
‘Leo’ ಆಡಿಯೋ ಬಿಡುಗಡೆ ಕಾರ್ಯಕ್ರಮ ರದ್ದು; ರಾಜಕೀಯ ಒತ್ತಡವೇ ಕಾರಣವೆಂದ ದಳಪತಿ ಫ್ಯಾನ್ಸ್
ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿತ್ತು ಬೃಹತ್ ವೇದಿಕೆ
Team Udayavani, Sep 27, 2023, 11:26 AM IST

ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾದ ಹೈಪ್ ದಿನಕಳೆದಂತೆ ಹೆಚ್ಚಾಗುತ್ತಿದೆ. ಲೋಕೇಶ್ ಕನಕರಾಜ್ – ವಿಜಯ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳಿಗೆ ಸಿನಿಮಾದ ಮೇಲೆ ಡಬಲ್ ಕುತೂಹಲ ಮೂಡಿಸಿದೆ.
ಈಗಾಗಲೇ “ನಾ ರೆಡಿ” ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ರಿಲೀಸ್ ಡೇಟ್ ಸಮೀಪಿಸುತ್ತಿದೆ. ಇನ್ನೇನು ಲಕ್ಷಾಂತರ ಜನರ ಮುಂದೆ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸುವ ತಯಾರಿಯಲ್ಲಿದ್ದ ʼಲಿಯೋʼ ತಂಡ ಇದ್ದಕ್ಕಿದ್ದಂತೆ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ಅಭಿಮಾನಿಗಳಿಗೆ ಭಾರೀ ನಿರಾಶೆ ಮೂಡಿಸಿದೆ.
ಸೆಪ್ಟೆಂಬರ್ 30 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಲಿಯೋ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಬೇಕಿತ್ತು. ಇದರ ವೇದಿಕೆ ಕಾಮಗಾರಿ ಆರಂಭಗೊಂಡು ಪ್ರಗತಿಯಲ್ಲಿತ್ತು. ಸಾವಿರಾರು ಜನರು ದಳಪತಿ ವಿಜಯ್ ಅವರನ್ನು ನೋಡಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಅವರ ಉತ್ಸಾಹಕ್ಕೆ ಚಿತ್ರತಂಡ ತಣ್ಣೀರು ಎರಚಿದೆ.
ಪ್ರೊಡಕ್ಷನ್ ಸಂಸ್ಥೆ ಸವೆನ್ ಸ್ಕ್ರೀನ್ ಸ್ಟುಡಿಯೋ ಟ್ವೀಟ್ ಮಾಡಿ ʼಲಿಯೋʼ ಆಡಿಯೋ ಲಾಂಚ್ ಕಾರ್ಯಕ್ರಮ ರದ್ದು ಮಾಡಿದ್ದಾಗಿ ಹೇಳಿದೆ.
ʼಲಿಯೋʼ ಆಡಿಯೋ ಲಾಂಚ್ ಪಾಸ್ ಗಾಗಿ ನಿರೀಕ್ಷೆಗೂ ಮೀರಿ ಜನ ಪಾಸ್ ಗಳನ್ನು ಕೇಳುತ್ತಲೇ ಇದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಅಭಿಮಾನಿಗಳಿಗಾಗಿ ಸಿನಿಮಾ ಅಪ್ಡೇಟ್ ಗಳನ್ನು ನೀಡುತ್ತಿರುತ್ತೇವೆ. ನೀವೆಲ್ಲ ಅಂದುಕೊಂಡ ಹಾಗೆ ಇದು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದು ತೆಗೆದುಕೊಂಡ ನಿರ್ಧಾರವಲ್ಲ” ಎಂದು ನಿರ್ಮಾಣ ಸಂಸ್ಥೆ ಹೇಳಿದೆ.
ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಬರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ಅವರು ʼ ವಿಜಯ್ ಮಕ್ಕಳ್ ಇಯಕ್ಕಂʼ ಪರವಾಗಿ 10 ತರಗತಿಯ ಮಕ್ಕಳಿಗೆ ಸನ್ಮಾನ ಮಾಡಿದ್ದರು. ಇದಲ್ಲದೇ ಪಕ್ಷದ ಸಭೆಯನ್ನು ನಡೆಸಿದ್ದರು.
ಇದನ್ನೂ ಓದಿ: Yash: ಹಾಲಿವುಡ್ ನಿರ್ದೇಶಕರನ್ನು ಭೇಟಿಯಾದ ರಾಕಿಂಗ್ ಸ್ಟಾರ್ ಯಶ್; ಫೋಟೋ ವೈರಲ್
ಇದೇ ಕಾರಣದಿಂದ ʼಲಿಯೋʼ ಆಡಿಯೋ ಲಾಂಚ್ ರಾಜಕೀಯ ಕಾರಣವಾಗಿ ರದ್ದಾಗಿದೆ ಕೆಲವರು ವಾದಿಸಿದ್ದಾರೆ. ಆಡಳಿತ ಪಕ್ಷ ಡಿಎಂಕೆ ʼಲಿಯೋʼ ಆಡಿಯೋ ಲಾಂಚ್ ರದ್ದಾಗಲು ಕಾರಣವೆಂದು ಕೆಲವರು ‘ವಿ ಸ್ಟ್ಯಾಂಡ್ ವಿತ್ ಲಿಯೋ’ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ವಿಜಯ್ ಅವರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಪ್ರತ್ಯೇಕ ಅಭಿಮಾನಿಗಳ ವರ್ಗವೇ ಇದೆ. ಅವರು ʼವಾರಿಸುʼ ಸಿನಿಮಾದ ‘ಕುಟ್ಟಿ ಕಧೈ'(ಸಣ್ಣ ಕಥೆ) ಯನ್ನು ಹೇಳಿದ್ದು ವೈರಲ್ ಆಗಿತ್ತು.
ಈ ನಡುವೆ ʼಲಿಯೋʼ ಆಡಿಯೋ ಲಾಂಚ್ ಪಾಸ್ ಎಂದು ಅನೇಕರು ನಕಲಿ ಪಾಸ್ ಗಳನ್ನು ದುಡ್ಡಿಗಾಗಿ ಮಾರಾಟ ಮಾಡಿದ್ದಾರೆ.
ಅಂದಹಾಗೆ ಲೊಯೋ ಸಿನಿಮಾ ಅಕ್ಟೋಬರ್ 19 ರಂದು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Big B: ಸೊಸೆ ಐಶ್ವರ್ಯಾರನ್ನು ಅನ್‌ಫಾಲೋ ಮಾಡಿದ ಬಿಗ್‌ಬಿ?

Lakshmika Sajeevan: ಹಠಾತ್ ಹೃದಯಾಘಾತ; 24 ರ ಹರೆಯದಲ್ಲಿ ಖ್ಯಾತ ನಟಿ ಕೊನೆಯುಸಿರು

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Welcome to ‘Toxic’ World: ರಾಕಿಭಾಯ್ ಹೊಸ ಸಿನಿಮಾದ ಟೈಟಲ್ ಬಿಡುಗಡೆ