ಬಾಲಿವುಡ್ ಖ್ಯಾತ ಸ್ಟಂಟ್ ನಿರ್ದೇಶಕ ವೀರೂ ದೇವಗನ್ ವಿಧಿವಶ

Team Udayavani, May 27, 2019, 5:28 PM IST

ನವದೆಹಲಿ:ಬಾಲಿವುಡ್ ನ ಖ್ಯಾತ ಹಿರಿಯ ಸ್ಟಂಟ್ ಕೋರಿಯೋಗ್ರಾಫರ್ ವೀರೂ ದೇವಗನ್ (85ವರ್ಷ) ಸೋಮವಾರ ಮುಂಬೈಯಲ್ಲಿ ವಿಧಿವಶರಾಗಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅವರ ತಂದೆ ವೀರೂ ದೇವಗನ್.

ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಇಂದು ಸಂಜೆ 6ಗಂಟೆ ನಂತರ ಮುಂಬೈನ ವಿಲೇ ಪಾರ್ಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದೆ. ವಯೋ ಸಹಜ ಅನಾರೋಗ್ಯದಿಂದ ವೀರೂ ದೇವಗನ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ದೇವಗನ್ ಕುಟುಂಬದ ಮೂಲಗಳು ಹೇಳಿವೆ.

ವೀರೂ ದೇವಗನ್ ಅವರು ಖ್ಯಾತ ಸ್ಟಂಟ್ ನಿರ್ದೇಶಕರಾಗಿದ್ದರು. ಮುಖ್ಯವಾಗಿ 1990ರ ದಶಕದಲ್ಲಿ ದೇವಗನ್ ಅವರು ಬಾಲಿವುಡ್ ನಲ್ಲಿ ಬೇಡಿಕೆಯ ಸ್ಟಂಟ್ ನಿರ್ದೇಶಕರಾಗಿದ್ದರು. ಸುಮಾರು 80 ಬಾಲಿವುಡ್ ಸಿನಿಮಾಗಳಿಗೆ ಕೋರಿಯೋಗ್ರಾಫರ್ ಆಗಿದ್ದರು ಎಂದು ವರದಿ ವಿವರಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ