
‘ವಿಧಿ 370′ ಚಿತ್ರ ವಿಮರ್ಶೆ; ಯೋಧನ ಬದುಕಿನ ಸುತ್ತ ವಿಧಿ
Team Udayavani, Feb 26, 2023, 12:40 PM IST

ದೇಶ ಕಾಯುವ ಯೋಧರ ಸಾಹಸ, ಅವರ ಹೋರಾಟ, ಗಡಿಯಲ್ಲಿ ಶತ್ರುಗಳ ಮುಂದೆ ಎದೆಕೊಟ್ಟು ನಿಲ್ಲುವ ಪರಾಕ್ರಮದ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಆದರೆ, ಒಬ್ಬ ಯೋಧನ ಕಷ್ಟ, ಆತನ ಕುಟುಂಬದ ಕಥೆಗಳು ಬಂದಿರೋದು ಕಡಿಮೆ. ಈ ವಾರ ತೆರೆಕಂಡಿರುವ “ವಿಧಿ 370′ ಚಿತ್ರ ಈ ತರಹದ ಒಂದು ಅಂಶವನ್ನು ಹೊತ್ತು ತಂದಿದೆ. ದೇಶ ಪ್ರೇಮದ ಜೊತೆಗೆ ಸೈನಿಕನ ಸುತ್ತ ಸುತ್ತುವ ಈ ಸಿನಿಮಾದಲ್ಲಿ ಯೋಚಿಸಬೇಕಾದಂತಹ ಹಲವು ಅಂಶಗಳನ್ನು ಸೇರಿಸಿದ್ದಾರೆ ನಿರ್ದೇಶಕ ಶಂಕರ್.
ಮುಖ್ಯವಾಗಿ “ಆರ್ಟಿಕಲ್ 370′ ರದ್ದಾದ ಬಳಿಕ ಈಗ ಜಮ್ಮು ಮತ್ತು ಕಾಶ್ಮೀರ ಹೇಗಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸೂಕ್ಷ್ಮ ಸಂದೇಶದ ಜೊತೆಗೆ ಬಹುತೇಕರ ಅರಿವಿಗೆ ಬಾರದಿರುವ ಹಲವು ವಿಷಯಗಳನ್ನು ಸಿನಿಮಾದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕರು.
ಹಲವು ವರ್ಷಗಳ ಹಿಂದೆ ಕಿರುಕುಳ ಅನುಭವಿಸಿ ಗುಳೆಹೋಗಿದ್ದ ಕಾಶ್ಮೀರಿ ಪಂಡಿತರು ಆರ್ಟಿಕಲ್ 370 ರದ್ದಾದ ನಂತರ ಮತ್ತೆ ಕಾಶ್ಮೀರಕ್ಕೆ ಮರಳಿ ಬಂದಾಗ, ಆ ಪಂಡಿತರನ್ನು ನೋಡಿದ ಸ್ಥಳೀಯ ಕಾಶ್ಮೀರಿಗರ ಪ್ರತಿಕ್ರಿಯೆ ಹೇಗಿರುತ್ತದೆ.. ಇಂತಹ ಕೆಲವು ಸೂಕ್ಷ್ಮ ಅಂಶಗಳು ಗಮನ ಸೆಳೆಯುತ್ತವೆ. ಅದಕ್ಕೆ ಪೂರಕವಾಗಿ ಮ್ಮು ಮತ್ತು ಕಾಶ್ಮೀರ, ಶ್ರೀನಗರ, ಪೆಹಲ್‌ಗಾಂ, ಗುಲ್‌ವುರ್ಗ್, ನಾಡಿಮರ್ಗ್ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಕೂಡಾ ಮಾಡಲಾಗಿದೆ.
ಒಂದು ಪ್ರಯತ್ನವಾಗಿ “ವಿಧಿ 370′ ಮೆಚ್ಚುವಂತಹ ಸಿನಿಮಾ. ಚಿತ್ರದಲ್ಲಿ ನಟಿಸಿರುವ ಶಶಿಕುಮಾರ್, ಶೃತಿ, ಶಿವರಾಂ, ದೊಡ್ಡರಂಗೇಗೌಡ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Nutrition Food ಫಲಾನುಭವಿಗಳ ಕೈಸೇರದ ಪೌಷ್ಟಿಕ ಆಹಾರ; ಕೊರಗ,ಮಲೆಕುಡಿಯ ಸಮುದಾಯದವರ ಸಂಕಷ್ಟ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ

World cup Cricket ಜಗತ್ತನ್ನು ಬೆರಗುಗೊಳಿಸಿದ ಭಾರತ !