರಿಸಿದ್ದರಂತೆ. ಸಹೋದರಿಯ ಮಗಳ ಮದುವೆಗೂ ಕೂಡಾ ಆಹ್ವಾನ ನೀಡಿರಲಿಲ್ಲವಾಗಿತ್ತು. ನಿಮ್ಮಂತಹ ಸೆಕ್ಸ್ ನಟಿಯರಿಗೆ ಆಹ್ವಾನ ಇಲ್ಲ ಎಂದು ಸಹೋದರಿ ಹೇಳಿದ್ದಳಂತೆ! ಇಂತಹ ಅವಮಾನಗಳಿಂದ ಹೊರಬರಲು ತಾನು ಬೇರೆ ಸಿನಿಮಾಗಳಲ್ಲಿ ನಟಿಸಿರುವುದಾಗಿ ಶಕೀಲಾ ಹೇಳಿಕೊಂಡಿದ್ದಾರೆ. ಮನೆಯವರೂ ಕೂಡಾ ಈಕೆಯ ಹಣಕ್ಕಾಗಿ ಜೊತೆಗೆ ಸೇರಿಸಿಕೊಂಡಿದ್ದರು. ಕೊನೆಗೆ ಆಕೆಯ ಹಣವನ್ನೆಲ್ಲಾ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರಂತೆ!

ಅಷ್ಟೇ ಅಲ್ಲ ಆಕೆಯ ಬಯೋಪಿಕ್ ಸಿನಿಮಾ ಕೂಡಾ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ರಿಜಾ ಚಡ್ಡಾ ಶಕೀಲಾ ಪಾತ್ರ ನಿರ್ವಹಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ