ಚಿತ್ರ ವಿಮರ್ಶೆ; ಥ್ರಿಲ್ಲರ್ ‘ಮೇರಿ’ಯ ಜಾಡು ಹಿಡಿದು..


Team Udayavani, Mar 12, 2023, 4:59 PM IST

kannada movie mary review

ಚಿಕ್ಕಮಗಳೂರು ಜಿಲ್ಲೆಯ ಕಾಡು ಮಧ್ಯದಲ್ಲಿರುವ ಪೊಲೀಸ್‌ ಠಾಣೆಗೆ ಹೊಸದಾಗಿ ನೇಮಕವಾದ ಎಸ್‌ಐ ಮುಂದೆ ಹುಡುಗಿಯೊಬ್ಬಳು ತನ್ನ ಮೇಲೆ ರೇಪ್‌ ಆಗಿದೆ ಎಂದು ದೂರು ನೀಡುತ್ತಾಳೆ. ಜನ ಸೇವೆಯೇ ಗುರಿ ಎಂದುಕೊಂಡಿರುವ ಎಸ್‌ಐ ತನಿಖೆ ಆರಂಭಿಸುತ್ತಾನೆ. ಅಲ್ಲಿಂದ ಸಿನಿಮಾದ ಹಾದಿ ಕೂಡಾ ಬದಲಾಗುತ್ತಾ ಹೋಗುತ್ತದೆ. ಹೊಸ ಹೊಸ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಅಷ್ಟಕ್ಕೂ ಆ ಅಂಶಗಳು ಏನು ಎಂಬ ಕುತೂಹಲ ನಿಮಗಿದ್ದರೆ ನೀವು ಈ ವಾರ ತೆರೆಕಂಡಿರುವ “ಮೇರಿ’ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ವಾರ ವಾರ ಚಿತ್ರಮಂದಿರಕ್ಕೆ ಬರುವ ಹೊಸಬರ ಸಿನಿಮಾಗಳು ಒಂದಷ್ಟು ಹೊಸತನವನ್ನು ಪ್ರಯತ್ನಿಸುತ್ತಿವೆ. ತಮಗೆ ಇರುವ ಸೀಮಿತ ಅವಕಾಶವನ್ನು ಸದು ಪಯೋಗಪಡಿಸಿಕೊಳ್ಳುವ ಮೂಲಕ ಭರವಸೆ ಮೂಡಿಸುತ್ತಿರುವುದಂತೂ ಸುಳ್ಳಲ್ಲ. “ಮೇರಿ’ ಕೂಡಾ ಅಂತಹ ಒಂದು ಪ್ರಯತ್ನ ಎನ್ನಬಹುದು.

ನಿರ್ದೇಶಕ ಮನೋಜ್‌ ಒಂದು ಥ್ರಿಲ್ಲರ್‌ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹುಡುಗಿಯೊಬ್ಬಳು ಪೊಲೀಸ್‌ ಸ್ಟೇಷನ್‌ಗೆ ಎಂಟ್ರಿಕೊಡುವುದರಿಂದ ಆರಂಭವಾಗುವ ಸಿನಿಮಾ ಬಹುತೇಕ ಅಲ್ಲೇ ಸಾಗುತ್ತದೆ. ಒಂದು ಥ್ರಿಲ್ಲರ್‌ ಸಿನಿಮಾವಾಗಿ ಟ್ವಿಸ್ಟ್‌-ಟರ್ನ್ಗಳೊಂದಿಗೆ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನವನ್ನು ನೀಟಾಗಿ ಮಾಡಲಾಗಿದೆ. ಆರಂಭದಲ್ಲಿ ಇದೊಂದು ಶೋಷಣೆಗೆ ಒಳಗಾದ ಹೆಣ್ಣೊಬ್ಬಳ ಕಥೆ ಎಂದು ಭಾಸವಾಗುವ ಸಿನಿಮಾ, ಮುಂದೆ ಸಾಗುತ್ತಾ ಹೊಸ ಬಣ್ಣವನ್ನು ಪಡೆದುಕೊಳ್ಳುತ್ತದೆ.

ಪ್ರೇಕ್ಷಕ ಏನು ಊಹಿಸಿಕೊಳ್ಳುತ್ತಾನೋ, ತೆರೆಮೇಲೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿರುವುದೇ ಸಿನಿಮಾದ ಪ್ಲಸ್‌ ಪಾಯಿಂಟ್‌. ಯಾವುದೇ ಪಾತ್ರಗಳಿಗೂ ಅತಿಯಾದ ಬಿಲ್ಡಪ್‌, ಅನವಶ್ಯಕ ಎಳೆದಾಟಗಳಿಲ್ಲದೇ, ಇರುವ ಪಾತ್ರಗಳಲ್ಲಿ ಇಡೀ ಸಿನಿಮಾವನ್ನು ಎಲ್ಲೂ ಬೋರ್‌ ಆಗದಂತೆ ಕಟ್ಟಿಕೊಡಲಾಗಿದೆ. ಆ ಮಟ್ಟಿಗೆ ಹೊಸಬರ ಪ್ರಯತ್ನವನ್ನು ಮೆಚ್ಚಬಹುದು.

ಚಿತ್ರದಲ್ಲಿ ವಿಕಾಶ್‌ ಉತ್ತಯ್ಯ, ಅನೂಷ ಕೃಷ್ಣ, ವಿಕ್ಕಿ, ತೇಜಸ್ವಿನಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಎಸ್‌ಐ ಆಗಿ ನಟಿಸಿರುವ ವಿಕಾಶ್‌ ಉತ್ತಯ್ಯ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಸುಮಂತ್‌, ದೀಪಕ್‌ ಗೌಡ ನಟಿಸಿದ್ದಾರೆ.

ಟಾಪ್ ನ್ಯೂಸ್

1-asasa

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

rain

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

1-wewqew

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

1-kabini

Kabini ಹಿನ್ನೀರಲ್ಲಿ 3.5 ಟನ್‌ ತ್ಯಾಜ್ಯ ಸಂಗ್ರಹಿಸಿದ ಅರಣ್ಯ ಸಿಬಂದಿ, ಸ್ವಯಂಸೇವಕರು

1-sadasd

Wrestlers ಪ್ರತಿಭಟನೆ ಜೂನ್ 15 ರವರೆಗೆ ಸ್ಥಗಿತಕ್ಕೆ ಒಪ್ಪಿಗೆ; ಕಾಯುವಂತೆ ಸರ್ಕಾರ ಒತ್ತಾಯ

sunil-kkl

Education ಗುಲಾಮಿ ಚಿಂತನೆಯನ್ನು ತುರುಕುತ್ತೀರಾ?:ಸಿಎಂ ಸಿದ್ದರಾಮಯ್ಯರಿಗೆ ಸುನಿಲ್ ಪ್ರಶ್ನೆ

BJP Symbol

2024 Election; ಬಿಜೆಪಿಯ ಎನ್‌ಡಿಎ ವಿಸ್ತರಣೆ ಅಜೆಂಡಾ ಕಾರ್ಯಗತವಾಗಬಹುದೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Radha Searching Ramana Missing

Radha Searching Ramana Missing review: ಹುಡುಕಾಟದ ಹಿಂದೊಂದು ನೋವು!

Pinki Elli movie review

Pinki Elli movie review: ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಪಿಂಕಿ

yada yada hi movie review

Movie Review: ಕೊಲೆಯ ಸುತ್ತ ಕುತೂಹಲದ ಹುತ್ತ ‘ಯದಾ ಯದಾ ಹೀ’

siren

Movie review: ‘ಸೈರನ್‌’ ಸೌಂಡ್‌ಗೆ ಪಾಪಿಗಳು ಅಂದರ್‌!

jersey number 10 movie review

ಜರ್ಸಿ ನಂ.10 ಚಿತ್ರ ವಿಮರ್ಶೆ: ಕ್ರೀಡಾ ಸ್ಫೂರ್ತಿಯ ಆದ್ಯ ಆಟ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

1-scrain

ಕುಳಗೇರಿ ಕ್ರಾಸ್: ಕ್ರೇನ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

1-asasa

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

rain

ಬಿಪೊರ್ ಜಾಯ್ ಚಂಡಮಾರುತ: ಕರಾವಳಿಯಲ್ಲಿ ಎಚ್ಚರ ವಹಿಸಲು ಸೂಚನೆ

1-wewqew

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

1——–asasdasd

Gangavathi ನಗರಸಭೆ ಸಾಮಾನ್ಯಸಭೆ: ಶಾಸಕ ರೆಡ್ಡಿ ಅವರಿಂದ ಅಧಿಕಾರಿಗಳ ತರಾಟೆ