ಕೋಟಿಗೊಬ್ಬ-3 ಚಿತ್ರ ವಿಮರ್ಶೆ: ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ

Team Udayavani, Oct 16, 2021, 10:12 AM IST

kotigobba 3

ನೀವು “ಕೋಟಿಗೊಬ್ಬ-2′ ಸಿನಿಮಾ ನೋಡಿದ್ದರೆ ಅಲ್ಲಿ ಬರುವ ಸತ್ಯ ಹಾಗೂ ಶಿವ ಈ ಎರಡು ಪಾತ್ರಗಳು ನೆನಪಲ್ಲಿರುತ್ತವೆ. ಕೊನೆಗೆ ಶಿವ ಸತ್ತ, ಸತ್ಯ ಬದುಕಿದ ಎಂಬ ಅಂಶದೊಂದಿಗೆ ಸಿನಿಮಾ ಮುಗಿಯುತ್ತದೆ. ಶಿವನನ್ನು ಎಸಿಪಿ ಸಾಯಿಸಿದ ಎಂಬ ಸತ್ಯನ ಆರೋಪದೊಂದಿಗೆ ಎಸಿಪಿ ಕಿಶೋರ್‌ ಜೈಲಿಗೆ ಹೋಗಿರೋದು ನಿಮಗೆ ನೆನಪಿರಬಹುದು. ಈಗ “ಕೋಟಿಗೊಬ್ಬ-3′ ಸಿನಿಮಾದಲ್ಲಿ ಮತ್ತೆ ಸತ್ಯ- ಶಿವ ಪಾತ್ರಗಳು ಕಾಣಸಿಗುತ್ತವೆ. ಜೊತೆಗೆ ಅಚ್ಚರಿ ಎಂಬಂತೆ “ಗೋಸ್ಟ್‌ ಮ್ಯಾನ್‌’ಇಡೀ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಹಾಗಾದರೆ, ಆತ ಯಾರು, ಎಲ್ಲಿಂದ ಬಂದ… ಇದೇ ಇಡೀ “ಕೋಟಿಗೊಬ್ಬ-3′ ಚಿತ್ರದ ಹೈಲೈಟ್‌.

“ಕೋಟಿಗೊಬ್ಬ-3′ ಚಿತ್ರವನ್ನು “ಕೋಟಿಗೊಬ್ಬ -2′ ಚಿತ್ರದ ಮುಂದುವರೆದ ಭಾಗ ಎನ್ನುವುದಕ್ಕಿಂತ ಆ ಚಿತ್ರದ ಎರಡು ಪ್ರಮುಖ ಪಾತ್ರಗಳ ಮುಂದುವರೆದ ಭಾಗ ಎನ್ನಬಹುದು. ಮುಖ್ಯವಾಗಿ ಇಲ್ಲಿ ಸತ್ಯ ಹಾಗೂ ಎಸಿಪಿ ಕಿಶೋರ್‌ ಪಾತ್ರಗಳು ಮುಂದುವರೆದಿದೆ. ಉಳಿದಂತೆ ಹೊಸ ಪಾತ್ರಗಳು ಸೇರಿಕೊಳ್ಳುತ್ತಾ ಹೋಗಿವೆ. ಜೊತೆಗೆ ಹೊಸ ಸನ್ನಿವೇಶಗಳು, ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಮಜಾ ಕೊಡುವಲ್ಲಿ ಹಿಂದೆ ಬಿದ್ದಿಲ್ಲ. “ಕೋಟಿಗೊಬ್ಬ-3′ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ಒಂದು ಸಣ್ಣಲೈನ್‌ ನೊಂದಿಗೆ ಕಥೆಯನ್ನು ಬೆಳೆಸಿಕೊಂಡು ಹೋಗಲಾಗಿದೆ. ಹಾಗಾದರೆ ಅದೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಲಡ್ಡಿಯಿಲ್ಲ. ಶಿವ ಕಾರ್ತಿಕ್‌ ಎಂಬ ನವನಿರ್ದೇಶಕ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಸುದೀಪ್‌ ಸಿನಿಮಾದಲ್ಲಿರಬೇಕಾದ ಕೆಲವು ಮೂಲ ಅಂಶಗಳು ಹಾಗೂ ಅವರ ಅಭಿಮಾನಿಗಳನ್ನು ರಂಜಿಸುವ ಅವಕಾಶವನ್ನು ಅವರು ಮಿಸ್‌ ಮಾಡಿಲ್ಲ. ಈ ಸಿನಿಮಾದಲ್ಲಿ ಶಿವ ಹಾಗೂ ಸತ್ಯ ಪಾತ್ರಗಳ ಮೂಲವನ್ನು ತೆರೆದಿಟ್ಟಿದ್ದಾರೆ. ಜೊತೆಗೆ ಮಾಫಿಯಾ, ಅದರ ಹಿಂದಿನ ದ್ವೇಷ, ಸೇಡಿನ ಕಥೆಯನ್ನು ಸೇರಿಸಿ, ಕಮರ್ಷಿಯಲ್‌ ಎಂಟರ್‌ಟೈನರ್‌ ಆಗಿ ಕಟ್ಟಿಕೊಡಲಾಗಿದೆ.

ಇದನ್ನೂ ಓದಿ:ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

ಚಿತ್ರದ ಒಂದಷ್ಟು ಭಾಗ ವಿದೇಶದಲ್ಲಿ ನಡೆಯುತ್ತದೆ. ಅದಕ್ಕೊಂದು ಕಾರಣವೂ ಇದೆ. ಚಿತ್ರ ದಲ್ಲಿ ಮೈ ನವಿರೇಳಿಸುವ ವಿದೇಶದಲ್ಲಿನ ಚೇಸಿಂಗ್‌ ದೃಶ್ಯಗಳಿವೆ. ಸಣ್ಣದೊಂದು ಲವ್‌ ಸ್ಟೋರಿಯೂ ಪಾಸಿಂಗ್‌ ಶಾಟ್‌ನಲ್ಲಿ ಬಂದು ಹೋಗುತ್ತದೆ. ಅದರ ಇಲ್ಲಿ ಮೂಲ ಅಂಶ “ಗೋಸ್ಟ್‌ಮ್ಯಾನ್‌’ ರಿವೆಂಜ್‌. “ಗೋಸ್ಟ್‌ಮ್ಯಾನ್‌’ ಹಿನ್ನೆಲೆಯೊಂದಿಗೆ ಸಿನಿಮಾ ಸಾಗುತ್ತದೆ. ಸುದೀಪ್‌ ಎಂಟ್ರಿಯೇ ಇಲ್ಲಿ ಮಜಾ ಕೊಡುತ್ತದೆ. ವಿಭಿನ್ನ ಗೆಟಪ್‌ನೊಂದಿಗೆ ಎಂಟ್ರಿಕೊಟ್ಟು ಅವರ ಮುಖದರ್ಶನ ನೀಡಿದ್ದಾರೆ. ಅದರಾಚೆ ಅವರ ಪಾತ್ರ, ನಟನೆಯ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ “ಸತ್ಯಂ ಶಿವಂ ಸುಂದರಂ’.

ನಾಯಕಿ ಮಡೊನಾ ಬಂದಿದ್ದು ಹೋಗಿದ್ದು ಗೊತ್ತೇ ಆಗುವುದಿಲ್ಲ. ರವಿಶಂಕರ್‌ ಅವರಿಗೆ ಈ ಬಾರಿ ನಟನೆಗಿಂತ ಹೆಚ್ಚು ಡೈಲಾಗ್‌ ಸಿಕ್ಕಿದೆ. ಅದರಲ್ಲಿ ಬಹುತೇಕ ಡೈಲಾಗ್‌ ಕಿಚ್ಚ ಸುದೀಪ್‌ ಅವರ ಪರ್ಫಾರ್ಮೆನ್ಸ್‌ ಸುತ್ತವೇ ಸುತ್ತುತ್ತದೆ. ಉಳಿದಂತೆ ಅಫ್ತಾಬ್‌ ಶಿವದಾಸನಿ, ಶ್ರದ್ಧಾ, ನವಾನ್‌, ಅಭಿರಾಮಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

32tmc

ಬಿಜೆಪಿ ಸರ್ಕಾರ ಟಿಎಂಸಿಯತ್ತ ಬೆರಳು ತೋರಿಸಿ ಆರೋಪವೆಸಗುತ್ತಿದೆ: ಕಿರಣ್ ಕಾಂದೋಳಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದಗಜ ಚಿತ್ರ ವಿಮರ್ಶೆ: ಹೈವೋಲ್ಟೇಜ್‌ ಗಜಕಾಳಗದಲ್ಲಿ ಮಾಸ್‌ ಮಿಂಚು

ಮದಗಜ ಚಿತ್ರ ವಿಮರ್ಶೆ: ಹೈವೋಲ್ಟೇಜ್‌ ಗಜಕಾಳಗದಲ್ಲಿ ಮಾಸ್‌ ಮಿಂಚು

amruth apartments

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ಚಿತ್ರ ವಿಮರ್ಶೆ: ಕಾಂಕ್ರೀಟ್‌ ಕಾಡಿನ ತಲ್ಲಣಗಳ ಚಿತ್ರಣ

govinda govinda kannada movie review

‘ಗೋವಿಂದ ಗೋವಿಂದ’ ಚಿತ್ರವಿಮರ್ಶೆ: ಕಾಮಿಡಿ ಕಿಲಾಡಿಗಳ ಗೋವಿಂದ ಸ್ಮರಣೆ

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

ತಲೆದಂಡ : ಪರಿಸರದ ಮೌನವೂ ಚಿತ್ರದೊಳಗೆ ಇದ್ದಿದ್ದರೆ ಇನ್ನಷ್ಟು ಹಸಿರಾಗಿರುತ್ತಿತ್ತು !

ತಲೆದಂಡ : ಪರಿಸರದ ಮೌನವೂ ಚಿತ್ರದೊಳಗೆ ಇದ್ದಿದ್ದರೆ ಇನ್ನಷ್ಟು ಹಸಿರಾಗಿರುತ್ತಿತ್ತು !

MUST WATCH

udayavani youtube

ದೆಹಲಿಯಲ್ಲಿ ಕೊನೆಯದಾಗಿ ಭಾಷಣ ಮಾಡಿದ್ದ ಸಿಡಿಎಸ್ ಬಿಪಿನ್ ರಾವತ್

udayavani youtube

ಮಂಗಳೂರು: 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಚೋರರ ಬಂಧನ

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

ಹೊಸ ಸೇರ್ಪಡೆ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.