
‘ಭಾರತ ರತ್ನ’ ವಾಜಪೇಯಿ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ: ಪಂಕಜ್ ತ್ರಿಪಾಠಿ
Team Udayavani, Nov 23, 2022, 6:43 PM IST

ಪಣಜಿ: ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತಾದ ‘ಭಾರತ ರತ್ನ’ ಚಲನಚಿತ್ರವನ್ನು ಇತ್ತೀಚೆಗೆ ಘೋಷಿಸಲಾಗಿದ್ದು, ನಾಯಕ ನಟನಾಗಿ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು,ಆ ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಹಿಂದಿ ಚಿತ್ರರಂಗದ ಖ್ಯಾತ ನಟ ಹಾಗೂ ವಿವಿಧ ವೆಬ್ ಸೀರಿಸ್ ಮೂಲಕ ಕಲಾ ಲೋಕದಲ್ಲಿ ಸಂಚಲನ ಮೂಡಿಸಿದ್ದ ಖ್ಯಾತ ಕಲಾವಿದ ಪಂಕಜ್ ತ್ರಿಪಾಠಿ ಹೇಳಿದ್ದಾರೆ.
ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯುತ್ತಿರುವ 53 ನೇಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉಪಸ್ಥಿತರಿದ್ದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಿಕ್ಕಿದ್ದು ವಾಜಪೇಯಿ ಅವರ ಪಾತ್ರ. ದೇಶದ ರಾಜಕೀಯ ಮತ್ತು ಸಾಮಾಜಿಕ ಉದ್ದೇಶದಲ್ಲಿ ಅವರ ಅತ್ಯುನ್ನತ ಸಾಧನೆಯಿಂದ ಉತ್ತುಂಗ ಶಿಖರಕ್ಕೇರಿದ ಅಟಲ್ ಜಿ ರವರ ಜೀವನಾಧಾರಿತ ಚಲನಚಿತ್ರವನ್ನು ನಿರ್ಮಿಸಲು ವಿನೋದ್ ಭಾನುಶಾಲಿ ಹಾಗೂ ಸಂದೀಪ ಸಿಂಗ್ ರವರು ಶ್ರಮವಹಿಸಿದ್ದಾರೆ. ‘ನಾನು ಇರಲಿ ಅಥವಾ ಇಲ್ಲದಿರಲಿ ‘ಯೇ ದೇಶ್ ರೆಹನಾ ಚಾಹಿಯೆ’ ಎಂದು ಜನಪ್ರಿಯತೆಯ ಉತ್ತುಂಗಕ್ಕೇರಿದ ದೇಶದ ಮಹಾನ್ ಪುತ್ರ ಹಾಗೂ ಮಾಜಿ ಪ್ರಧಾನಿ ಅಟಲ್‍ಜಿ ರವರ ಚಲನಚಿತ್ರ ರೂಪದಲ್ಲಿ ಹೊರತರಲು ಹೆಚ್ಚಿನ ಪ್ರಯತ್ನ ನಡೆಸಲಾಗಿದೆ ಎಂದು ತ್ರಿಪಾಠಿ ಹೇಳಿದರು.
‘ದಿ ಅನ್‍ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಅಂಡ್ ಪ್ಯಾರಡಾಕ್ಸ್’ ಈ ಪುಸ್ತಕವನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ವಾಜಪೇಯಿ ಅವರ ಜೀವನಾಧಾರಿತ ಚಿತ್ರವು ಖಂಡಿತವಾಗಿಯೂ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂದು ತ್ರಿಪಾಠಿ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್ ಚಿತ್ರಕ್ಕೆ ಗೋಲ್ಡನ್ ಪೀಕಾಕ್ ಪ್ರಶಸ್ತಿ

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ