‘ಅರ್ಜುನ್ ಗೌಡ’ ಚಿತ್ರ ವಿಮರ್ಶೆ: ಪ್ರೀತಿಯ ಬಲೆಯಲ್ಲಿ ಮಾಫಿಯಾ ಅಲೆ!

Team Udayavani, Jan 1, 2022, 11:04 AM IST

ಅರ್ಜುನ್ ಗೌಡ ಚಿತ್ರ ವಿಮರ್ಶೆ

ನಿರ್ಮಾಪಕ ರಾಮು ಅವರು ಆ್ಯಕ್ಷನ್‌ ಸಿನಿಮಾ ಮಾಡುತ್ತಾರೆಂದರೆ ಅಲ್ಲಿನ ಅದ್ಧೂರಿತನವನ್ನು ಊಹಿಸಿಕೊಳ್ಳಬಹುದು. ನಿರ್ದೇಶಕ ಕೇಳಿದ್ದಕ್ಕಿಂತ ಹೆಚ್ಚಿನದ್ದನ್ನು ನೀಡಿ, ಸಿನಿಮಾಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವ ಗುಣ ರಾಮು ಅವರದ್ದಾಗಿತ್ತು. ಅದು ಈ ವಾರ ತೆರೆಕಂಡಿರುವ ರಾಮು ನಿರ್ಮಾಣದ “ಅರ್ಜುನ್‌ ಗೌಡ’ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಒಂದು ಮಾಸ್‌ ಎಂಟರ್‌ಟೈನರ್‌ ಸಿನಿಮಾವನ್ನು ಯಾವ ರೀತಿ ಕಟ್ಟಿಕೊಡಬೇಕು, ಅದರ ಪರಿಸರ ಹೇಗಿರಬೇಕು, ಫೈಟ್‌ ಎಷ್ಟು ಗ್ರ್ಯಾಂಡ್‌ ಆಗಿರಬೇಕು ಎಂಬುದನ್ನು ರಾಮು ಹಾಗೂ ನಿರ್ದೇಶಕ ಶಂಕರ್‌ ಚೆನ್ನಾಗಿ ಅರ್ಥಮಾಡಿಕೊಂಡಿರೋದು ತೆರೆಮೇಲೆ ಗೊತ್ತಾಗುತ್ತದೆ. ಆ ಮಟ್ಟಿಗೆ “ಅರ್ಜುನ್‌ ಗೌಡ’ ಒಂದು ಮಾಸ್‌ ಕಂ ಫ್ಯಾಮಿಲಿ ಡ್ರಾಮಾ ಸಿನಿಮಾವಾಗಿ ಇಷ್ಟವಾಗುತ್ತದೆ.

ನಿರ್ದೇಶಕ ಶಂಕರ್‌ ಪ್ರೀತಿಯ ಎಳೆಯೊಂದನ್ನು ಇಟ್ಟುಕೊಂಡು ಉಳಿದಂತೆ ಒಂದು ಆ್ಯಕ್ಷನ್‌ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಘಟನೆಗಳು, ಸನ್ನಿವೇಶಗಳು ಬರುತ್ತವೆ. ಹಾಗಾಗಿ, ಇಲ್ಲೂ ಕಥೆಗಿಂತ ಇಡೀ ಸಿನಿಮಾವನ್ನು ಸನ್ನಿವೇಶಗಳೇ ಮುಂದುವರೆಸಿಕೊಂಡು ಹೋಗುತ್ತವೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಲವ್‌, ಫ್ಯಾಮಿಲಿ ಡ್ರಾಮಾ ಹಾಗೂ ಆ್ಯಕ್ಷನ್‌, ಮದರ್‌ ಸೆಂಟಿಮೆಂಟ್‌ ಅಂಶಗಳಿದ್ದರೂ ನಿರ್ದೇಶಕರು ಯಾವೊಂದನ್ನು ಅತಿಯಾಗಿ ತೋರಿಸಿಲ್ಲ. ಚಿತ್ರದಲ್ಲಿ ಲವ್‌ ಇದ್ದರೂ ಅದನ್ನು ಹೆಚ್ಚು ತೋರಿಸದೇ, ಮಾಸ್‌ ಅಂಶಗಳಿಗೆ ಗಮನ ಕೊಟ್ಟಿದ್ದಾರೆ. ಆ ಮೂಲಕ “ಅರ್ಜುನ್‌ ಗೌಡ’ ಮಾಸ್‌ ಪ್ರಿಯರ ಗಮನ ಸೆಳೆಯುತ್ತದೆ.

ಇದನ್ನೂ ಓದಿ:‘ಲವ್ ಯು ರಚ್ಚು’ ಚಿತ್ರವಿಮರ್ಶೆ: ಮತ್ತೆ ಮತ್ತೆ ಕಾಡುವ ‘ರಚ್ಚು’ ಕರ್ಮ ಕಥೆ!

ಸಿನಿಮಾದ ಕಥೆ ಮಂಗಳೂರಿನಿಂದ ಆರಂಭವಾಗಿ ಬೆಂಗಳೂರು ತಲುಪಿ, ಸಿಂಗಾಪೂರದ ದೃಶ್ಯಗಳವರೆಗೂ ಹೋಗುತ್ತದೆ. ಸಿನಿಮಾದ ಕಥೆ ಗಂಭೀರವಾಗಿ ಸಾಗುವುದರಿಂದ ಅಲ್ಲಲ್ಲಿ ಪ್ರೇಕ್ಷಕ ಮೊಗದಲ್ಲಿ ನಗುಮೂಡಿಸಲು ಒಂದಷ್ಟು ಕಾಮಿಡಿ ಸನ್ನಿವೇಶಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಈ ದೃಶ್ಯಗಳು ಕಿರಿಕಿರಿ ಎನಿಸಿದರೂ, ಕಮರ್ಷಿಯಲ್‌ ಸಿನಿಮಾವಾದ್ದರಿಂದ ಅವೆಲ್ಲವನ್ನು ಸಹಿಸಿಕೊಂಡು ಮುಂದೆ ಸಾಗಬೇಕು. ಅದು ಬಿಟ್ಟರೆ ಯಾವುದೇ ಗೊಂದಲವಿಲ್ಲದಂತೆ ಸಿನಿಮಾ ಮುಗಿಸಿದ್ದಾರೆ ಶಂಕರ್‌.

ನಾಯಕ ಪ್ರಜ್ವಲ್‌ ಕೆರಿಯರ್‌ ನಲ್ಲಿ ಇದೊಂದು ಅದ್ಧೂರಿ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜ್ವಲ್‌ ಕೂಡಾ ಮಾಸ್‌ ಹೀರೋ ಆಗಿ, ಲವರ್‌ ಬಾಯ್‌ ಆಗಿ ಇಷ್ಟವಾಗುತ್ತಾರೆ. ಸಿನಿಮಾದ ಟೈಟಲ್‌ ಗೆ ತಕ್ಕಂತೆ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪ್ರಿಯಾಂಕಾ ಇದ್ದಷ್ಟು ಹೊತ್ತು ಚೆಂದ. ರೇಖಾ, ರಾಹುಲ್‌ ದೇವ್‌, ದೀಪಕ್‌ ರಾಜ್‌, ಅರವಿಂದ್‌ ರಾವ್‌ ಸೇರಿದಂತೆ ಅನೇಕರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಥೆಯ ಆಶಯಕ್ಕೆ ಛಾಯಾಗ್ರಹಕ ಜೈ ಆನಂದ್‌ ಸಾಥ್‌ ನೀಡಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ

ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್

ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್

ಮಂಡ್ಯ: 5 ರೂಪಾಯಿ ವೈದ್ಯ ಡಾ.ಶಂಕರೇಗೌಡರಿಗೆ ಹೃದಯಾಘಾತ

ಮಂಡ್ಯ: 5 ರೂಪಾಯಿ ವೈದ್ಯ ಡಾ.ಶಂಕರೇಗೌಡರಿಗೆ ಹೃದಯಾಘಾತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

twenty one hours kannada movie review

‘ಟ್ವೆಂಟಿ ಒನ್‌ ಅವರ್’ ಚಿತ್ರ ವಿಮರ್ಶೆ: ನಿಗೂಢ ಇಪ್ಪತ್ತೂಂದು ಗಂಟೆ

‘ಸಕುಟುಂಬ ಸಮೇತ’ ನೋಡುವ ಸಿನಿಮಾ!

‘ಸಕುಟುಂಬ ಸಮೇತ’ ನೋಡುವ ಸಿನಿಮಾ!

prarambha

‘ಪ್ರಾರಂಭ’ ಚಿತ್ರ ವಿಮರ್ಶೆ: ಭಗ್ನ ಪ್ರೇಮಿಯ ಕಥೆ-ವ್ಯಥೆ

garuda kannada movie

ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ‘ಗರುಡ’ ಪುರಾಣ

777 charlie

‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ

MUST WATCH

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

ಹೊಸ ಸೇರ್ಪಡೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಹಿಪ್‌ಹಾಪ್‌ ನೃತ್ಯದ ಜೊತೆ ಹೈಬ್ರಿಡ್‌ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ರೆನ್ಯೂ ಪವರ್​​ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ

ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ

ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.