
ಬಾತ್ ರೂಮ್ ನಲ್ಲಿ ಏಕಾಏಕಿ ಕುಸಿದು ಬಿದ್ದು ಖ್ಯಾತ ನಟಿ ನೀಲು ಕೊಹ್ಲಿ ಅವರ ಪತಿ ಮೃತ್ಯು
Team Udayavani, Mar 25, 2023, 12:14 PM IST

ಮುಂಬಯಿ: ಬಾತ್ ರೂಮ್ ನಲ್ಲಿ ಏಕಾಏಕಿ ಕುಸಿದು ಬಿದ್ದು ಜನಪ್ರಿಯ ಕಿರುತೆರೆ ನಟಿ ನೀಲು ಕೊಹ್ಲಿ ಅವರ ಪತಿ ಮೃತಪಟ್ಟಿದ್ದಾರೆ.
ಶುಕ್ರವಾರ (ಮಾ.24 ರಂದು) ಮಧ್ಯಾಹ್ನದಂದು ಹರ್ಮಿಂದರ್ ಸಿಂಗ್ ಕೊಹ್ಲಿ ಗುರುದ್ವಾರದಿಂದ ಮರಳಿ ಬಂದು ಮನೆಯ ಬಾತ್ ರೂಮ್ ಗೆ ಹೋಗಿದ್ದಾರೆ. ಮನೆಯಲ್ಲಿ ಕೆಲಸದಾಳು ಮಾತ್ರ ಇದ್ದರು. ಬಾತ್ ರೂಮ್ ನಿಂದ ಹೊರ ಬರದಿದ್ದಾಗ ಕೆಲ ಸಮಯದ ಬಳಿಕ ಕೆಲಸದಾಳು ಹೋಗಿ ನೋಡಿದ್ದಾರೆ. ಈ ವೇಳೆ ಕುಸಿದು ಬಿದ್ದಿರುವ ಸ್ಥಿತಿಯಲ್ಲಿ ಹರ್ಮಿಂದರ್ ಸಿಂಗ್ ಕೊಹ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: Health: ಒಂದು ಬಾಟಲ್ ಬಿಯರ್/ 1 ಪೆಗ್ ಕುಡಿಯೋದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮ ಗೊತ್ತಾ?
ಕೂಡಲೇ ವಿಷಯ ಮನೆಯವರಿಗೆ ಗೊತ್ತಾಗಿದ್ದು, ನೀಲು ಅವರ ಮಗಳು ಸಾಹಿಬಾ ತಂದೆಯ ನಿಧನದ ಸುದ್ದಿಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ತಾಯಿ ಆರೋಗ್ಯ ಸ್ಥಿತಿ ಈಗ ಸರಿಯಿಲ್ಲ. ಸಹೋದರ ಇನ್ನಷ್ಟೇ ಬರಬೇಕು. ಎರಡು ದಿನದ ಬಳಿಕ ತಂದೆಯ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಿದ್ದಾರೆ.
ಸಿನಿಮಾ ರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ತನ್ನ ಪಾತ್ರಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ನೀಲು ಕೊಹ್ಲಿ ʼಆಹತ್ʼ ,ʼದಿಲ್ ಕ್ಯಾ ಕರೇʼ , ಹೌಸ್‌ಫುಲ್ 2, ʼಹಿಂದಿ ಮೀಡಿಯಮ್ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್