
ಧೋನಿ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಇವರೇ ನಾಯಕ – ನಾಯಕಿ
Team Udayavani, Oct 27, 2022, 5:31 PM IST

ತಮಿಳುನಾಡು: ಎಂ.ಎಸ್.ಧೋನಿ ತಮ್ಮ ಪತ್ನಿಯೊಂದಿಗೆ ಸೇರಿ ಧೋನಿ ಎಂಟರ್ಟೈನ್‌ಮೆಂಟ್ ಮೂಲಕ ಸಿನಿಮಾವನ್ನು ನಿರ್ಮಾಣ ಮಾಡಲು ಹೊರಟಿರುವುದು ಗೊತ್ತೇ ಇದೆ. ಇತ್ತೀಚೆಗೆ ಧೋನಿ ಎಂಟರ್ಟೈನ್‌ಮೆಂಟ್ ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು.
ಇದನ್ನೂ ಓದಿ:ಆಪರೇಶನ್ ಕಮಲ ಆರೋಪ-ಇಡೀ ನಾಟಕದ ಸೂತ್ರಧಾರಿ ಕೆಸಿಆರ್: ಬಿಜೆಪಿ ತಿರುಗೇಟು
ಮೈದಾನದಲ್ಲಿ ಕ್ಯಾಪ್ಟನ್ ಕೂಲ್ ಆಗಿ ಮೆರೆದ ಧೋನಿ ಸಿನಿ ರಂಗದಲ್ಲಿ ನಿರ್ಮಾಪಕರಾಗಿ ಹೆಜ್ಜೆಯಿಡಲು ರೆಡಿಯಾಗಿದ್ದಾರೆ. ಅವರ ಮೊದಲ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸುದ್ದಿಯೊಂದು ಹೊರ ಬಿದ್ದಿದೆ.
ʼಅಥರ್ವ ದಿ ಒರಿಜಿನ್’ ಗ್ರಾಫಿಕ್ ಕಾದಂಬರಿಯನ್ನು ಬರೆದ ಲೇಖಕ ರಮೇಶ್ ತಮಿಳ್‌ಮಣಿ, ಧೋನಿ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ʼತಲʼ ಅವರ ನಿರ್ಮಾಣದ ಮೊದಲ ಸಿನಿಮಾದಲ್ಲಿ ಯಾರು ನಾಯಕನಾಗಿ ನಟಿಸಲಿದ್ದಾರೆ, ಯಾವ ಬಗೆಯ ಸಿನಿಮಾ ಎನ್ನುವುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ.
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹರೀಶ್ ಕಲ್ಯಾಣ್ ನಾಯಕನಾಗಿ, ಪ್ರಿಯಾಂಕ ಅರುಲ್ ಮೋಹನ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಆದರೆ ಇದನ್ನು ಚಿತ್ರತಂಡ ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಶೀಘ್ರದಲ್ಲಿ ಅಧಿಕೃತ ಮಾಹಿತಿ ಬರಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ

Sreeleela: ಪ್ರಭಾಸ್‌ಗೆ ಶ್ರೀಲೀಲಾ ನಾಯಕಿ!
MUST WATCH
ಹೊಸ ಸೇರ್ಪಡೆ

Congress ಸರಕಾರ ವರ್ಚಸ್ಸು ಕಳೆದುಕೊಂದು ಆಪರೇಷನ್ ಗೆ ಮುಂದಾಗಿದೆ: ಬೊಮ್ಮಾಯಿ ಕಿಡಿ

Karnataka Bandh; ಕರಾವಳಿಯಲ್ಲಿ ಸಂಘಟನೆಗಳಿಂದ ನೈತಿಕ ಬೆಂಬಲ; ಬಸ್ ಸಂಚಾರ ಎಂದಿನಂತೆ

Belagavi ಜಿಲ್ಲೆಯಲ್ಲಿ ನಾಳೆಯಿಂದ ಮೋಡ ಬಿತ್ತನೆ: ಸಚಿವ ಸತೀಶ್ ಜಾರಕಿಹೊಳಿ

Vijayapura; ಈದ್ ಮೆರವಣಿಗೆಯಲ್ಲಿ ಯತ್ನಾಳ ಭಾವಚಿತ್ರದ ಬ್ಯಾನರ್ ಗೆ ಹಾನಿ

World Cup ; ಹೈದರಾಬಾದ್ ನಲ್ಲಿ ‘ಅನಿರೀಕ್ಷಿತ’ ಸ್ವಾಗತ ಕಂಡು ಪಾಕ್ ತಂಡ ಫುಲ್ ಖುಷ್