
ಕ್ಯಾಂಪಸ್ ಕ್ರಾಂತಿ ವಿಮರ್ಶೆ: ಕಾಲೇಜು ಕ್ಯಾಂಪಸ್ ನೊಳಗೊಂದು ಸುತ್ತು..
Team Udayavani, Feb 25, 2023, 4:26 PM IST

ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು, ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂಬುದು ಹೆತ್ತವರ ಕನಸು. ಆದರೆ ಕಾಲೇಜ್ ಮೆಟ್ಟಿಲು ಏರುತ್ತಿದ್ದಂತೆ, ಅಡ್ಡದಾರಿ ತುಳಿಯುವ ಅದೆಷ್ಟೋ ಹುಡುಗರು ಪೋಷಕರ ಈ ಕನಸಿಗೆ ಆರಂಭದಲ್ಲಿಯೇ ತಣ್ಣೀರು ಎರಚಿಬಿಡುತ್ತಾರೆ. ಇಂಥ ಹುಡುಗರನ್ನು ಮತ್ತೆ ಸರಿಯಾದ ದಾರಿಗೆ ತರುವುದು ಹೇಗೆ? ಕಾಲು ಜಾರುವ ವಯಸ್ಸಿನಲ್ಲಿ ಕೈ ಹಿಡಿದು ನಡೆಸುವುದು ಹೇಗೆ? ಎಂಬುದನ್ನು ತೆರೆಮೇಲೆ ಹೇಳಿರುವ ಸಿನಿಮಾ “ಕ್ಯಾಂಪಸ್ ಕ್ರಾಂತಿ’
ಕರ್ನಾಟಕದ ಗಡಿ ಭಾಗದಲ್ಲಿ ನಡೆಯುವ ಒಂದಷ್ಟು ಭಾಷಾ ಹೋರಾಟ, ಕಾಲೇಜ್ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ, ರೌಡಿಸಂ-ಕ್ರೈಂ ಅದರ ಪರಿಣಾಮಗಳು ಎಲ್ಲವನ್ನೂ “ಕ್ಯಾಂಪಸ್ ಕ್ರಾಂತಿ’ ಸಿನಿಮಾದಲ್ಲಿ ತೆರೆಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ.
ಆರ್ಯ, ಆರತಿ, ಅಲಂಕಾರ್, ಇಶಾನ ಹೀಗೆ ಬಹುತೇಕ ಹೊಸ ಪ್ರತಿಭೆಗಳೇ ಸಿನಿಮಾದ ನಾಯಕ – ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟ ಕೀರ್ತಿರಾಜ್, ಹನುಮಂತೇ ಗೌಡ, ವಾಣಿಶ್ರೀ, ಭವಾನಿ ಪ್ರಕಾಶ್, ರಣ್‌ವೀರ್, ಧನಂಜಯ, ನಂದಗೋಪಾಲ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿ. ಮನೋಹರ್ ಸಂಗೀತ ನಿರ್ದೇಶನದ ಒಂದೆರಡು ಹಾಡುಗಳು ಗುನುವಂತಿದ್ದು, ಹಿರಿಯ ಛಾಯಾಗ್ರಹಕ ಪಿಕೆಹೆಚ್ ದಾಸ್ ತಮ್ಮ ಕ್ಯಾಮರಾದಲ್ಲಿ “ಕ್ಯಾಂಪಸ್ ಕ್ರಾಂತಿ’ಯನ್ನು ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Nutrition Food ಫಲಾನುಭವಿಗಳ ಕೈಸೇರದ ಪೌಷ್ಟಿಕ ಆಹಾರ; ಕೊರಗ,ಮಲೆಕುಡಿಯ ಸಮುದಾಯದವರ ಸಂಕಷ್ಟ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

World cup Cricket ಜಗತ್ತನ್ನು ಬೆರಗುಗೊಳಿಸಿದ ಭಾರತ !