
ಕೋರ್ಟ್ ಮ್ಯಾರೇಜ್ ಬಳಿಕ ಸಾಂಪ್ರದಾಯಿಕ ವಿವಾಹದ ತಯಾರಿಯಲ್ಲಿ ನಿರತರಾದ ಸ್ವರಾ ಭಾಸ್ಕರ್
Team Udayavani, Mar 4, 2023, 6:00 PM IST

ಮುಂಬಯಿ: ನಟಿ ಸ್ವರಾ ಭಾಸ್ಕರ್ ರಾಜಕಾರಣಿ ಫಹಾದ್ ಜಿರಾರ್ ಅಹ್ಮದ್ ರನ್ನು ಮದುವೆಯಾಗಿರುವ ವಿಚಾರವನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದರು. ಈಗ ಸಾಂಪ್ರದಾಯಿಕ ವಿವಾಹದ ಅಂಗವಾಗಿ ಮತ್ತೊಮ್ಮೆ ಸ್ವರಾ ವಧುವಾಗಿ ಕಾಣಿಸಿಕೊಳ್ಳಲಿದ್ದಾರೆ.
ಜ.6 ರಂದು ಕೋರ್ಟ್ ನಲ್ಲಿ ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಯುವ ಘಟಕದ ಅಧ್ಯಕ್ಷರಾಗಿರುವ ಫಹಾದ್ ಜಿರಾರ್ ಅಹ್ಮದ್ ಎನ್ನುವವರನ್ನು ಮದುವೆಯಾಗಿದ್ದರು. ಇಬ್ಬರ ಮದುವೆಯ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸ್ವರಾ ಫೆ.16 ರಂದು ಹಂಚಿಕೊಂಡಿದ್ದರು.
ಕುಟುಂಬ ಹಾಗೂ ಆಪ್ತ ವರ್ಗದ ಮುಂದೆ ದಿಲ್ಲಿಯಲ್ಲಿ ಸ್ವರಾ – ಫಹಾದ್ ದಂಪತಿ ಸಾಂಪ್ರದಾಯಿಕವಾಗಿ ವಿವಾಹವಾಗಲಿದ್ದಾರೆ. ಮುಂದಿನ ವಾರದಿಂದ ಅಂದರೆ ಮಾರ್ಚ್ 11 ರಿಂದ ದಿಲ್ಲಿಯಲ್ಲಿ ಮಹೆಂದಿ, ಸಂಗೀತ್ ಕಾರ್ಯಕ್ರಮಗಳು ನಡೆಯಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಮಿಸಸ್.ಫಲಾನಿ ಚಿತ್ರದ ಶೂಟ್ ಮುಗಿಸಿ ದಿಲ್ಲಿಯ ಅಜ್ಜಿ ಮನೆಗೆ ಸ್ವರಾ ಧಾವಿಸಿ ಮೆಹೆಂದಿ, ಸಂಗೀತ್ ಕಾರ್ಯಕ್ರಮದ ತಯಾರಿಯಲ್ಲಿದ್ದಾರೆ.
ಕೋರ್ಟ್ ಮುದುವೆ ಆದ ಬಳಿಕ ಸ್ವರಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡು, ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಏನಾದರೂ ಇದ್ದರೂ, ಅದನ್ನು ನಾವು ಇನ್ನೆಲ್ಲೋ ದೂರದಲ್ಲಿ ಹುಡುಕುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ಮೊದಲು ಸ್ನೇಹವನ್ನು ಕಂಡುಕೊಂಡು, ನಮ್ಮನ್ನು ಅರ್ಥೈಸಿಕೊಂಡೆವು. ನನ್ನ ಹೃದಯಕ್ಕೆ ಸ್ವಾಗತ ಫಹಾದ್ ಎಂದು ಸ್ವರಾ ಬರೆದುಕೊಂಡಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್ – ನಯನತಾರಾ ನಟನೆ; ಯಾವ ಸಿನಿಮಾ?

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್ ಹಾಸನ್

Rashmika Mandanna: ‘ಅನಿಮಲ್’ ನಲ್ಲಿ ‘ಗೀತಾಂಜಲಿ’ ಆದ ರಶ್ಮಿಕಾ; ಫಸ್ಟ್ ಲುಕ್ ಔಟ್

Actor: ಶೂಟಿಂಗ್ ದುರಂತದಲ್ಲಿ 30 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ತಮಿಳು ನಟ ಬಾಬು ವಿಧಿವಶ