ಕೆಜಿಎಫ್ 2ಗೆ ಪೈಪೋಟಿ: ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಪಠಾಣ್!
Team Udayavani, Jan 18, 2023, 3:43 PM IST
ಮುಂಬಯಿ: ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಹಾಡು, ನೃತ್ಯ, ಟೀಸರ್ ,ಟ್ರೇಲರ್ ನಿಂದ ಸದ್ದು ಮಾಡಿದ್ದ ʼಪಠಾಣ್ʼ ನೋಡಲು ಕಿಂಗ್ ಖಾನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ವಿಶ್ವದೆಲ್ಲೆಡೆ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿರುವುದರಿಂದ ಜರ್ಮನಿ ದೇಶದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಜರ್ಮನಿಯಲ್ಲಿ ದಾಖಲೆಯ ಮಟ್ಟದಲ್ಲಿ ಸಿನಿಮಾದ ಟಿಕೆಟ್ ಬುಕ್ ಆಗಿವೆ. ಟಿಕೆಟ್ ಬುಕಿಂಗ್ ವಹಿವಾಟಿನಲ್ಲಿ ʼಪಠಾಣ್ʼ ರಿಲೀಸ್ ಗೂ ಮುನ್ನ ದಾಖಲೆ ಬರೆದಿದೆ. ʼಕೆಜಿಎಫ್ -2ʼ ಸಿನಿಮಾದ ದಾಖಲೆಯನ್ನು ʼಪಠಾಣ್ʼ ಹಿಂದಿಕ್ಕಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಣಿಪಾಲ: ಶಕಲಕ ಬೂಂಬೂಂ ತುಳು ಚಿತ್ರದ ಬೊಂಬಾಟ್ ಟ್ರೈಲರ್ ಬಿಡುಗಡೆ
ಸಿನಿಮಾ ಬಿಡುಗಡೆಗೆ 9 ದಿನ ಇರುವಾಗ ಕೆಜಿಎಫ್-2 ಚಿತ್ರ 1.2 ಕೋಟಿ ಟಿಕೆಟ್ ಗಳು ಅಡ್ವಾನ್ಸ್ ಬುಕ್ ಆಗಿದ್ದವು. ಇತ್ತ ʼಪಠಾಣ್ʼ ಸಿನಿಮಾಕ್ಕಾಗಿ 1.32 ಕೋಟಿ ಟಿಕೆಟ್ ಗಳು ಅಡ್ವಾನ್ಸ್ ಆಗಿ ಬುಕ್ ಆಗಿದೆ. ಆಸ್ಟ್ರೇಲಿಯಾದಲ್ಲೂ ಶಾರುಖ್ ಸಿನಿಮಾದ ಟಿಕೆಟ್ ಗಳು ಭರ್ಜರಿಯಾಗಿ ಸೇಲ್ ಆಗುತ್ತಿದೆ.
ಭಾರತದಲ್ಲಿ ಜ.20 ರಿಂದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭವಾಗಲಿದೆ ಎನ್ನಲಾಗಿದೆ. ಭಾರತದಲ್ಲಿ ಸಿನಿಮಾದ ಮೊದಲ ದಿನ ಕಲೆಕ್ಷನ್ 40 ಕೋಟಿ ಆಗಬಹುದು, ಮೊದಲ ವಾರಕ್ಕೆ 175 -200 ಕೋಟಿ ದಾಟಬಹುದುದೆಂದು ಊಹಿಸಲಾಗಿದೆ. ಸಿದ್ಧಾರ್ಥ್ ಆನಂದ ನಿರ್ದೇಶನದ ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ , ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ