Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ


Team Udayavani, Mar 23, 2024, 9:38 AM IST

Dilkush Movie Review

ಅವನು ತಂದೆ-ತಾಯಿಯ ಮುದ್ದಿನ ಏಕಮಾತ್ರ ಪುತ್ರ ಕುಶಾಲ್‌. ಚಿಕ್ಕ ವಯಸ್ಸಿನಲ್ಲೇ ಹುಡುಗಿಯೊಬ್ಬಳ ಮೇಲೆ ಅವನಿಗೆ ಆವನಿಗಾಗುವ ಕ್ರಶ್‌ ಕೆಲಕಾಲ ಅವಳ ಹಿಂದೆ ಅವನನ್ನು ಬೀಳುವಂತೆ ಮಾಡುತ್ತದೆ. ಇನ್ನೇನು ಕುಶಾಲ್‌ ಉರೂಫ್ ಖುಶ್‌ ಅವಳಿಗೆ ಪ್ರೇಮ ನಿವೇದನೆ ಮಾಡಬೇಕು ಎನ್ನುವಷ್ಟರಲ್ಲಿ ಅವಳು ಊರು ಬಿಟ್ಟು ಬೇರೆ ಊರಿನತ್ತ ಮುಖ ಮಾಡುತ್ತಾಳೆ. ದಿನ ಕಳೆದಂತೆ, ಅದೇ ಹುಡುಗಿಯ ನೆನಪಿನಲ್ಲೇ ಇರುವ ಕುಶಾಲ್‌ ಬದುಕಿನಲ್ಲಿ ಮತ್ತೂಬ್ಬಳು ಹುಡುಗಿಯ ಆಗಮನವಾಗುತ್ತದೆ. ಅಲ್ಲಿಂದ ಕುಶಾಶ್‌ ಬದುಕು ಹೊಸ ಬಣ್ಣ ಪಡೆದುಕೊಳ್ಳುತ್ತದೆ. ಕುಶಾಲ್‌ ಬದುಕು ಇನ್ನೇನು “ದಿಲ್‌ ಖುಷ್‌’ ಆಗುತ್ತಿದೆ ಎನ್ನುವಾಗಲೇ ಕುಶಾಲ್‌ ಪ್ರೇಮ ನಿವೇದನೆ ಮಾಡಬೇಕೆಂದುಕೊಂಡಿದ್ದ ಹುಡುಗಿಯ ಆಗಮನವಾಗುತ್ತದೆ. ಅಲ್ಲಿಂದ ಇಬ್ಬರು ಹುಡುಗಿಯ ನಡುವೆ ಸಿಕ್ಕಿ ಹಾಕಿಕೊಂಡು ಪೇಚಿಗೆ ಸಿಲುಕುವ ಕುಶಾಲ್‌ ಕೊನೆಗೆ ಇಬ್ಬರಲ್ಲಿ ಯಾರನ್ನು ವ(ಆ)ರಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್‌ ವೇಳೆಗೆ ಗೊತ್ತಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ದಿಲ್‌ಖುಷ್‌’ ಸಿನಿಮಾದ ಕಥೆಯ ಒಂದು ಎಳೆ.

ಈ ಎಳೆಯನ್ನು ಇಟ್ಟುಕೊಂಡು ಅದಕ್ಕೆ ಒಂದಷ್ಟು ಕಮರ್ಷಿಯಲ್‌ ಅಂಶಗಳನ್ನು ಸೇರಿಸಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಪ್ರಮೋದ್‌ ಜಯ. ಈಗಾಗಲೇ ಕನ್ನಡದಲ್ಲಿ ಬಂದಿರುವ ಒಂದಷ್ಟು ಸಿನಿಮಾಗಳ ಛಾಯೆ “ದಿಲ್‌ಖುಷ್‌’ ಸಿನಿಮಾದ ಆರಂಭದಿಂದ ಅಂತ್ಯದ ವರೆಗೂ ಆವರಿಸಿಕೊಂಡಿದೆ. ಹೀಗಾಗಿ ಸಿನಿಮಾದ ಕಥೆ, ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಹೊಸದೇನು ನಿರೀಕ್ಷಿಸು ವಂತಿಲ್ಲ. ಈ ಛಾಯೆಯಿಂದ “ದಿಲ್‌ಖುಷ್‌’ ಹೊರಗಿದ್ದಿದ್ದರೆ, ಒಂದು ಹೊಸಬರ ನವಿರಾದ ಪ್ರೇಮಕಥೆಯಾಗಿ ಪ್ರೇಕ್ಷಕರ “ದಿಲ್‌’ ಖುಷಿಯಾಗುವ ಎಲ್ಲ ಸಾಧ್ಯತೆಗಳಿರುತ್ತಿದ್ದವು.

ಇನ್ನು “ದಿಲ್‌ಖುಷ್‌’ ಸಿನಿಮಾದಲ್ಲಿ ಹೊಸ ಪ್ರತಿಭೆಗಳಾದ ರಂಜಿತ್‌, ಸ್ಪಂದನಾ ಸೋಮಣ್ಣ ಜೋಡಿ ತೆರೆಮೇಲೆ ಒಂದಷ್ಟು ಲವಲವಿಕೆಯ ಅಭಿನಯ ನೀಡಿದ್ದಾರೆ. ಉಳಿದಂತೆ ರಂಗಾಯಣ ರಘು, ರವಿ ಭಟ್‌, ಅರುಣಾ ಬಾಲರಾಜ್‌, ಧರ್ಮಣ್ಣ ಕಡೂರ್‌, ರಘು ರಾಮನಕೊಪ್ಪ, ಶ್ರೀನಿವಾಸ ಗೌಡ, ವಿಜಯಲಕ್ಷ್ಮೀ ಮತ್ತಿತರರು ಎಂದಿನಂತೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾದ ಒಂದು ಹಾಡು, ಹಿನ್ನೆಲೆ ಸಂಗೀತ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಛಾಯಾಗ್ರಹಣ “ದಿಲ್‌ಖುಷ್‌’ ಸಿನಿಮಾವನ್ನು ತೆರೆಮೇಲೆ ಕಲರ್‌ಫ‌ುಲ್‌ ಆಗಿ ಕಾಣುವಂತೆ ಮಾಡಿದೆ. ಸಂಕಲನ ಇನ್ನಷ್ಟು ಹರಿತವಾಗಿದ್ದರೆ “ದಿಲ್‌ಖುಷ್‌’ ಹೊಳಪು ಇನ್ನಷ್ಟು ಹೆಚ್ಚಾಗಿರುತ್ತಿತ್ತು. ಹೊಸಬರ ಸಿನಿಮಾಗಳನ್ನು ಬೆಂಬಲಿಸಲು ಬಯಸು ವವರು, ಕೆಲ ತಾಂತ್ರಿಕ ಲೋಪಗಳನ್ನು ಬದಿಗಿಟ್ಟು “ದಿಲ್‌ ಖುಷ್‌’ ಚಿತ್ರವನ್ನು ನೋಡಬಹುದು.

 ಜಿ.ಎಸ್‌.ಕಾರ್ತಿಕ ಸುಧನ್

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.