ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್‌ ಅಬ್ಬರ


Team Udayavani, Mar 31, 2023, 9:37 AM IST

Gurudev hoysala

“ನೀವು ಭೂಮಿನ ಹಾಳು ಮಾಡೋಕೆ ನಿಂತಿದ್ದೀರ, ನಾನು ಕಾಪಾಡೋಕೆ ನಿಂತಿದ್ದೀನಿ…’ ಪೊಲೀಸ್‌ ಅಧಿಕಾರಿ ಗುರುದೇವ್‌ ಇಂಥದ್ದೊಂದು ಖಡಕ್‌ ಡೈಲಾಗ್‌ ಎದುರಾಳಿಗಳ ಮುಂದೆ ಹೇಳುವಷ್ಟರೊಳಗೆ, ಕೆಲ ಅಮಾಯಕರು ಉಸಿರು ನಿಲ್ಲಿಸಿರುತ್ತಾರೆ. ದ್ವೇಷದ ಕಿಡಿ ಸುತ್ತಮುತ್ತಲಿರುವವರನ್ನು ಒಂದಷ್ಟು ಆಹುತಿ ತೆಗೆದುಕೊಂಡಿರುತ್ತದೆ. ಗುಂಡಿನ ಮೊರೆತಕ್ಕೆ ದುರಾಳಿಗಳ ಒಂದಷ್ಟು ತಲೆಗಳೂ ಉರುಳಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಗುರುದೇವ್‌ ಹೊಯ್ಸಳ’ ಸಿನಿಮಾದ ಕೆಲ ದೃಶ್ಯಗಳು. ಇಷ್ಟು ಹೇಳಿದ ಮೇಲೆ ಇದೊಂದು ಹೈ ವೋಲ್ಟೇಜ್ ಆ್ಯಕ್ಷನ್‌ ಸಿನಿಮಾ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಾದ್ರೆ, ಈ “ಭೂಮಿ’ ಅಂದ್ರೆ ಯಾವುದು? ಅದರ ರಕ್ಷಣೆ ಆಗುತ್ತದೆಯಾ? “ಭೂಮಿ’ ಹಾಳು ಮಾಡಲು ಬಂದವರಿಗೆ ತಕ್ಕ ಶಾಸ್ತಿ ಆಗುತ್ತದೆಯಾ? ಇಲ್ಲವಾ ಎಂಬುದು ಗೊತ್ತಾಗಬೇಕಾದರೆ “ಗುರುದೇವ್‌ ಹೊಯ್ಸಳ’ನನ್ನು ಕ್ಲೈಮ್ಯಾಕ್‌ Õವರೆಗೂ ನೋಡಬೇಕು.

ಬಿಡುಗಡೆಗೂ ಮೊದಲೇ ಚಿತ್ರತಂಡ ಹೇಳಿದಂತೆ, ಟೀಸರ್‌ ಮತ್ತು ಟ್ರೇಲರ್‌ಗಳಲ್ಲಿ ತೋರಿಸಿರುವಂತೆ “ಗುರುದೇವ್‌ ಹೊಯ್ಸಳ’ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಥಾಹಂದರದ ಸಿನಿಮಾ. ಒಬ್ಬ ಪ್ರಾಮಾಣಿಕ ಪೊಲೀಸ್‌ ಅಧಿಕಾರಿಯೊಬ್ಬ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಏನೇನು ಸಮಸ್ಯೆ, ಸವಾಲು ಮತ್ತು ಸಂಕಷ್ಟಗಳನ್ನು ಎದುರಿಸುತ್ತಾನೆ. ಅಂತಿಮವಾಗಿ ಪ್ರೀತಿ, ಪ್ರೇಮ, ಕರ್ತವ್ಯ, ಜಾತೀಯತೆ ವೈಷಮ್ಯ ಅದೆಲ್ಲವನ್ನೂ ಹೇಗೆ ಎದುರಿಸಿ ನಿಲ್ಲುತ್ತಾನೆ ಎಂಬುದು ಸಿನಿಮಾದ ಕಥಾವಸ್ತು. ಮಾಮೂಲಿ ಪೊಲೀಸ್ ಸ್ಟೋರಿ ಸಿನಿಮಾಗಳಂತೆ ಇಲ್ಲೂ ಪೊಲೀಸ್‌ ಮತ್ತು ಪಾತಕಿಗಳ ನಡುವೆ ಗುದ್ದಾಟ, ಹೋರಾಟ, ಮಾಫಿಯಾ, ಎಲ್ಲವೂ ಇದೆ. ಇವೆಲ್ಲದರ ಜೊತೆಗೆ ಮರ್ಯಾದ ಹತ್ಯೆಯಂತಹ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಆ್ಯಕ್ಷನ್‌ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯ್‌.

ಇದನ್ನೂ ಓದಿ:ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’

ಇನ್ನು ನಾಯಕ ನಟ ಧನಂಜಯ್‌ “ಗುರುದೇವ್‌ ಹೊಯ್ಸಳ’ನಾಗಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಡೈಲಾಗ್‌ ಡೆಲಿವರಿ, ಆ್ಯಕ್ಷನ್‌, ಮ್ಯಾನರಿಸಂ, ಪೊಲೀಸ್‌ ಗೆಟಪ್‌ ಎಲ್ಲದರಲ್ಲೂ ಧನಂಜಯ್‌ ಅವರದ್ದು “ಅಬ್ಬರ’ದ ಅಭಿನಯ. “ಗುರುದೇವ್‌ ಹೊಯ್ಸಳ’ನಾಗಿ ಮಾಸ್‌ ಆಡಿಯನ್ಸ್‌ ಮನ-ಗಮನ ಎರಡನ್ನೂ ಸೆಳೆಯಲು ಧನಂಜಯ್‌ಯಶಸ್ವಿಯಾಗಿದ್ದಾರೆ. ನಾಯಕಿ ಅಮೃತಾ ಅಯ್ಯಂಗಾರ್‌ ತೆರೆಮೇಲೆ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ.

ಖಳನಾಯಕನಾಗಿ ನವೀನ್‌ ಶಂಕರ್‌ ತಮ್ಮ ಪಾತ್ರಕ್ಕೆ ಫ‌ುಲ್‌ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದಂತೆ ಅಚ್ಯುತ ಕುಮಾರ್‌, ರಾಜೇಶ್‌ ನಟರಂಗ, ನಾಗಭೂಷಣ್‌ ಸೇರಿದಂತೆ ಬಹುತೇಕ ಎಲ್ಲ ಕಲಾವಿದರದ್ದೂ ನಿರ್ದೇಶಕರ ಆಶಯಕ್ಕೆ ತಕ್ಕಂತೆ ಅಚ್ಚುಕಟ್ಟು ಅಭಿನಯ.

ತಾಂತ್ರಿಕವಾಗಿ ಛಾಯಾಗ್ರಹಣ, ಲೊಕೇಶನ್ಸ್‌ ಸಿನಿಮಾವನ್ನು ಅದ್ಧೂರಿಯಾಗಿ ಕಾಣುವಂತೆ ಮಾಡಿದೆ. ಒಂದೆರಡು ಹಾಡುಗಳು ಗುನುಗುಡುವಂತಿದ್ದು, ಹಿನ್ನೆಲೆ ಸಂಗೀತ ಸಿನಿಮಾದ ಮತ್ತೂಂದು ಪ್ಲಸ್‌ ಪಾಯಿಂಟ್‌ ಎನ್ನಬಹುದು. ಒಟ್ಟಾರೆ ಮಾಸ್‌ ಪ್ರೇಕ್ಷಕರನ್ನೇ ಗಮನದಲ್ಲಿರಿಸಿಕೊಂಡು ಮಾಡಿದಂತಿರುವ “ಗುರುದೇವ್‌ ಹೊಯ್ಸಳ’ ಥಿಯೇಟರ್‌ಗೆ ಹೋದವರಿಗೆ ಒಂದಷ್ಟು ಅಬ್ಬರದ ಮನರಂಜನೆಯನ್ನೇ ನೀಡುತ್ತಾನೆ.

ಜಿ.ಎಸ್‌.ಕೆ. ಸುಧನ್‌

ಟಾಪ್ ನ್ಯೂಸ್

AFGHAN ONE DAY

ಏಕದಿನ: ಲಂಕೆಯನ್ನು ಮಣಿಸಿದ ಅಫ್ಘಾನ್‌

hockey

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

sand

ಜೂ. 5ರಿಂದ ಮರಳುಗಾರಿಕೆ ನಿಷೇಧ

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siren

Movie review: ‘ಸೈರನ್‌’ ಸೌಂಡ್‌ಗೆ ಪಾಪಿಗಳು ಅಂದರ್‌!

jersey number 10 movie review

ಜರ್ಸಿ ನಂ.10 ಚಿತ್ರ ವಿಮರ್ಶೆ: ಕ್ರೀಡಾ ಸ್ಫೂರ್ತಿಯ ಆದ್ಯ ಆಟ

ಚಿತ್ರ ವಿಮರ್ಶೆ: ‘ಶ್ರೀಮಂತ’ ರೈತರ ಚಿತ್ರಣ

ಚಿತ್ರ ವಿಮರ್ಶೆ: ‘ಶ್ರೀಮಂತ’ ರೈತರ ಚಿತ್ರಣ

Daredevil Mustafa movie review

‘Daredevil Mustafa’ ಚಿತ್ರ ವಿಮರ್ಶೆ: ಬದಲಾದ ಮುಸ್ತಾಫಾನ ಬಲವಾದ ಸಂದೇಶ

ramzan kannada movie review

‘ರಂಜಾನ್‌’ ಚಿತ್ರ ವಿಮರ್ಶೆ: ಹಸಿವು ಮತ್ತು ಬದುಕಿನ ಗಂಭೀರ ಚಿತ್ರಣ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

AFGHAN ONE DAY

ಏಕದಿನ: ಲಂಕೆಯನ್ನು ಮಣಿಸಿದ ಅಫ್ಘಾನ್‌

hockey

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

sand

ಜೂ. 5ರಿಂದ ಮರಳುಗಾರಿಕೆ ನಿಷೇಧ

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌