ಚಿತ್ರ ವಿಮರ್ಶೆ; ಆದಿವಾಸಿಗಳ ಅರಣ್ಯರೋಧನದ ಚಿತ್ರರೂಪ 19.20.21

Team Udayavani, Mar 4, 2023, 9:58 AM IST

19 20 21 movie review

ಸ್ವತಂತ್ರ್ಯ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ಹಕ್ಕುಗಳಿವೆ. ಎಲ್ಲರನ್ನೂ ಸಾಮಾನವಾಗಿ ಕಾಣುವ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುವ ಮತ್ತು ಎಲ್ಲರೂ ಸಮಾನವಾಗಿ ಬದುಕ ಬೇಕೆಂಬ ಉದ್ದೇಶದಿಂದ ಭಾರತದ ಸಂವಿಧಾನವೇ ಇಂಥದ್ದೊಂದು ಹಕ್ಕುಗಳನ್ನು ಈ ದೇಶದ ಜನರಿಗೆ ಕೊಟ್ಟಿದೆ. ಸಂವಿಧಾನದತ್ತವಾಗಿ ಬಂದಿರುವ ಆ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ದುರಂತವೆಂದರೆ, ಯಾರಿಗಾಗಿ ಈ ಹಕ್ಕುಗಳನ್ನು ನೀಡಲಾಗಿದೆಯೋ, ಅವರು ಇಂದಿಗೂ ಈ ಹಕ್ಕುಗಳಿಗಾಗಿ ಹೋರಾಟಬೇಕಾಗಿದೆ. ಇಂಥದ್ದೇ ಸಂವಿಧಾನದ ಮೂಲಭೂತ ಹಕ್ಕುಗಳ ವಿಷಯವನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “19.20.21′

ಯುವಕ ಮಂಜು ಪಶ್ಚಿಮಘಟ್ಟದ ಕಾಡುಮಲೆಯ ಆದಿವಾಸಿ ಹುಡುಗ. ನಗರದಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡುತ್ತಿರುವ ಮಂಜು, ತನ್ನ ಕಾಡಿನ ಜನರಿಗೆ ಮೂಲಸೌಕರ್ಯ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಾನೆ. ಜನಜಾಗೃತಿ ಮೂಡಿಸಲು ಶುರು ಮಾಡುತ್ತಾನೆ. ಮೊದಲೇ ಕಾಡಿನಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕು ಎಂಬ ಯೋಚನೆಯಲ್ಲಿದ್ದ ಸರ್ಕಾರ ಇದೇ ಅವಕಾಶವನ್ನು ಬಳಸಿಕೊಂಡು, ಮಂಜು ಮತ್ತು ಆತನ ತಂದೆಯನ್ನು ನಕ್ಸಲಿಯರಿಗೆ ಸಹಾಯ ಮಾಡಿದ್ದಾರೆ ಎಂದು ದೇಶದ್ರೋಹದ (ಯುಎಪಿಎ ಕಾಯ್ದೆ) ಆರೋಪದಡಿ ಪೊಲೀಸರ ಮೂಲಕ ಬಂಧಿಸುತ್ತದೆ. ನೋಡು ನೋಡುತ್ತಿದ್ದಂತೆ ಅಮಾಯಕ ಹುಡುಗ, ಆತನ ತಂದೆ ಕತ್ತಲೆ ಕೋಣೆ ಸೇರುತ್ತಾರೆ. ಅಲ್ಲಿ ಪೊಲೀಸರ ದೌರ್ಜನ್ಯ, ಕ್ರೌರ್ಯ, ಅಟ್ಟಹಾಸ ನರಕ ದರ್ಶನವಾಗುತ್ತದೆ. ಮುಂದೆ ಈ ಹುಡುಗ ಮತ್ತು ಆತನ ತಂದೆಯ ಕಾನೂನು ಹೋರಾಟ ಹೇಗಿರುತ್ತದೆ? ಕೊನೆಗೆ ನ್ಯಾಯ ಯಾರ ಪರವಾಗುತ್ತದೆ? ಎಂಬುದೇ “19.20.21′ ಸಿನಿಮಾದ ಕಥಾಹಂದರ.

ಇದನ್ನೂ ಓದಿ:ಅಹ್ಮದೀಯ ವಿರೋಧಿ ಪ್ರತಿಭಟನೆ; ನೂರಕ್ಕೂ ಹೆಚ್ಚು ಮನೆ-ಅಂಗಡಿಗಳಿಗೆ ಬೆಂಕಿ

ಕೆಲ ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ನೈಜ ಘಟನೆಯೊಂದನ್ನು ಆಧರಿಸಿ “19.20.21′ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಮಂಸೋರೆ. ಆದಿವಾಸಿಗಳ ಬದುಕು, ಬವಣೆ, ಹೋರಾಟ, ಸರ್ಕಾರದ ಮನಸ್ಥಿತಿ, ಅಧಿಕಾರಿ ವರ್ಗದ ದರ್ಪ, ದೌರ್ಜನ್ಯ, ಅಮಾಯಕರ ಅರಣ್ಯರೋಧನ ಎಲ್ಲವನ್ನೂ “19.20.21′ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಪಶ್ಚಿಮಘಟ್ಟದ ಸುಂದರ ಪರಿಸರವನ್ನು ಅನಾವರಣ ಮಾಡುತ್ತ ತೆರೆದುಕೊಳ್ಳುವ ಸಿನಿಮಾ, ನಿಧಾನವಾಗಿ ಗಂಭೀರವಾಗುತ್ತ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ. ಒಂದಷ್ಟು ಪ್ರಶ್ನೆಗಳನ್ನು ನೋಡುಗರ ಮನಸ್ಸಿನಲ್ಲಿ ಮೂಡಿಸಿ, ಸಿನಿಮಾ ಕ್ಲೈಮ್ಯಾಕ್ಸ್‌ ಘಟ್ಟ ತಲುಪುತ್ತದೆ.

ಇನ್ನು ಕಲಾವಿದರಾದ ಶೃಂಗ ಬಿ., ಬಾಲಾಜಿ ಮನೋಹರ್‌, ಸಂಪತ್‌, ಎಂ. ಡಿ. ಪಲ್ಲವಿ, ವಿಶ್ವಕರ್ಣ, ಮಹದೇವ್‌ ಹಡಪದ್‌, ರಾಜೇಶ್‌ ನಟರಂಗ, ಉಗ್ರಂ ಸಂದೀಪ್‌, ಬಿ. ಎಂ. ಗಿರಿರಾಜ್‌ ಮತ್ತಿತರರು ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಚಿತ್ರದ ಛಾಯಾಗ್ರಹಣ ಪಶ್ಚಿಮಘಟ್ಟದ ಸೌಂದರ್ಯದ ಜೊತೆಗೆ ಅಮಾಯಕರ ಯಾತನೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ದೃಶ್ಯಗಳಿಗೆ ಪೂರಕವಾಗಿದೆ.  ಒಟ್ಟಾರೆ ಮಾಮೂಲಿ ಮನರಂಜನೆಯ ಸಿನಿಮಾಗಳಿಗಿಂತ ಹೊರತಾಗಿರುವ “19.20.21′ ಹೊಸ ಆಶಯದ ಸಿನಿಮಾವಾಗಿ ಗಮನ ಸೆಳೆಯುತ್ತದೆ.

 ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-monday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

1—wewqe

World cup Cricket ಜಗತ್ತನ್ನು ಬೆರಗುಗೊಳಿಸಿದ ಭಾರತ !

Puttur: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

Puttur: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

Road Mishap ಕಾರ್ನಾಡು: ಢಿಕ್ಕಿ; ರಸ್ತೆ ಬದಿ ಉರುಳಿ ಬಿದ್ದ ಕಾರು

Haleangadi ನಾಪತ್ತೆಯಾದ ಯುವಕನ ಬಟ್ಟೆ ಅಣೆಕಟ್ಟಿನ ಬಳಿ ಪತ್ತೆ

Haleangadi ನಾಪತ್ತೆಯಾದ ಯುವಕನ ಬಟ್ಟೆ ಅಣೆಕಟ್ಟಿನ ಬಳಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dighvijay Movie review;

Dighvijaya Movie review; ರೈತಪರ ಹೋರಾಟಕ್ಕೆ ದಿಗ್ವಿಜಯ

Olave Mandara 2 movie review

Olave Mandara 2 movie review; ಪ್ರೇಮದೂರಿನ ಕರೆಯೋಲೆ

Parimala D’souza Movie Review; ನಿಗೂಢ ಹಾದಿಯಲ್ಲಿ ಪರಿಮಳ ಹೆಜ್ಜೆ

Parimala D’souza Movie Review; ನಿಗೂಢ ಹಾದಿಯಲ್ಲಿ ಪರಿಮಳ ಹೆಜ್ಜೆ

’13’ movie review

’13’ movie review: ಹಣದ ಹಿಂದೆ ಬಿದ್ದವರ ಹುಡುಕಾಟ

tales of mahanagara movie review

Tales of Mahanagara Movie Review; ಅಚ್ಚರಿಗಳ ನಡುವೆ ಮಹಾನಗರದ ಚಿತ್ರಣ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

1-monday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

1—wewqe

World cup Cricket ಜಗತ್ತನ್ನು ಬೆರಗುಗೊಳಿಸಿದ ಭಾರತ !

jds

JDS: ಮೈತ್ರಿಗೆ ಮುನಿಸು: ಶಾಸಕರು, ನಾಯಕರಿಗೆ ಅಸಮಾಧಾನ ಮೂಡಿಸಿದ ಗೆಳೆತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.