MM Keeravani: “ಭಾರತದಲ್ಲಿ ಸಂಗೀತ ತಾರೆಯರಿಲ್ಲ…” ಆಸ್ಕರ್‌ ವಿಜೇತ ಎಂಎಂ ಕೀರವಾಣಿ

Team Udayavani, Sep 26, 2023, 2:42 PM IST

MM Keeravani: “ಭಾರತದಲ್ಲಿ ಸಂಗೀತ ತಾರೆಯರಿಲ್ಲ…” ಆಸ್ಕರ್‌ ವಿಜೇತ ಎಂಎಂ ಕೀರವಾಣಿ

ಹೈದರಾಬಾದ್: ನಮ್ಮಲ್ಲಿ ಸಂಗೀತ ತಾರೆಯರಿಲ್ಲ. ಚಲನಚಿತ್ರಗಳ ಮೇಲೆ ಅವಲಂಬಿತರಾಗಿರುವ ಹಿನ್ನೆಲೆ ಗಾಯಕರರಿದ್ದಾರೆ ಎಂದು ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಹೇಳಿದ್ದಾರೆ.

ʼಆರ್‌ ಆರ್‌ ಆರ್‌ʼ ಸಿನಿಮಾದ ʼನಾಟು ನಾಟುʼ ಹಾಡಿನ ಮೂಲಕ ಅಂತಾರಾಷ್ಟ್ರೀಯವಾಗಿ ಮಿಂಚಿ, ಆಸ್ಕರ್‌ ಪ್ರಶಸ್ತಿ ತಂದುಕೊಟ್ಟ ಎಂಎಂ ಕೀರವಾಣಿ ಅವರು ಭಾರತ ಸಂಗೀತ ಲೋಕದ ನೂನ್ಯತೆಗಳ ಬಗ್ಗೆ ಮಾತನಾಡಿದ್ದಾರೆ.

“ಭಾರತದಲ್ಲಿ ಮ್ಯೂಸಿಕ್‌ ಎನ್ನುವುದು ಸಿನಿಮಾಗಳ ಮೇಲೆಯೇ ಹೆಚ್ಚು ಆವಲಂಬಿತವಾಗಿದೆ. ಸಂಗೀತ ಕಲಾವಿದರು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ತಮ್ಮ ಕೆಲಸಕ್ಕಾಗಿ ಚಲನಚಿತ್ರ ನಿರ್ಮಾಪಕರ ಮೇಲೆ ಅವಲಂಬಿತರಾಗಿದ್ದಾರೆ. ಕೊನೆಯದಾಗಿ ನಮ್ಮ ಹಾಡು ಮಹತ್ವ ಪಡೆದುಕೊಳ್ಳುವುದು ಸಿನಿಮಾದ ಯಶಸ್ಸಿನ ಮೇಲೆ. ಸಿನಿಮಾ ಯಶಸ್ಸಾದರೆ ಹಾಡು ಕೂಡ ಜನಮನ್ನಣೆಯನ್ನು ಗಳಿಸಿಕೊಳ್ಳುತ್ತದೆ. ಗಾಯಕರು ತಾವು ಆಗಿಯೇ ಸ್ವಂತವಾಗಿ ಮಿಂಚಲು ಆಗಲುವುದಿಲ್ಲ ಎನ್ನುವುದೇ ಬೇಸರದ ಸಂಗತಿ. ನಮಗೆ ಹೆಚ್ಚು ಹೆಚ್ಚು ಸ್ವತಂತ್ರ ಸಂಗೀತಗಾರರ ಅಗತ್ಯವಿದೆ” ಎಂದಿದ್ದಾರೆ.

ಇದನ್ನೂ ಓದಿ: Dadasaheb Phalke: ಹಿರಿಯ ನಟಿ ವಹೀದಾ ರೆಹಮಾನ್‌ ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಗೌರವ

ಭಾರತದ ಸಂಗೀತವನ್ನು ಪಾಶ್ಚಿಮಾತ್ಯದೊಂದಿಗೆ ಹೋಲಿಕೆ ಮಾಡಿ ಹೇಳಿರುವ ಅವರು, “ನಮ್ಮಲ್ಲಿ “ಒಬ್ಬರು ಸಂಗೀತ ಮಾಡುತ್ತಾರೆ, ಇನ್ನೊಬ್ಬರು ಸಾಹಿತ್ಯವನ್ನು ಬರೆಯುತ್ತಾರೆ, ಮೂರನೆಯವರು ಹಾಡುತ್ತಾರೆ, ನಾಲ್ಕನೆಯವರು ಅದನ್ನು ಸಿದ್ದಪಡಿಸುತ್ತಾರೆ ಮತ್ತು ಇನ್ನೊಬ್ಬರು ಅದರಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಡಿನಲ್ಲಿ ಹೆಚ್ಚಾಗಿ ಚಲನಚಿತ್ರ ತಾರೆ ಅಥವಾ ಯಾವುದೇ ಮಾಧ್ಯಮದ ಜನಪ್ರಿಯ ನಟ ಕಾಣಿಸಿಕೊಳ್ಳುತ್ತಾರೆ. ಆದರೆ ಅಂತಾರಾಷ್ಟ್ರೀಯದಲ್ಲಿ ಹೀಗೆ ಆಗಲ್ಲ. ಅಲ್ಲಿ ಒಬ್ಬ ವ್ಯಕ್ತಿಯೇ ಹಾಡಿನಿಂದ ಹಿಡಿದು ಸಾಹಿತ್ಯದವರೆಗೆ ಎಲ್ಲವನ್ನೂ ಮಾಡುತ್ತಾನೆ. ಆದಲ್ಲದೇ ಅವರೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಿನ ಕಲಾವಿದರಿಗೆ ಫ್ಯಾನ್‌ ಬೇಸ್‌ ಹೆಚ್ಚಿರುತ್ತದೆ. ನಮ್ಮಲ್ಲಿ ಸಂಗೀತ ತಾರೆಯರಿಲ್ಲ, ಹಿನ್ನೆಲೆ ಗಾಯಕರಿದ್ದಾರೆ. ಇದು ಪ್ರಮುಖ ವ್ಯತ್ಯಾಸವಾಗಿದೆ ಮತ್ತು ಈ ಪರಿಸ್ಥಿತಿಯು ಪ್ರೋತ್ಸಾಹದಾಯಕವಾಗಿಲ್ಲ” ಎಂದು ಅವರು ಹೇಳಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಸಂಗೀತವನ್ನು ಸ್ವೀಕರಿಸುತ್ತಿರುವ ವಿಧಾನವೇ ಬದಲಾಗಿದೆ. ಕಲಾವಿದರು ಈ ವಿಧಾನಕ್ಕೆ ಹೊಂದಿಕೊಳ್ಳಬೇಕು. 70, 80 ರ ದಶಕದಲ್ಲಿ ಜನ ಹಾಡನ್ನು ಕೇಳಲು ಇಷ್ಟಪಡುತ್ತಿದ್ದರು. ಈಗ ಜನ ಅದನ್ನು ದೃಶ್ಯವಾಗಿ ನೋಡಲು ಇಷ್ಟಪಡುತ್ತಾರೆ. ಹಾಡನ್ನು ವಿಡಿಯೋ ಮೂಲಕ ನೋಡುವುದರಿಂದ ಅದರಲ್ಲಿ ಕಲಾವಿದರೇ ಸ್ಟಾರ್‌ ಗಳಾಗಿ ಮಿಂಚುತ್ತಾರೆ” ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

Revanth Reddy to be next Telangana Chief Minister

Telangana Congress; ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಆಯ್ಕೆ

NCRB report; ಈ ನಗರವು ದೇಶದ ಅತ್ಯಂತ ಸುರಕ್ಷಿತ ನಗರ

NCRB report; ಈ ನಗರವು ದೇಶದ ಅತ್ಯಂತ ಸುರಕ್ಷಿತ ನಗರ

ತುಳುನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಶಿರ್ವ ನಡಿಬೆಟ್ಟು ಚಾವಡಿ ಮನೆ

Heritage; ತುಳುನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಶಿರ್ವ ನಡಿಬೆಟ್ಟು ಚಾವಡಿ ಮನೆ

Goa ಸಚಿವ ಸಂಪುಟ ಪುನಾರಚನೆ ಇಲ್ಲ: ಸಿಎಂ ಪ್ರಮೋದ್ ಸಾವಂತ್

Goa ಸಚಿವ ಸಂಪುಟ ಪುನಾರಚನೆ ಇಲ್ಲ: ಸಿಎಂ ಪ್ರಮೋದ್ ಸಾವಂತ್

Fadnavis: 2024ರಲ್ಲಿ ಫಡ್ನವೀಸ್‌ ಮಹಾ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸ್ತಾರೆ- ಕುಲೆ

Fadnavis: 2024ರಲ್ಲಿ ಫಡ್ನವೀಸ್‌ ಮಹಾ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸ್ತಾರೆ- ಕುಲೆ

Moodigere: ಕಾಡುಕೋಣ ದಾಳಿ… ಕಾಫಿತೋಟದ ಮ್ಯಾನೇಜರ್ ಕಾಲಿಗೆ ಗಾಯ

Moodigere: ಕಾಡುಕೋಣ ದಾಳಿ… ಕಾಫಿತೋಟದ ಮ್ಯಾನೇಜರ್ ಕಾಲಿಗೆ ಗಾಯ

Madhya Pradesh; ನಾನು ಸಿಎಂ ಸ್ಥಾನದ ಸ್ಪರ್ಧಿಯಲ್ಲ..: ಶಿವರಾಜ್ ಸಿಂಗ್ ಚೌಹಾಣ್

Madhya Pradesh; ನಾನು ಸಿಎಂ ಸ್ಥಾನದ ಸ್ಪರ್ಧಿಯಲ್ಲ..: ಶಿವರಾಜ್ ಸಿಂಗ್ ಚೌಹಾಣ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh Phadnis: ಫಲಿಸದ ಚಿಕಿತ್ಸೆ… ‘CID’ ಖ್ಯಾತಿಯ ದಿನೇಶ್ ಫಡ್ನಿಸ್ ನಿಧನ

Dinesh Phadnis: ಫಲಿಸದ ಚಿಕಿತ್ಸೆ… ‘CID’ ಖ್ಯಾತಿಯ ದಿನೇಶ್ ಫಡ್ನಿಸ್ ನಿಧನ

‘Animal’ box office: ಎರಡೇ ದಿನದಲ್ಲಿ 100 ಕೋಟಿ ಕ್ಲಬ್‌ ಸೇರಿದ ʼಅನಿಮಲ್‌ʼ

‘Animal’ box office: ಎರಡೇ ದಿನದಲ್ಲಿ 100 ಕೋಟಿ ಕ್ಲಬ್‌ ಸೇರಿದ ʼಅನಿಮಲ್‌ʼ

Dinesh Phadnis: ʼಸಿಐಡಿʼ ಧಾರಾವಾಹಿಯ ನಟನಿಗೆ ಹೃದಯಾಘಾತ

Dinesh Phadnis: ʼಸಿಐಡಿʼ ಧಾರಾವಾಹಿಯ ನಟನಿಗೆ ಹೃದಯಾಘಾತ

1-sadsad

Kantara A Legend:Chapter 1; ಪ್ರತಿ ಚಿತ್ರದಲ್ಲೂ ಯಶಸ್ಸಿನ ಬೆನ್ನತ್ತುವುದಿಲ್ಲ: ರಿಷಬ್

ಪ್ಯಾನ್‌ ಇಂಡಿಯಾವಾಗಿ ತೆರೆ ಕಾಣಲಿದೆ ʼಸಿಲ್ಕ್‌ ಸ್ಮಿತಾ‌ʼ ಬಯೋಪಿಕ್: ಫಸ್ಟ್‌ ಲುಕ್‌ ಔಟ್

ಪ್ಯಾನ್‌ ಇಂಡಿಯಾವಾಗಿ ತೆರೆ ಕಾಣಲಿದೆ ʼಸಿಲ್ಕ್‌ ಸ್ಮಿತಾ‌ʼ ಬಯೋಪಿಕ್: ಫಸ್ಟ್‌ ಲುಕ್‌ ಔಟ್

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

table tennis

Sirsi: ರಾಜ್ಯ ಮಟ್ಟದ ಪ್ರಾಥಮಿಕ-ಪ್ರೌಢ ಶಾಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಚಾಲನೆ

Revanth Reddy to be next Telangana Chief Minister

Telangana Congress; ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಆಯ್ಕೆ

NCRB report; ಈ ನಗರವು ದೇಶದ ಅತ್ಯಂತ ಸುರಕ್ಷಿತ ನಗರ

NCRB report; ಈ ನಗರವು ದೇಶದ ಅತ್ಯಂತ ಸುರಕ್ಷಿತ ನಗರ

ಬೆಳಗಾವಿ: ಸುವರ್ಣ ವಿಧಾನಸೌಧ ಬಳಿ ರೈತರ ಪ್ರತಿಭಟನೆ

ಬೆಳಗಾವಿ: ಸುವರ್ಣ ವಿಧಾನಸೌಧ ಬಳಿ ರೈತರ ಪ್ರತಿಭಟನೆ

ಆನೆಗುಡ್ಡೆ: ರಾಜ್ಯ ಮಟ್ಟದ ಕುಣಿತ ಭಜನ ಸ್ಪರ್ಧೆ ಫಲಿತಾಂಶ

ಆನೆಗುಡ್ಡೆ: ರಾಜ್ಯ ಮಟ್ಟದ ಕುಣಿತ ಭಜನ ಸ್ಪರ್ಧೆ ಫಲಿತಾಂಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.