ಮಾನ್ಸೂನ್‌ ರಾಗ ಚಿತ್ರ ವಿಮರ್ಶೆ: ಮಾನ್ಸೂನ್‌ ನಲ್ಲಿ ಅರಳಿದ ಕ್ಲಾಸ್‌ ಲವ್‌ ಸ್ಟೋರಿ


Team Udayavani, Sep 17, 2022, 10:04 AM IST

ಮಾನ್ಸೂನ್‌ ರಾಗ ಚಿತ್ರ ವಿಮರ್ಶೆ: ಮಾನ್ಸೂನ್‌ ನಲ್ಲಿ ಅರಳಿದ ಕ್ಲಾಸ್‌ ಲವ್‌ ಸ್ಟೋರಿ

ಅಲ್ಲೊಂದು ನಿಷ್ಕಲ್ಮಶ ಪ್ರೀತಿ ಇದೆ.. ಆದರೆ, ಆ ಪ್ರೀತಿ ಯ ಸುತ್ತ ಜಾತಿಯ ಬೇಲಿ ಸುತ್ತಿಕೊಂಡಿದೆ. ಹೆಚ್ಚು ಸದ್ದು ಮಾಡದೆಯೇ ಪ್ರೀತಿಯನ್ನು ಚುಚ್ಚಿ ಸಾಯಿಸುವಂತಹ ವಿಷ ಮುಳ್ಳು ಆ ಬೇಲಿ ತುಂಬಾ ತುಂಬಿವೆ.. ಹಂತ ಹಂತವಾಗಿ “ಚಿಗುರೊಡೆಯುವ’ ಪ್ರೀತಿಯನ್ನು ಆ ಮುಳ್ಳು ಸಾಯಿಸುತ್ತಾ ಅಥವಾ ಮುಳ್ಳನ್ನು ಬಗ್ಗಿಸಿ ಪ್ರೀತಿ ಗೆಲ್ಲುತ್ತಾ.. ಈ ಕುತೂಹಲವಿದ್ದರೆ ನೀವು “ಮಾನ್ಸೂನ್‌ ರಾಗ’ ಸಿನಿಮಾ ನೋಡಬಹುದು.

ಅತಿಯಾದ ಬಿಲ್ಡಪ್‌, ಸುಖಾಸುಮ್ಮನೆ ಡೈಲಾಗ್‌, ಹೀರೋಯಿಸಂ ಇಲ್ಲದೇ ನೀಟಾಗಿ ಸಾಗುವ ಒಂದು ಕ್ಲಾಸ್‌ ಸಿನಿಮಾವನ್ನು ನೋಡಬೇಕೆಂದು ಬಯಸುವವರಿಗೆ “ಮಾನ್ಸೂನ್‌ ರಾಗ’ ಒಂದು ಒಳ್ಳೆಯ ಆಯ್ಕೆ. ಆ ಮಟ್ಟಿಗೆ ನಿರ್ದೇಶಕರು ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ನಾಲ್ಕು ಕಥೆಗಳೊಂದಿಗೆ ಸಾಗುವ ಸಿನಿಮಾದಲ್ಲಿ ವಿವಿಧ ಹಂತಗಳಲ್ಲಿನ ಪ್ರೀತಿಯನ್ನು ಹೇಳುತ್ತಾ ಹೋಗಲಾಗಿದೆ. ಜಾತಿ, ಧರ್ಮ, ಆಸ್ತಿ, ಅಂತಸ್ತು, ವಯಸ್ಸು, ಸಮಾಜದ ದೃಷ್ಟಿ… ಇಂತಹ ಅಂಶಗಳೊಂದಿಗೆ ಸಾಗುವ ನಾಲ್ಕು ಕಥೆಗಳು ಅಂತಿಮವಾಗಿ ಒಂದು ಮೂಲರೂಪವಾಗುತ್ತದೆ. ಅದೇ ಸಿನಿಮಾದ ಹೈಲೈಟ್‌. ಆ ಕುತೂಹಲವನ್ನು ನಿರ್ದೇಶಕರು ಕೊನೆವರೆಗೂ ಉಳಿಸಿಕೊಂಡು, ಕುತೂಹಲ ಕಾಯ್ದಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಜನೌಷಧಿ ಕೇಂದ್ರದಲ್ಲಿ ಲಭ್ಯವಾಗಲಿದೆ “ಸಿಟಾಗ್ಲಿಪ್ಟಿನ್‌’

ಇಲ್ಲಿ ಬರುವ ಪ್ರತಿ ಕಥೆಗಳನ್ನು ವಿಭಿನ್ನ ಪರಿಸರದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಎಲ್ಲದಕ್ಕೂ ಇರುವ ಒಂದು ಸಾಮಾನ್ಯ ಅಂಶವೆಂದರೆ ಮಳೆ. ಹೆಸರಿಗೆ ತಕ್ಕಂತೆ ಇಡೀ ಸಿನಿಮಾ ಮಳೆಯ ಮಧ್ಯೆಯೇ ನಡೆಯುತ್ತದೆ. ಮೊದಲೇ ಹೇಳಿದಂತೆ ನಿರ್ದೇಶಕರು ಇಡೀ ಸಿನಿಮಾವನ್ನು ಕ್ಲಾಸ್‌ ಆಗಿ ಕಟ್ಟಿಕೊಟ್ಟಿದ್ದಾರೆ. ಸಿದ್ಧಸೂತ್ರಗಳಿಂದ ಮುಕ್ತವಾಗಿರುವ ಸಿನಿಮಾವಾದ್ದರಿಂದ ಹೊಸ ಶೈಲಿಯ ಸಿನಿಮಾ ಬಯಸುವವರಿಗೆ “ಮಾನ್ಸೂನ್‌ ರಾಗ’ ಇಷ್ಟವಾಗಬಹುದು. ಇಡೀ ಸಿನಿಮಾವನ್ನು ತುಂಬಾ ಸಾವಧಾನವಾಗಿ ಕಟ್ಟಿಕೊಟ್ಟಿದ್ದರಿಂದ ಇಲ್ಲಿ ವೇಗದ ನಿರೂಪಣೆ ಬಯಸುವಂತಿಲ್ಲ.

ಚಿತ್ರದಲ್ಲಿ ರಚಿತಾ-ಧನಂಜಯ್‌, ಅಚ್ಯುತ್‌- ಸುಹಾಸಿನಿ ಜೊತೆಗೆ ಇನ್ನೂ ಎರಡು ಜೋಡಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅದರಲ್ಲೂ ಅಚ್ಯುತ್‌-ಸುಹಾಸಿನಿ ದೃಶ್ಯಗಳು ಬೇಗನೇ ಆಪ್ತವಾಗುತ್ತವೆ. ಇನ್ನು, ಧನಂಜಯ್‌ ಹೊಸ ಇಮೇಜ್‌, ಹೊಸ ಪಾತ್ರದಲ್ಲಿ ಇಷ್ಟವಾಗುತ್ತಾರೆ. ನಾಯಕಿ ರಚಿತಾ ರಾಮ್‌ ಕೂಡಾ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ.

ಉಳಿದಂತೆ ಶೋಭರಾಜ್‌, ಯಶಾ ಶಿವಕುಮಾರ್‌, ಶಿವಾಂಕ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗುರು ಕಶ್ಯಪ್‌ ಸಂಭಾಷಣೆ ಕೂಡಾ ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಅನೂಪ್‌ ಸೀಳೀನ್‌ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ಚಿತ್ರದ ಸಾಹಿತ್ಯ ಕಥೆಯ ಆಶಯಕ್ಕೆ ತಕ್ಕುದಾಗಿದೆ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.