ಜಾಲಿ ಹುಡುಗನ ಸ್ವೀಟ್‌ ರೈಡ್‌: ‘ಶುಗರ್ ಲೆಸ್’ ಚಿತ್ರ ವಿಮರ್ಶೆ


Team Udayavani, Jul 9, 2022, 1:02 PM IST

sugarless kannada movie review

ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ, ಇನ್ನೇನು ಮದುವೆ ಒಂದು ಆದರೆ ಆಯಿತು ಎಂದು ಜಾಲಿಯಾಗಿ ಇರುವ ಹುಡುಗನಿಗೆ ತನಗೆ ಡಯಾಬಿಟಿಸ್‌ ಎಂದು ಗೊತ್ತಾದರೆ ಹೇಗಾಗಬಹುದು ಹೇಳಿ. ಒಂದು ಕಡೆ ಭವಿಷ್ಯ ಮತ್ತೂಂದು ಕಡೆ ಮದುವೆ ಕನಸು… ಈ ಎರಡನ್ನೂ ಆತ ಹೇಗೆ ಬ್ಯಾಲೆನ್ಸ್‌ ಮಾಡುತ್ತಾನೆ, ಅದರಿಂದ ಆತನಿಗೆ ಏನೇನು ತೊಂದರೆಯಾಗುತ್ತದೆ ಎಂಬ ಅಂಶದೊಂದಿಗೆ ಈ ವಾರ ತೆರೆಗೆ ಬಂದಿರುವ ಚಿತ್ರ “ಶುಗರ್‌ಲೆಸ್‌’.

ಮೇಲ್ನೋಟಕ್ಕೆ ತುಂಬಾ ಗಂಭೀರ ಎನಿಸುವ ಒಂದು ಕಥೆಯನ್ನು ನಿರ್ದೇಶಕ ಶಶಿಧರ್‌ ತುಂಬಾ ಜಾಲಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದಾರೆ.

ಡಯಾಬಿಟಿಕ್‌ ಇದೆ ಎಂದಾಗಲೇ ಅನೇಕರು ಭಯ ಬೀಳುತ್ತಾರೆ. ಅದರಲ್ಲೂ ಇನ್ನು ಮದುವೆಯಾಗದ 28ರ ಹರೆಯದ ಯುವಕನಿಗೆ ಆ ಕಾಯಿಲೆ ಇದೆ ಎಂದಾಗ ಆತನ ಪರಿಸ್ಥಿತಿ ಹೇಗಾಗಬೇಡ… ಈ ಅಂಶಗಳನ್ನು ಇಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ. ಆರಂಭದಲ್ಲಿ ಮೂಲ ಕಥೆಯನ್ನು ಟ್ರ್ಯಾಕ್‌ಗೆ ತರುವ ಮುನ್ನ ನಾಯಕನ ಸುತ್ತ ಒಂದಷ್ಟು ಫ‌ನ್‌ ಅಂಶಗಳನ್ನು ಕಟ್ಟಿಕೊಡಲಾಗಿದೆ.

ಇದನ್ನೂ ಓದಿ:ಮೊದಲು ಟಿ20 ತಂಡದಿಂದ ಕೊಹ್ಲಿಯನ್ನು ಕೈಬಿಟ್ಟು ಯುವ ಆಟಗಾರನಿಗೆ ಅವಕಾಶ ನೀಡಿ: ಮಾಜಿ ನಾಯಕ

ಆದರೆ, ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿಂದ ಇಡೀ ಸಿನಿಮಾದ ಕಲರ್‌ ಹಾಗೂ ಖದರ್‌ ಬದಲಾಗುತ್ತದೆ. ಹೊಸ ಹೊಸ ಪಾತ್ರಗಳು ಸೇರಿಕೊಳ್ಳುತ್ತಾ, ಸಿನಿಮಾ ಮತ್ತಷ್ಟು ಜಾಲಿಯಾಗಿಯೇ ಸಾಗುತ್ತದೆ. ಚಿತ್ರದಲ್ಲಿ ಒಂದಷ್ಟು ಸೂಕ್ಷ್ಮ ಅಂಶಗಳ ಜೊತೆ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಚಿತ್ರ ಮಜಾ ಕೊಡುವುದು ಅದರ ಟ್ವಿಸ್ಟ್‌ ಹಾಗೂ ನಾಯಕನ ಫ‌ಜೀತಿಗಳಿಂದ. ಆ ಮಟ್ಟಿಗೆ “ಶುಗರ್‌ಲೆಸ್‌’ ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಆಗಿ ಖುಷಿ ಕೊಡುತ್ತದೆ.

ನಾಯಕ ಪೃಥ್ವಿ ಅಂಬರ್‌ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಜಾಲಿ ಹುಡುಗನಾಗಿ, ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಾಯಕಿ ಪ್ರಿಯಾಂಕಾ ತಿಮ್ಮೇಶ್‌ ತೆರೆಮೇಲೆ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ದತ್ತಣ್ಣ, ಧರ್ಮಣ್ಣ, ನವೀನ್‌ ಡಿ ಪಡೀಲ್‌ ಸೇರಿದಂತೆ ಇತರರು ನಟಿಸಿದ್ದಾರೆ.

ರವಿ ರೈ

ಟಾಪ್ ನ್ಯೂಸ್

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

1-sadsadsd

ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ: ಮಮತಾ ಬ್ಯಾನರ್ಜಿ

ಅಧಿಕ ಲಾಭಾಂಶ ನೀಡುವುದಾಗಿ ಹಣ ಪಡೆದು ಎನ್ ಐಟಿಕೆ ವಿದ್ಯಾರ್ಥಿಯಿಂದ 27.96 ಲ.ರೂ ವಂಚನೆ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ಧರ್ಮಸ್ಥಳ: ಲಾರಿ- ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

ವಿಚಾರಣೆ ನೆಪದಲ್ಲಿ ಖೈದಿಗಳ ಹಲ್ಲನ್ನೇ ಕಿತ್ತ ಐಪಿಎಸ್ ಅಧಿಕಾರಿ ಕರ್ತವ್ಯದಿಂದ ಅಮಾನತು

goa budget

ಗೋವಾ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kabzaa

ಕಬ್ಜ ಚಿತ್ರ ವಿಮರ್ಶೆ; ಮಾಸ್ ಮನತಣಿಸುವ ಅರ್ಕೇಶ್ವರ ವೈಭವ

‘ಚೌಕಾಬಾರ’ ಮೆಚ್ಚುಗೆ

‘ಚೌಕಾಬಾರ’ ಮೆಚ್ಚುಗೆ

kannada movie mary review

ಚಿತ್ರ ವಿಮರ್ಶೆ; ಥ್ರಿಲ್ಲರ್ ‘ಮೇರಿ’ಯ ಜಾಡು ಹಿಡಿದು..

dddooradarshana kannada movie

ದೂರದರ್ಶನ ಚಿತ್ರ ವಿಮರ್ಶೆ; ಟಿವಿಯ ಸದ್ದು, ಅಹಂಗೊಂದು ಗುದ್ದು

kadala theerada bhargava movie

ಕಡಲ ತೀರದ ಭಾರ್ಗವ ಚಿತ್ರ ವಿಮರ್ಶೆ: ಕಡಲ ತೀರದ ಭಾವಯಾನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-sasdsad

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

1-asdsdsd

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

1-qe21ew2qe

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್