
ಆ ಕಾರಣಕ್ಕಾಗಿ “ಬ್ರಹ್ಮಾಸ್ತ್ರ“ ದಲ್ಲಿ ನಟಿಸುವ ಆಫರ್ ತಿರಸ್ಕರಿಸಿದ ಸ್ಟಾರ್ ನಟ
Team Udayavani, Sep 18, 2022, 5:11 PM IST

ಹೈದರಾಬಾದ್: ʼಬ್ರಹ್ಮಾಸ್ತ್ರʼ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಬಾಲಿವುಡ್ ಗೆ ಬಹು ಸಮಯದ ಬಳಿಕ ದೊಡ್ಡ ಗೆಲುವು ಸಿಕ್ಕಿದೆ. ಚಿತ್ರ ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ ಸ್ಟಾರ್ ನಟರೊಬ್ಬರು ʼಬ್ರಹ್ಮಾಸ್ತ್ರʼ ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.
2016 ರಲ್ಲಿ ಟೈಗರ್ ಶ್ರಾಫ್ ಅಭಿನಯದ ʼಭಾಗಿʼ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟಿದ್ದ ಟಾಲಿವುಡ್ ಸ್ಟಾರ್ ನಟ ಸುಧೀರ್ ಬಾಬು ಇತ್ತೀಚಿಗೆ ರಿಲೀಸ್ ಆಗಿರುವ “ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ” ಚಿತ್ರದ ಪ್ರಚಾರದ ವೇಳೆ “ಬ್ರಹ್ಮಾಸ್ತ್ರ” ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.
“ನನಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತು. ಆದರೆ ನಾನು ಅದನ್ನು ತಿರಸ್ಕರಿಸಿದೆ. ನಾನು ಆ ಸಮಯದಲ್ಲಿ ಬೇರೆಯೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದೆ. ʼಬ್ರಹ್ಮಾಸ್ತ್ರʼ ದಲ್ಲಿ ನನ್ನ ಪಾತ್ರ ಚಾಲೇಜಿಂಗ್ ಆಗಿತ್ತು ಎಂದಿದ್ದಾರೆ.
ಆದರೆ ಸುಧೀರ್ ಅವರು ಯಾವ ಪಾತ್ರದಲ್ಲಿ ನಟಿಸಲಿದ್ದರು ಎಂದು ಹೇಳಿಲ್ಲ. ʼ ಸಮ್ಮೋಹನಂʼ ಚಿತ್ರಕ್ಕಾಗಿ ಅವರು ʼಬ್ರಹ್ಮಾಸ್ತ್ರʼ ಆಫರ್ ತಿರಸ್ಕರಿಸಿದ್ದರು ಎಂದು ವರದಿ ತಿಳಿಸಿದೆ.
ʼಸಮ್ಮೋಹನಂʼ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಕಮಾಲ್ ಮಾಡಲಿಲ್ಲ. ಇಂದ್ರಗಂಟಿ ಮೋಹನಕೃಷ್ಣ ನಿರ್ದೇಶನದ “ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ” ಸುಧೀರ್ ಬಾಬು ಅವರೊಂದಿಗೆ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!

ತೆಲುಗು ಸಿನಿಮಾರಂಗದ ಜನಪ್ರಿಯ ಡಬ್ಬಿಂಗ್ ಕಲಾವಿದ ಶ್ರೀನಿವಾಸ ಮೂರ್ತಿ ಹೃದಯಾಘಾತದಿಂದ ನಿಧನ

ʼಪಠಾಣ್ʼ ಮೋಡಿ: 32 ವರ್ಷದ ಬಳಿಕ ಹೌಸ್ ಫುಲ್ ಆದ ಕಾಶ್ಮೀರದ ಥಿಯೇಟರ್

ಬಹುಭಾಷಾ ಹಿರಿಯ ನಟಿ ಜಮುನಾ ನಿಧನ

ಆಲ್ ಟೈಮ್ ರೆಕಾರ್ಡ್: ಮೊದಲ ದಿನ ಗಳಿಸಿದ್ದೆಷ್ಟು ಕಿಂಗ್ ಖಾನ್ ʼಪಠಾಣ್ʼ ಸಿನಿಮಾ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
