ದಿಲ್‌ ಗೆ ಕೈ ಹಾಕುವ ದಿಯಾ


Team Udayavani, Feb 8, 2020, 12:22 PM IST

CINEMA-TDY-2

ಜೀವನವೆಲ್ಲಾ ನನ್ನ ವಿರುದ್ಧ ಕೆಲಸ ಮಾಡಿದ್ದೀಯಾ, ಇದೊಂದ್ಸಲ ನನ್ನ ಪರವಾಗಿ ಕೆಲಸ ಮಾಡು…’

– ರೈಲ್ವೆ ಟ್ರಾಕ್‌ ಮೇಲೆ ನಿಂತ ದಿಯಾ, “ಪರ್ಮೆಂಟ್‌ ನೆಮ್ಮದಿ ಬೇಕು’ ಅಂತ ಆ ದೇವರನ್ನು ಪ್ರಾರ್ಥಿಸುತ್ತ ಕಣ್ಮುಚ್ಚಿಕೊಂಡೇ ರೈಲು ತನ್ನತ್ತ ಬರುವವರೆಗೂ ಟ್ರಾಕ್‌ ಮೇಲೆ ನಿಂತಿರುತ್ತಾಳೆ. ಇನ್ನೇನು ರೈಲು ಡಿಕ್ಕಿ ಹೊಡೆಯೋ ಹೊತ್ತಿಗೊಂದು ಮೊಬೈಲ್‌ ರಿಂಗಣಿಸುತ್ತೆ…’ ಆಮೇಲೆ ಏನಾಗುತ್ತೆ ಅನ್ನೋದೇ ಚಿತ್ರದ ವಿಶೇಷ. ಇದಿಷ್ಟು ಹೇಳಿದ ಮೇಲೆ “ದಿಯಾ’ ಮೇಲೆ ಕುತೂಹಲ ಇರದಿದ್ದರೆ ಹೇಗೆ? ಅಂಥದ್ದೊಂದು ಕುತೂಹಲದಲ್ಲೇ ಸಾಗುವ “ದಿಯಾ’ ಸದ್ಯದ ಮಟ್ಟಿಗೆ ಹೊಸ ಪ್ರಯತ್ನ ಎನ್ನಬಹುದು.

ಕನ್ನಡದಲ್ಲಿ ಒಳ್ಳೆಯ ಕಥೆಗಳೇ ಇಲ್ಲ ಅನ್ನುವವರಿಗೆ “ದಿಯಾ’ ಕಣ್ಣೆದುರ ಸಾಕ್ಷಿಯಾಗುತ್ತಾಳೆ. ಕಂಟೆಂಟ್‌ ಬೇಕು ಅನ್ನುವ ಮಂದಿಗೆ “ದಿಯಾ’ ಉತ್ತರ ಕೊಡುತ್ತಾಳೆ. ಹಾಡು, ಫೈಟ್‌ ಇಲ್ಲದೆಯೂ ನೋಡುಗರನ್ನು ಕಾಡಬಹುದು ಎಂಬುದಕ್ಕೆ “ದಿಯಾ’ ಕಾರಣವಾಗುತ್ತಾಳೆ. “ದಿಯಾ’ಳ ಕಥೆ ಮತ್ತು ವ್ಯಥೆ ಬಗ್ಗೆ ಹೇಳುವುದಕ್ಕಿಂತ ಒಂದೊಮ್ಮೆ ನೋಡಿ ಮನಸ್ಸು ಭಾರವಾಗಿಸಿಕೊಂಡು ಹೊರಬರಹುದು.

ಇಲ್ಲೊಂದು ಲವ್‌ಸ್ಟೋರಿ ಇದೆ. ಅದು ಒಂದು ಲವ್‌ ಅಂದುಕೊಂಡರೆ ತಪ್ಪು. ಎರಡು ಲವ್‌ ಸ್ಟೋರಿಗಳಿವೆ. ತ್ರಿಕೋನ ಪ್ರೇಮಕಥೆ ಇರಬಹುದಾ ಅಂತ ಊಹಿಸಿದರೆ, ತೆರೆಮೇಲೆ ನಡೆಯುವ ಸನ್ನಿವೇಶಗಳೇ ಬೇರೆ. ನೋಡುವ ಪ್ರೇಕ್ಷಕ ಹೀಗೂ ಆಗುತ್ತಾ ಅನ್ನುವಷ್ಟರ ಮಟ್ಟಿಗೆ ಚಿತ್ರಕಥೆಯೊಂದಿಗೆ ಸಾಕಷ್ಟು ಟ್ವಿಸ್ಟ್‌ ಕೊಟ್ಟು, “ದಿಯಾ’ಳನ್ನು ಇಷ್ಟಪಡುವಂತೆ ಮಾಡಿರುವ ಪ್ರಯತ್ನ ಮೆಚ್ಚಲೇಬೇಕು. ನಿರ್ದೇಶಕರಿಗೆ ಈಗಿನ ಟ್ರೆಂಡ್‌ ಗೊತ್ತಿದೆ. ಅದಕ್ಕೆ ತಕ್ಕಂತೆಯೇ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಅಷ್ಟೇ ಅಲ್ಲ, ಯುವಕರ ನಾಡಿಮಿಡಿತ ಅರಿತೇ, ಸ್ಕ್ರೀನ್‌ಪ್ಲೇ ಮಾಡಿದಂತಿದೆ.

“ದಿಯಾ’ ನೋಡಿದವರಿಗೆ ಹಾಡು, ಫೈಟು, ಕಾಮಿಡಿ ಯಾವುದೂ ಇಲ್ಲವಲ್ಲ ಎಂಬ ಪ್ರಶ್ನೆಯೇ ಬರಲ್ಲ. ಯಾಕೆಂದರೆ, ಎಲ್ಲವನ್ನೂ ಚೆಂದದ ಕಥೆ ಮೂಲಕವೇ ಕಟ್ಟಿಕೊಡುವ ಮೂಲಕ ಅಲ್ಲೊಂದು ನಿಷ್ಕಲ್ಮಷವಾದ ಪ್ರೀತಿ, ಆಳವಾಗಿರುವ ಮಮತೆ, ಇನ್ನೇನೋ ಹೇಳಬೇಕೆಂಬ ತವಕ, ಆಗಾಗ ಕಾಡುವ ನೆನಪು, ಅಲ್ಲಲ್ಲಿ ಹೆಚ್ಚಿಸುವ ಭಾವುಕತೆ ಚಿತ್ರದ ವೇಗಕ್ಕೆ ಹೆಗಲುಕೊಟ್ಟಿವೆ. ಮೊದಲರ್ಧ ಕೊಂಚ ತಾಳ್ಮೆ ಕೆಡಿಸುವ ದೃಶ್ಯಗಳಿದ್ದರೂ, ನೋಡ್ತಾ ನೋಡ್ತಾ ದಿಯಾ ಮೆಲ್ಲನೆ ಆವರಿಸಿಕೊಳ್ಳುತ್ತಾಳೆ. ದ್ವಿತೀಯಾರ್ಧದಲ್ಲಿ “ದಿಯಾ’ ಸಂಪೂರ್ಣ ತನ್ನ ಹಿಡಿತ ಸಾಧಿಸುತ್ತಾ ಹೋಗುತ್ತಾಳೆ. ಅಲ್ಲಿಗೆ ನೋಡುಗರ ಮನಸ್ಸು, ಭಾವ ಎಲ್ಲವೂ ದಿಯಾಳ “ದಿಲ್‌’ ಬಗ್ಗೆಯೇ ಮಾತಾಡುವಂತಾಗುತ್ತದೆ. ಮೊದಲೇ ಹೇಳಿದಂತೆ ಇಲ್ಲಿ ಹೊಡಿ, ಬಡಿ, ಕಡಿ, ದೃಶ್ಯಗಳಿಲ್ಲ. ವಿನಾಕಾರಣ ಹಾಸ್ಯವನ್ನು ತುರುಕಿಲ್ಲ.

ಚಿತ್ರಕ್ಕೆ ಏನೆಲ್ಲಾ ಅಗತ್ಯವಿದೆಯೋ, ನೋಡುಗರಿಗೆ ಯಾವುದೆಲ್ಲಾ ಹಿಡಿಸುತ್ತದೆಯೋ ಅಷ್ಟನ್ನು ಮಾತ್ರ ಸಿದ್ಧಪಡಿಸಿ, ಉಣಬಡಿಸಿರುವ ನಿರ್ದೇಶಕರ ಪ್ರಯತ್ನ ಸಾರ್ಥಕವಾಗಿದೆ. ಎಲ್ಲೋ ಒಂದು ಕಡೆ ಇದು ಬೇಕಿತ್ತಾ ಅಂದುಕೊಳ್ಳುವ ಹೊತ್ತಿಗೆ ಹಿನ್ನೆಲೆ ಸಂಗೀತ ಇದೂ ಇರಲೇಬೇಕು ಎಂಬಷ್ಟರ ಮಟ್ಟಿಗೆ ಪ್ರಧಾನ ಪಾತ್ರ ವಹಿಸಿ, ನೋಡುಗರನ್ನು ಖುಷಿಪಡಿಸುತ್ತದೆ. ಹಾಗಂತ, ಕಥೆ ತೀರಾ ಫ್ರೆಶ್‌ ಅಲ್ಲ. ಹಿಂದೆ ಬಂದಿರುವ ಕಥೆಗಳ ಸ್ಫೂರ್ತಿಯಂತಿದ್ದರೂ, ಅದನ್ನು ಹೇಳುವ ಮತ್ತು ತೋರಿಸುವ ಬಗೆಯಲ್ಲಿ ಹೊಸತನವಿದೆ. ಸೃಷ್ಟಿಸಿರುವ ಪಾತ್ರಗಳಲ್ಲೂ ಲವಲವಿಕೆ ಇದೆ.

ಹಾಗಾಗಿ, ದಿಯಾ ನೋಡುವಷ್ಟೂ ಕಾಲ ಇಷ್ಟವಾಗುತ್ತಾಳೆ. ಇಲ್ಲಿ ಇಬ್ಬರು ಹುಡುಗರಿದ್ದಾರೆ. ಒಬ್ಬಳು ಹುಡುಗಿ ಇದ್ದಾಳೆ. ಅಲ್ಲಿಗೆ ಅದೊಂದು ತ್ರಿಕೋನ ಪ್ರೇಮಕಥೆ ಅಂದುಕೊಂಡವರಿಗೆ ತೆರೆ ಮೇಲೆ ಆಗುವ ಅಚ್ಚರಿಯೇ ಬೇರೆ. ಮೊದಲರ್ಧ ಒಂದು ಪ್ರೇಮಕಥೆ ನೋಡಿದವರಿಗೆ, ಸೆಕೆಂಡ್‌ಹಾಫ್ ಇನ್ನೊಂದು ಪ್ರೇಮಕಥೆ ಕಾಣಸಿಗುತ್ತೆ. ಕೊನೆಗೆ ಆ ಪ್ರೇಮಕಥೆಯಲ್ಲಿ ಯಾರೆಲ್ಲಾ ಪಾಸ್‌ ಆಗುತ್ತಾರೆ ಅನ್ನುವ ವಿಷಯ ಮಾತ್ರ ಅಷ್ಟೇ ಅದ್ಭುತವಾಗಿ ಕೊನೆಗಾಣಿಸಲಾಗಿದೆ. ಎಲ್ಲವನ್ನೂ ಇಲ್ಲೇ ಹೇಳುತ್ತಾ ಹೋದರೆ, ಅಷ್ಟೊಂದು ಮಜ ಎನಿಸಲ್ಲ. ಒಂದು ಹುಡುಗಿ, ಇಬ್ಬರು ಹುಡುಗರ ಲವ್‌ ಸ್ಟೋರಿ ಇಲ್ಲಿದೆಯಾದರೂ, ಆ ಪ್ರೀತಿ ಹೊಸ ರೀತಿಯಾಗಿದೆ ಅನ್ನೋದೇ ವಿಶೇಷ.

ದಿಯಾಗೆ ರೋಹಿತ್‌ ಮೇಲೆ ಪ್ರೀತಿ. ರೋಹಿತ್‌ಗೂ ದಿಯಾ ಮೇಲೆ ಪ್ರೀತಿ ಇದ್ದರೂ, ತೋರಿಸಿಕೊಳ್ಳದ ಹುಡುಗ. ದಿಯಾಳ ಚಡಪಡಿಕೆ, ತವಕ, ಆತುರ ಎಲ್ಲವನ್ನೂ ನೋಡಿದವರಿಗೆ ತಮ್ಮ ವಾಸ್ತವದ ಲವ್‌ಸ್ಟೋರಿ ನೆನಪಾದರೂ ಅಚ್ಚರಿ ಇಲ್ಲ. ಕೊನೆಗೂ ಅವಳ ಪ್ರೀತಿ ಒಪ್ಪುವ ಅವನು, ತಾನೂ ಇಷ್ಟಪಟ್ಟ ವಿಷಯ ಹೇಳಿಕೊಳ್ಳುತ್ತಾನೆ. ಇನ್ನೇನು ಇಬ್ಬರೂ ಮದುವೆ ಆಗುವ ನಿರ್ಧಾರ ಮಾಡುತ್ತಿದ್ದಂತೆಯೇ, ಅಲ್ಲೊಂದು ಘಟನೆ ನಡೆಯುತ್ತೆ. ಕಟ್‌ ಮಾಡಿದರೆ, ದಿಯಾ, ಮುಂಬೈ ಬಿಟ್ಟು ಬೆಂಗಳೂರಿಗೆ ಹಿಂದಿರುಗುತ್ತಾಳೆ. ಅಲ್ಲೊಬ್ಬ ಆದಿ ಎಂಬ ಫ್ರೆಂಡ್‌ ಪರಿಚಯವಾಗುತ್ತಾನೆ. ಗೆಳೆತನ ಪ್ರೀತಿಗೂ ತಿರುಗುತ್ತೆ. ಇನ್ನೇನು ಇಬ್ಬರೂ ಲವ್‌ ಒಪ್ಪಿಕೊಂಡು ಮದ್ವೆ ಆಗೋ ಮೂಡ್‌ ನಲ್ಲಿದ್ದಾಗ, ಅಲ್ಲೊಂದು ಘಟನೆ ನಡೆದು ಹೋಗುತ್ತೆ. ಆ ಘಟನೆ ಸರಿಹೋಗುತ್ತಿದ್ದಂತೆಯೇ ಮತ್ತೂಂದು ಶಾಕ್‌ ಆಗುತ್ತೆ. ಅದೂ ಸರಿ ಹೋಯ್ತು ಎನ್ನುತ್ತಿದ್ದಂತೆಯೇ ಇನ್ನೊಂದು ಘಟನೆಯೂ ನಡೆದುಹೋಗುತ್ತೆ.

ಆ ಘಟನೆಯಲ್ಲೇ ಇಡೀ ಚಿತ್ರದ ಜೀವಂತಿಕೆ ಇದೆ. ಆ ಟ್ವಿಸ್ಟ್‌ಗಳೇ ಚಿತ್ರದ ತಾಕತ್ತು ಎನ್ನಬಹುದು. ಖುಷಿ ತುಂಬಾ ಮುದ್ದಾಗಿ ಕಾಣುವುದರ ಜೊತೆ ಅಷ್ಟೇ ಲವಲವಿಕೆಯಲ್ಲೇ ನಟಿಸಿದ್ದಾರೆ. ದೀಕ್ಷಿತ್‌ ಶೆಟ್ಟಿ ಮುಗ್ಧ ಲವರ್‌ ಬಾಯ್‌ ಆಗಿ ಇಷ್ಟವಾದರೆ, ಪೃಥ್ವಿ ಅಂಬರ್‌ ಕೂಡ ಕಾಡುವ ಹುಡುಗನಾಗಿ ಗಮನಸೆಳೆಯುತ್ತಾರೆ. ಪವಿತ್ರಾ ಲೋಕೇಶ್‌ ಅಮ್ಮನಾಗಿ ಸೈ ಎನಿಸಿಕೊಂಡರೆ ಇತರರು ಸಿಕ್ಕ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಮೂಲಕ ಸಖತ್‌ ಸ್ಕೋರ್‌ ಮಾಡಿದ್ದಾರೆ. ವಿಶಾಲ್‌ ವಿಟ್ಠಲ್‌ ಮತ್ತು ಸೌರಭ್‌ ವಾಘ…ಮರೆ ಕ್ಯಾಮೆರಾ ಕೈಚಳಕ “ದಿಯಾ’ ಅಂದವನ್ನು ಹೆಚ್ಚಿಸಿದೆ.  ಸಿನಿಮಾ ನೋಡಿ ಹೊರಬಂದವರಿಗೆ, ಕೊನೆಯಲ್ಲಿ “ಲೈಫ್ ಈಸ್‌ ಫುಲ್ ಆಫ್ ಸರ್‌ಪ್ರೈಸ್‌’ ಅನ್ನೋದು ಪಕ್ಕಾ ಆಗುತ್ತೆ.

 

 –ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.