ಕಬ್ಜ ಚಿತ್ರ ವಿಮರ್ಶೆ; ಮಾಸ್ ಮನತಣಿಸುವ ಅರ್ಕೇಶ್ವರ ವೈಭವ


Team Udayavani, Mar 18, 2023, 10:38 AM IST

kabzaa

ಸಣ್ಣ ಕಿಡಿಯೊಂದು ಹೊತ್ತಿಕೊಂಡು ಮುಂದೆ ಅದು ಜ್ವಾಲಾಮುಖೀಯಾಗುತ್ತದೆ. ಆ ಜ್ವಾಲಾಮುಖೀಯ ಭೀಕರತೆಗೆ ಒಂದೊಂದು ಊರು ಕಬ್ಜವಾಗುತ್ತಾ, ರಕ್ತಸಿಕ್ತ ಅಧ್ಯಾಯ ಮುಂದುವರೆಯುತ್ತಾ ಸಾಗುತ್ತದೆ. ಅಂದಹಾಗೆ, ಆ ಜ್ವಾಲಾಮುಖೀಯ ಹೆಸರು ಅರ್ಕೇಶ್ವರ. ಮುಗ್ಧ ಅರ್ಕೇಶ್ವರ ಉಗ್ರರೂಪ ತಾಳಿದ ದಿನದಿಂದ ಊರಲ್ಲಿರೋ ಡಾನ್‌ಗಳ ನಿದ್ದೆ ಮಾಯವಾಗಿ ಬಿಡುತ್ತದೆ. ಅಷ್ಟಕ್ಕೂ ಈ ಅರ್ಕೇಶ್ವರನ ಹಿನ್ನೆಲೆಯೇನು, ಆತನ “ಉಗ್ರಪ್ರತಾಪ’ಕ್ಕೆ ಕಾರಣವೇನು ಎಂದು ತಿಳಿಯುವ ಕುತೂಹಲವಿದ್ದರೆ ನೀವು “ಕಬ್ಜ’ ಚಿತ್ರವನ್ನು ನೋಡಬೇಕು.

ನಿರ್ದೇಶಕ ಆರ್‌.ಚಂದ್ರು ಒಂದು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡಲು ಏನೆಲ್ಲಾ ಅಂಶಗಳು ಬೇಕು ಅವೆಲ್ಲವನ್ನು ನೀಟಾಗಿ ಜೋಡಿಸಿ ಮಾಡಿರೋದೇ “ಕಬ್ಜ’. ಚಂದ್ರು ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಬಾರಿ ಚಂದ್ರು ದೊಡ್ಡದಾಗಿ ಕನಸು ಕಂಡಿರೋದು ತೆರೆಮೇಲೆ ಎದ್ದು ಕಾಣುತ್ತದೆ. ಒಂದೆರಡು ನಿಮಿಷ ಬಂದು ಹೋಗುವ ಶಾಟ್ಸ್‌ಗಳನ್ನೂ ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಆ ಮಟ್ಟಿಗೆ “ಕಬ್ಜ’ ಒಂದು ಮೇಕಿಂಗ್‌ ಸಿನಿಮಾ. ಮಾಸ್‌ ಸಿನಿಮಾಗಳನ್ನು ಕಟ್ಟಿಕೊಡುವಾಗ ಅದಕ್ಕೊಂದು ಬ್ಯಾಕ್‌ಗ್ರೌಂಡ್‌ ಬೇಕಾಗುತ್ತದೆ. ಅದನ್ನು ಚಂದ್ರು ಇಲ್ಲಿ ತುಂಬಾ ಸೊಗಸಾಗಿ ಹಾಗೂ ಮಾಸ್‌ ಪ್ರಿಯರು ಮೆಚ್ಚುವಂತೆ ಕಟ್ಟಿಕೊಟ್ಟಿದ್ದಾರೆ.

ಇನ್ನು, ಕಥೆಯ ವಿಚಾರಕ್ಕೆ ಬರುವುದಾದರೆ ಇದು ಕೂಡಾ ಸೇಡಿನಿಂದ ಆರಂಭವಾಗುವ ಕಥೆ. ಸಣ್ಣದಾಗಿ ಹತ್ತಿಕೊಂಡು ಕಿಡಿ, ಮುಂದೆ ಇಡೀ ಊರನ್ನೇ ದಹಿಸುತ್ತಾ ಸಾಗುತ್ತದೆ. ಚಂದ್ರು ಹಾಗೂ ತಂಡ ಸಿನಿಮಾ ಆರಂಭದ ದಿನಗಳಲ್ಲೇ ಇದು “ಕೆಜಿಎಫ್’ ಚಿತ್ರದಿಂದ ಪ್ರೇರಣೆಗೊಂಡು ಮಾಡಿದ ಸಿನಿಮಾ ಎಂದಿದೆ. ಅದರಂತೆ “ಕಬ್ಜ’ ನೋಡುವಾಗ “ಕೆಜಿಎಫ್’ ಚಿತ್ರದ ಹೋಲಿಕೆ ಬರುವುದು ಸಹಜ. ಆದರೆ, ಅದಕ್ಕಾಗಿ ಒಂದು ದೊಡ್ಡ ಊರನ್ನೇ ಸೃಷ್ಟಿ ಮಾಡುವುದು, ತಾಂತ್ರಿಕವಾಗಿ ಸಿನಿಮಾವನ್ನು ಶ್ರೀಮಂತಗೊಳಿಸುವುದು ಸುಲಭದ ಮಾತಲ್ಲ. ಆ ವಿಚಾರದಲ್ಲಿ ಚಂದ್ರು ಗೆದ್ದಿದ್ದಾರೆ. ಅದಕ್ಕೆ ಒಂದು ದೊಡ್ಡ ತಾಂತ್ರಿಕ ತಂಡ ಸಾಥ್‌ ನೀಡಿರುವುದು ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಸುದೀಪ್‌ ಅವರ ಖಡಕ್‌ ಎಂಟ್ರಿಯಿಂದ ಆರಂಭವಾಗುವ ಸಿನಿಮಾ ಶಿವರಾಜ್‌ಕುಮಾರ್‌ ಅವರ ರಗಡ್‌ ಲುಕ್‌ ನೊಂದಿಗೆ ಕೊನೆಗೊಳ್ಳುತ್ತದೆ. ಅದು ಹೇಗೆ ಮತ್ತು ಯಾಕೆ ಎಂಬುದೇ “ಕಬ್ಜ’.

ಚಂದ್ರು ಅವರ ಮೂಲಬ್ರಾಂಡ್‌ ಸೆಂಟಿಮೆಂಟ್‌. ಅದನ್ನು ಮಾಸ್‌ ಸಿನಿಮಾದಲ್ಲೂ ಸೇರಿಸಿ, ಅದಕ್ಕೊಂದು ಟ್ರಾಕ್‌ ಕೊಟ್ಟಿದ್ದಾರೆ. ನಿರ್ದೇಶಕ ಚಂದ್ರು ಅವರ ಮೂಲ ಗುರಿ “ಕಬ್ಜ-2′ ಇದ್ದಂತಿದೆ. ಪಾರ್ಟ್‌-2ಗೆ ಏನೇನು ವೇದಿಕೆ ಕಲ್ಪಿಸಬೇಕು ಅವೆಲ್ಲವನ್ನು ಈ ಚಿತ್ರದಲ್ಲಿ ಕಲ್ಪಿಸಿದ್ದಾರೆ.

ಇನ್ನು ಇಡೀ ಸಿನಿಮಾವನ್ನು ಆವರಿಸಿಕೊಂಡಿರೋದು ಉಪೇಂದ್ರ. ಖಡಕ್‌ ಲುಕ್‌, ಭರ್ಜರಿ ಆ್ಯಕ್ಷನ್‌ನಲ್ಲಿ ಉಪೇಂದ್ರ ಮಿಂಚಿದ್ದಾರೆ. ಉಳಿದಂತೆ ನಟಿ ಶ್ರೀಯಾ ಶರಣ್‌ ಮಧುಮತಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ನೀನಾಸಂ ಅಶ್ವತ್ಥ್, ಸುನೀಲ್‌ ಪುರಾಣಿಕ್‌, ಅನೂಪ್‌ ರೇವಣ್ಣ, ಬಿ.ಸುರೇಶ್‌ ಸೇರಿದಂತೆ ಇತರರು ನಟಿಸಿದ್ದಾರೆ.

ಮುಖ್ಯವಾಗಿ ಸುದೀಪ್‌ ಹಾಗೂ ಶಿವಣ್ಣ ಎಂಟ್ರಿ “ಕಬ್ಜ’ ಕುತೂಹಲ ಹೆಚ್ಚಿಸಿದೆ. ಮುಖ್ಯವಾಗಿ ಈ ಚಿತ್ರವನ್ನು ತಾಂತ್ರಿಕವಾಗಿ ಶ್ರೀಮಂತಗೊಳಿಸುವಲ್ಲಿ ಕಲಾ ನಿರ್ದೇಶಕ ಶಿವಕುಮಾರ್‌ ಹಾಗೂ ಛಾಯಾಗ್ರಾಹಕ ಎ.ಜೆ.ಶೆಟ್ಟಿ ಅವರ ಪ್ರಯತ್ನ ದೊಡ್ಡದಿದೆ. ಇಬ್ಬರೂ ಸಿನಿಮಾವನ್ನು ಸುಂದರವನ್ನಾಗಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತದಲ್ಲಿ “ಕಬ್ಜ’ ಮಾಡಿದ್ದಾರೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

3-udupi

Udupi: ಬಾರ್‌ ಮಾಲಕರ ಮನೆಯಲ್ಲಿ ಅಗ್ನಿ ಅವಘಡ; ದಂಪತಿಗೆ ಗಂಭೀರ ಗಾಯ

SSLC-Students

SSLC Exams: ಎಸೆಸೆಲ್ಸಿ ಮಕ್ಕಳ ಮನೆ ಮನೆಗೆ ಬರ್ತಾರೆ ಶಿಕ್ಷಕರು!

KUPMA

Pre University Exam: ಪಿಯುಸಿ 3 ಪರೀಕ್ಷೆಗೆ “ಕುಪ್ಮ” ಆಕ್ಷೇಪ; ಕೈಬಿಡಲು ಆಗ್ರಹ

Nagendra

Valimiki Nigama Scam: ನಂಗೇನೂ ಗೊತ್ತಿಲ್ಲ: ನಾಗೇಂದ್ರ ಬಾಯಿಪಾಠಕ್ಕೆ ಇ.ಡಿ. ಸುಸ್ತು!

Auto ರಿಕ್ಷಾದಲ್ಲೇ 4 ರಾಜ್ಯ ಸುತ್ತಿದ ಬಂಟ್ವಾಳದ ಯುವಕರು

Auto ರಿಕ್ಷಾದಲ್ಲೇ 4 ರಾಜ್ಯ ಸುತ್ತಿದ ಬಂಟ್ವಾಳದ ಯುವಕರು

HDK

Kaveri water Problem; ಸಾಯುವುದರೊಳಗೆ ಕಾವೇರಿ ಸಮಸ್ಯೆಗೆ ಮುಕ್ತಿ: ಎಚ್‌ಡಿಕೆ

2-dk-holiday

Red Alert; ಇಂದು(ಜು.15) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ, ಪಿಯು ಕಾಲೇಜುಗಳಿಗೆ ರಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jigar movie review

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

Kaagada movie review

Kaagada movie review; ಕಾಗದ ಮೇಲೆ ಅರಳಿದ ಮುಗ್ಧ ಪ್ರೀತಿ

Sambhavami Yuge Yuge Review

Sambhavami Yuge Yuge Review; ಊರು ಗೆದ್ದ ಹಳ್ಳಿಹೈದ

love li movie review

Love Li movie review: ಪ್ರೀತಿ, ದ್ವೇಷ ಮತ್ತು ಅವನು!

Shivamma movie review;

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

3-udupi

Udupi: ಬಾರ್‌ ಮಾಲಕರ ಮನೆಯಲ್ಲಿ ಅಗ್ನಿ ಅವಘಡ; ದಂಪತಿಗೆ ಗಂಭೀರ ಗಾಯ

SSLC-Students

SSLC Exams: ಎಸೆಸೆಲ್ಸಿ ಮಕ್ಕಳ ಮನೆ ಮನೆಗೆ ಬರ್ತಾರೆ ಶಿಕ್ಷಕರು!

KUPMA

Pre University Exam: ಪಿಯುಸಿ 3 ಪರೀಕ್ಷೆಗೆ “ಕುಪ್ಮ” ಆಕ್ಷೇಪ; ಕೈಬಿಡಲು ಆಗ್ರಹ

Nagendra

Valimiki Nigama Scam: ನಂಗೇನೂ ಗೊತ್ತಿಲ್ಲ: ನಾಗೇಂದ್ರ ಬಾಯಿಪಾಠಕ್ಕೆ ಇ.ಡಿ. ಸುಸ್ತು!

Auto ರಿಕ್ಷಾದಲ್ಲೇ 4 ರಾಜ್ಯ ಸುತ್ತಿದ ಬಂಟ್ವಾಳದ ಯುವಕರು

Auto ರಿಕ್ಷಾದಲ್ಲೇ 4 ರಾಜ್ಯ ಸುತ್ತಿದ ಬಂಟ್ವಾಳದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.