ತನ್ನ ಮೆಚ್ಚಿನ ನಟನ ಭೇಟಿಗಾಗಿ 900 ಕೀ.ಮಿ ದೂರ ನಡೆದುಕೊಂಡು ಬಂದ..!

Team Udayavani, Sep 1, 2019, 4:55 PM IST

ನವದೆಹೆಲಿ: ನಿಮ್ಮ ಮೆಚ್ಚಿನ ಸಿನಿಮಾ ಕಲಾವಿದರು ನಿಮ್ಮ ಜೊತೆ ಒಂದು ಸೆಲ್ಫಿ ತೆಗಿಸಿಕೊಂಡರೆ ತುಂಬಾ ಖುಷಿ ಪಡ್ತೀರ ಅಲ್ವಾ? ಇನ್ನೂ ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯರಿಗಾಗಿ ಕೈರ ಮೇಲೆ ಟ್ಯಾಟೋ ಹಾಕಿಕೊಳ್ಳುತ್ತಾರೆ. ಇಲ್ಲೊಬ್ಬ ಅಭಿಮಾನಿ ತನ್ನ ಮೆಚ್ಚಿನ ನಟನನ್ನು ಭೇಟಿಯಾಗಲು 900 ಕಿ.ಮಿ. ನಡೆದುಕೊಂಡು ಬಂದಿದ್ದಾರೆ.!

ಗುಜರಾತಿನ ಪರ್ಬತ್ ಎನ್ನುವ ಹುಡುಗ  ನಟ ಅಕ್ಷಯ್ ಕುಮಾರ್  ಭೇಟಿಯಾಗಲು ದ್ವಾರಕಾದಿಂದ ಬರೋಬ್ಬರಿ 900 ಕೀ.ಮಿ ದೂರ ನಡೆದುಕೊಂಡೇ ಮುಂಬಯಿ ವರೆಗೆ ಬಂದಿದ್ದಾರೆ. ಪರ್ಬತ್ ಕಳೆದ ಹದಿನೆಂಟು ದಿನಗಳಿಂದ ಸುಮಾರು 900 ಕೀ.ಮಿ ದೂರ ಕ್ರಮಿಸಿಕೊಂಡು ಬಂದಿದ್ದಾರೆ. ಇಂದು ಕೊನೆಗೂ ಅಕ್ಷಯ್ ಕುಮಾರ್ ಭೇಟಿಯಾಗಿದ್ದಾರೆ.

ಅಕ್ಷಯ್ ಕುಮಾರ್ ತನ್ನ ಅಭಿಮಾನಿಯ ಈ ಕಥೆಯನ್ನು ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೆಲ್ಫಿ ತೆಗೆಸಿಕೊಂಡು ಇನ್ನೊಮ್ಮೆ ಈ ರೀತಿ ಮಾಡಬೇಡ ಅನ್ನುವ ಕಿವಿ ಮಾತನ್ನು ಹೇಳಿದ್ದಾರೆ. ತಾನು ಯಾವಗಲೂ ಶಾರೀರಿಕವಾಗಿ ಸಧೃಡವಾಗಿ ಇರಲು ಇಚ್ಛಿಸುತ್ತೇನೆ ಅದಕ್ಕಾಗಿ ನಿಮ್ಮನ್ನು ಭೇಟಿಯಾಗಲು ನಡೆದುಕೊಂಡು ಬಂದಿದ್ದೇನೆ ಎನ್ನುತ್ತಾರೆ ಪರ್ಬತ್.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ