Movie review: ‘ಸೈರನ್‌’ ಸೌಂಡ್‌ಗೆ ಪಾಪಿಗಳು ಅಂದರ್‌!


Team Udayavani, May 27, 2023, 3:08 PM IST

siren

ಪ್ರತಿದಿನ ಸಂಜೆಯಾಗುವುದರೊಳಗೆ ಮನೆ ಸೇರಿಕೊಳ್ಳುವ ಮಗಳು, ಅಂದು ರಾತ್ರಿಯಾದರೂ ಆಕೆಯ ಸುಳಿವೇ ಇಲ್ಲ. ಗಾಬರಿಯಾದ ತಾಯಿ ತಮ್ಮ ಮತ್ತೂಬ್ಬ ಮಗಳ ಜೊತೆ ನಡುರಾತ್ರಿ ಪೊಲೀಸ್‌ ಸ್ಟೇಷನ್‌ನತ್ತ ಹೆಜ್ಜೆ ಹಾಕುತ್ತಾಳೆ. ತನ್ನ ಮಗಳು ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಪೊಲೀಸರ ಮುಂದೆ ಅಂಗಲಾಚುವ ಆ ತಾಯಿಗೆ ಅಲ್ಲಿನ ಪೊಲೀಸ್‌ ವ್ಯವಸ್ಥೆಯ ಮತ್ತೂಂದು ಮುಖ ಪರಿಚಯವಾಗುತ್ತದೆ. ಅಂತೂ ಕಾಡಿ-ಬೇಡಿ ಪೊಲೀಸರಿಗೆ ದೂರು ಕೊಟ್ಟರೂ, ಬೆಳಗಾಗುವುದರೊಳಗೆ ಕಾಣೆಯಾದ ಮಗಳು ಅರೆಬೆಂದ ಸ್ಥಿತಿಯಲ್ಲಿ ನಗರದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗುತ್ತಾಳೆ.

ಹಾಗಾದರೆ, ಕಾಣೆಯಾದ ಆ ಹುಡುಗಿ ಯಾರು? ಇಂಥದ್ದೊಂದು ಪೈಶಾಚಿಕ ಕೃತ್ಯಕ್ಕೆ ಕಾರಣವೇನು? ಇದರ ಹಿಂದಿನ ಕಾಣದ ಕೈಗಳು ಯಾರು? ಎಂಬುದನ್ನು ಪತ್ತೆ ಹಚ್ಚಲು ಯುವ ಐಪಿಎಸ್‌ ಅಧಿಕಾರಿ ಸಮರ್ಥ್ (ನಾಯಕ)ನನ್ನು ಪೊಲೀಸ್‌ ಇಲಾಖೆ ನೇಮಿಸುತ್ತದೆ. ಈ ಕೃತ್ಯದ ಹೆಜ್ಜೆ ಗುರುತು ಹಿಡಿದು ತನಿಖೆಗೆ ಹೊರಡುವ ನಾಯಕನಿಗೆ ಪ್ರತಿ ಹೆಜ್ಜೆಗೂ ಸವಾಲು ಎದುರಾಗುತ್ತದೆ. ಅದೆಲ್ಲವನ್ನು ಭೇದಿಸಿ ಪಾತಕಿಯ ಮುಖವನ್ನು ಪರಿಚಯಿಸುವ ಹೊತ್ತಿಗೆ ಸಿನಿಮಾ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಸೈರನ್‌’ ಚಿತ್ರದ ಕಥಾಹಂದರ. ಅದು ಹೇಗಿದೆ ಎಂಬ ಕುತೂಹಲ ನಿಮಗೂ ಇದ್ದರೆ, ಒಮ್ಮೆ ಥಿಯೇಟರ್‌ನಲ್ಲಿ “ಸೈರನ್‌’ ಸೌಂಡ್‌ ನೋಡಿಬರಲು ಅಡ್ಡಿಯಿಲ್ಲ.

ಆರಂಭದಲ್ಲಿಯೇ ಸಿನಿಮಾದ ಟೈಟಲ್‌, ಪೋಸ್ಟರ್‌, ಟೀಸರ್‌, ಟ್ರೇಲರ್‌ ನೋಡಿದರವರಿಗೆ ಮತ್ತು ಸ್ವತಃ ಚಿತ್ರತಂಡವೇ ಹೇಳಿಕೊಂಡಿರುವಂತೆ “ಸೈರನ್‌’ ಒಂದು ಔಟ್‌ ಆ್ಯಂಡ್‌ ಔಟ್‌ ಇನ್ವೆಸ್ಟಿಗೇಷನ್‌, ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾ.

ಹುಡುಗಿಯೊಬ್ಬಳ ಕಣ್ಮರೆ, ನಿಗೂಢ ಸಾವು, ಅದರ ಹಿಂದಿನ ಕಾರಣಗಳು ಮತ್ತು ಕಾರಣರಾದವರ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ತುಂಬ ಗಂಭೀರವಾಗಿ ತೆರೆದುಕೊಳ್ಳುವ “ಸೈರನ್‌’ ಅಷ್ಟೇ ಗಂಭೀರವಾಗಿ ಕ್ಲೈಮ್ಯಾಕ್ಸ್ ವರೆಗೂ ಸಾಗುತ್ತದೆ. ಕ್ರೈಂ-ಥ್ರಿಲ್ಲರ್‌ ಸಿನಿಮಾಗಳಿಗೆ ಕುತೂಹಲವೇ ಜೀವಾಳ. ಅಂಥದ್ದೇ ಒಂದಷ್ಟು ಕುತೂಹಲ, ಟ್ವಿಸ್ಟ್‌-ಟರ್ನ್ಗಳ ಜೊತೆ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕ ರಾಜ ವೆಂಕಯ್ಯ.

ಇನ್ನು ಯುವನಟ ಪ್ರವೀರ್‌ ಮೊದಲ ಸಿನಿಮಾದಲ್ಲೇ ಒಂದಷ್ಟು ಭರವಸೆ ಮೂಡಿಸುತ್ತಾರೆ. ಆ್ಯಕ್ಷನ್‌, ಡ್ಯಾನ್ಸ್‌ ಎಲ್ಲದಕ್ಕೂ ಪ್ರವೀರ್‌ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ. ಉಳಿದಂತೆ ಪವಿತ್ರಾ ಲೋಕೇಶ್‌, ಅಚ್ಯುತ ಕುಮಾರ್‌, ಶರತ್‌ ಲೋಹಿತಾಶ್ವ, ಸ್ಪರ್ಶ ರೇಖಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “ಸೈರನ್‌’ ನೋಡಲು ಅಡ್ಡಿಯಿಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.