
‘ಚೌಕಾಬಾರ’ ಮೆಚ್ಚುಗೆ
Team Udayavani, Mar 12, 2023, 5:10 PM IST

ವಿಕ್ರಂ ಸೂರಿ ನಿರ್ದೇಶನ, ನಮಿತಾ ರಾವ್ ನಿರ್ಮಾಣದ “ಚೌಕಬಾರ’ ಚಿತ್ರ ಮಾ.10ರಂದು ತೆರೆಕಂಡಿದ್ದು, ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ಚಿತ್ರತಂಡದ ಖುಷಿಯಾಗಿದೆ.
ತ್ರಿಕೋನ ಪ್ರೇಮಕಥೆ ಈ ಸಿನಿಮಾವನ್ನು ಇಂದಿನ ಯೂತ್ಸ್ ಹಾಗೂ ಫ್ಯಾಮಿಲಿ ಆಡಿಯನ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಮಣಿ ಆರ್. ರಾವ್ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ತರಲಾಗಿದೆ. ಸ್ನೇಹ, ಪ್ರೀತಿ ಮತ್ತು ಸಂಬಂಧಗಳ ಸುತ್ತ “ಚೌಕಾಬಾರ’ ಸಿನಿಮಾದ ಕಥೆ ಸಾಗಿದ್ದು, ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಕಟ್ಟಿಕೊಡಲು ನಿರ್ದೇಶಕ ವಿಕ್ರಂ ಸೂರಿ ಪ್ರಯತ್ನಿಸಿದ್ದಾರೆ. ಸಾಕಷ್ಟು ಟ್ವಿಸ್ಟ್-ಟರ್ನ್ಗಳೊಂದಿಗೆ ಸಾಗುವ ಈ ಸಿನಿಮಾ ಕೊನೆವರೆಗೂ ಪ್ರೇಕ್ಷಕರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
“ಚೌಕಾಬಾರ’ ಚಿತ್ರದ ವಿಹಾನ್ ಪ್ರಭಂಜನ್ ನಾಯಕನಾಗಿ ಪರಿಚಯವಾಗಿದ್ದು, ನಮಿತಾ ರಾವ್, ಕಾವ್ಯಾ ರಮೇಶ್, ಸಂಜಯ್ ಹೆಗಡೆ, ಸಂಜಯ್ ಸೂರಿ, ಪ್ರಥಮಾ ಪ್ರಸಾದ್, ಧಮಯಂತಿ, ಸುಮಾ ರಾವ್ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು “ಚೌಕಾಬಾರ’ ಸಿನಿಮಾದ ಹಾಡುಗಳಿಗೆ ಅಶ್ವಿನ್ ಪಿ. ಕುಮಾರ್ ಸಂಗೀತ ಸಂಯೋಜಿಸಿದ್ದು, ಚಿತ್ರದ ಹಾಡುಗಳಿಗೆ ಡಾ.ಹೆಚ್.ಎಸ್. ವೆಂಕಟೇಶ ಮೂರ್ತಿ, ಬಿ. ಆರ್. ಲಕ್ಷ್ಮಣ್ ರಾವ್ ಸಾಹಿತ್ಯವಿದೆ. ಚಿತ್ರಕ್ಕೆ ರವಿರಾಜ್ ಹೊಂಬಲ ಛಾಯಾಗ್ರಹಣ, ಶಶಿಧರ್ ಎಂ.ಆರ್ ಸಂಕಲನವಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
