
Kollywood: ಪೋಷಕ ನಟನ ಕಾರು ಢಿಕ್ಕಿ; ಸಹಾಯಕ ನಿರ್ದೇಶಕ ಸ್ಥಳದಲ್ಲೇ ಮೃತ್ಯು
Team Udayavani, Jun 9, 2023, 10:07 AM IST

Kollywood: ಪೋಷಕ ನಟನ ಕಾರು ಢಿಕ್ಕಿ ಹೊಡೆದು ಸಹಾಯಕ ನಿರ್ದೇಶಕ,ನಟ ಮೃತ್ಯು
ಚೆನ್ನೈ: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶರಣ್ ರಾಜ್ (26) ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುರುವಾರ (ಜೂ.8 ರಂದು) ರಾತ್ರಿ 11:30 ರ ಹೊತ್ತಿಗೆ ಕೆ.ಕೆ. ನಗರ್ ನಲ್ಲಿ ತನ್ನ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಅವರ ಬೈಕ್ ಗೆ ಢಿಕ್ಕಿ ಹೊಡಿದಿದೆ. ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಶರಣ್ ರಾಜ್ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ.
ಇದನ್ನೂ ಓದಿ: Hyderabad: ನೇಣು ಬಿಗಿದು ಮಗಳು ಆತ್ಮಹತ್ಯೆ; ವಾಮಾಚಾರವೇ ಘಟನೆಗೆ ಕಾರಣವೆಂದ ಪೋಷಕರು
ಸ್ಥಳೀಯರು ಕೂಡಲೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಲಿವುಡ್ ನಲ್ಲಿ ಸಹನಟನಾಗಿ ಗುರುತಿಸಿಕೊಂಡಿರುವ ಪಳನಿಯಪ್ಪನ್ ಅವರ ಕಾರು ಅಪಘಾತವನ್ನು ಎಸೆಗಿದೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪಳನಿಯಪ್ಪನ್ ಅವರನ್ನು ಬಂಧಿಸಲಾಗಿದೆ.
ಭಾರತೀಯ ಸಿನಿಮಾರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳಾದ ʼ ವಡಾ ಚೆನ್ನೈʼ ಹಾಗೂ ʼಅಸುರನ್ʼ ಸಿನಿಮಾದಲ್ಲಿ ಶರಣ್ ರಾಜ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ʼಅಸುರನ್ʼ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲೂ ಅವರು ನಟಿಸಿದ್ದಾರೆ.
ಶರಣ್ ರಾಜ್ ಅವರ ಹಠಾತ್ ನಿಧನಕ್ಕೆ ಕಾಲಿವುಡ್ ಕಂಬನಿ ಮಿಡಿದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leo 2nd Song ರಿಲೀಸ್: “Badass” ಮೂಲಕ ಹೈಪ್ ಹೆಚ್ಚಿಸಿದ ʼಲಿಯೋದಾಸ್ʼ

Vivek Agnihotri ಅವರ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾಕ್ಕೆ ಪೈರಸಿ ಕಾಟ; HD ಕಾಪಿ ಲೀಕ್

Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ

Jawan ತಂಡದಿಂದ ಪ್ರೇಕ್ಷಕರಿಗೆ ʼಬೈ1 ಗೆಟ್ 1 ಫ್ರೀʼ ಟಿಕೆಟ್ ಆಫರ್ ಘೋಷಿಸಿದ ಶಾರುಖ್ ಖಾನ್

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ
MUST WATCH
ಹೊಸ ಸೇರ್ಪಡೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ