ಅಡೆತಡೆಗಳ ದಾಟಿ ಗೆದ್ದ ‘ತನುಜಾ’


Team Udayavani, Feb 4, 2023, 11:12 AM IST

Tanuja

2020ರ ಸಮಯದಲ್ಲಿ ಇಡೀ ದೇಶವೇ ಕೊರೋನಾ ಹಾವಳಿಯಿಂದ ತತ್ತರಿಸಿ ಹೋಗಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಗ್ರಾಮದ ಹುಡುಗಿ ತನುಜಾ ಬೆಂಗಳೂರಿಗೆ ಬಂದು ನೀಟ್‌ ಪರೀಕ್ಷೆ ಬರೆದಿದ್ದು, ದೊಡ್ಡ ಸುದ್ದಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್‌ ಮತ್ತು ಸರ್ಕಾರ ತನುಜಾಳಿಗೆ ನೀಟ್‌ ಪರೀಕ್ಷೆ ಬರೆಯಲು ಅನುಕೂಲ ಮಾಡಿತ್ತು. ಸಾಕಷ್ಟು ಅಡೆತಡೆಗಳನ್ನು ಎದುರಿಸಿ, ಕೊನೆಗೂ ಅಂದುಕೊಂಡಂತೆ ತನುಜಾ ನೀಟ್‌ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಇದೇ ನೈಜ ಘಟನೆಯನ್ನು ಆಧರಿಸಿ ತೆರೆಗೆ ಬಂದಿರುವ ಚಿತ್ರ “ತನುಜಾ’.

ಇಷ್ಟು ಹೇಳಿದ ಮೇಲೆ ಇದೊಂದು ಸ್ಫೂರ್ತಿದಾಯಕ ಸಿನಿಮಾ ಎಂದು ಹೊಸದಾಗಿ ಹೇಳಬೇಕಿಲ್ಲ. ಒಂದು ನೈಜ ಘಟನೆಯನ್ನು ತೆರೆಮೇಲೆ ತರುವಾಗ, ಒಂದಷ್ಟು ಅಂಶಗಳನ್ನು ಸೇರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕರು ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

“ತನುಜಾ’ ನಮ್ಮ ನಾಡಿನ ಗ್ರಾಮೀಣ ಭಾಗದ ಹೆಣ್ಣುಮಗಳೊಬ್ಬಳ ಸಾಧನೆಯ ನೈಜ ಘಟನೆಯಾಧರಿತ ಚಿತ್ರ. ಒಬ್ಬ ವಿದ್ಯಾರ್ಥಿ ಮನಸ್ಸು ಮಾಡಿದರೆ ಯಾವುದೇ ಅಡೆ ತಡೆ ಬಂದರು ಮೆಟ್ಟಿ ನಿಂತು ಹೇಗೆಲ್ಲಾ ಸಾಧನೆ ಮಾಡಬಹುದು, ತಾಯಿಯ ಇಚ್ಛಾಶಕ್ತಿಯಿಂದ ಮಕ್ಕಳ ಭವಿಷ್ಯ ಹೇಗೆಲ್ಲಾ ರೂಪಿಸಬಹುದು? ಶಿಕ್ಷಕರು ನಿರ್ಧಾರ ಮಾಡಿದರೆ ವಿದ್ಯಾರ್ಥಿಗಳ ಗುರಿ ಮುಟ್ಟಲು ಹೇಗೆ ನೆರವಾಗಬಹುದು? ಒಂದು ಆಡಳಿತಾತ್ಮಕ ವ್ಯವಸ್ಥೆ ಸಾಮಾನ್ಯ ಜನರಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಿದರೆ ಏನೆಲ್ಲಾ ಅಚ್ಚರಿ ನಡೆಯಬಹುದು? ಎನ್ನುವುದಕ್ಕೆ “ತನುಜಾ’ ಚಿತ್ರ ಒಂದು ಉತ್ತಮ ಉದಾಹರಣೆ.

ಚಿತ್ರದ ಮೊದಲರ್ಧದಲ್ಲಿ ನಿರ್ದೇಶಕರು ತನುಜಾಗಳ ಕನಸು, ಶಿಕ್ಷಣದ ಬಗೆಗಿನ ಆಕೆಯ ತುಡಿತ, ತಾಯಿಯ ಬೆಂಬಲ, ಹೇಗಾದರೂ ತನುಜಾ ಪರೀಕ್ಷೆ ಬರೆಯಲೇಬೇಕೆಂದು ಆಕೆಯ ಗುರು ಪಡುವ ಶ್ರಮ ಸೇರಿದಂತೆ ಇತರ ಅಂಶಗಳನ್ನು ಕಟ್ಟಕೊಡಲಾಗಿದೆ. ಚಿತ್ರದ ದ್ವಿತೀಯಾರ್ಧವನ್ನು ಮತ್ತಷ್ಟು ಕುತೂಹಲಕಾರಿಯಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿ ದ್ದಾರೆ. ಇಲ್ಲಿ ತನುಜಾ ಪರೀಕ್ಷೆ ಬರೆಯಲು ಶಿವಮೊಗ್ಗ-ಬೆಂಗಳೂರು ಪ್ರಯಾಣದ ಹಾದಿಯನ್ನು ಚಿತ್ರಿಸಲಾಗಿದೆ. ಇಲ್ಲಿನ ಅಂಶಗಳು ಕ್ಷಣ ಕ್ಷಣವೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ನೋಡಿದರೆ ತನುಜಾ ಒಂದು ಪ್ರಯತ್ನವಾಗಿ ಮೆಚ್ಚುವಂತಹ ಸಿನಿಮಾ. ಶಿಕ್ಷಣದ ತುಡಿತವಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಹ ಚಿತ್ರವಿದು.

ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಪ್ತಾ ಪಾವೂರ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ರಾಜೇಶ್‌ ನಟರಂಗ, ಸಂಧ್ಯಾ ಅರಕೆರೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಸುಧಾಕರ್‌, ಪತ್ರಕರ್ತ ವಿಶ್ವೇಶ್ವರ ಭಟ್‌ ನೈಜವಾಗಿ ಕಾಣಿಸಿಕೊಂಡಿದ್ದಾರೆ.

ರವಿ ರೈ

ಟಾಪ್ ನ್ಯೂಸ್

G PARAMESHWAR

ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ

1-sfsdf-sfsdfd

ಸ್ವಿಸ್ ಓಪನ್ ಸೂಪರ್ ಪ್ರಶಸ್ತಿ ಗೆದ್ದ ಸಾಯಿರಾಜ್-ಚಿರಾಗ್ ಜೋಡಿ

c-t-ravi

ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು: ಸಿ.ಟಿ.ರವಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kabzaa

ಕಬ್ಜ ಚಿತ್ರ ವಿಮರ್ಶೆ; ಮಾಸ್ ಮನತಣಿಸುವ ಅರ್ಕೇಶ್ವರ ವೈಭವ

‘ಚೌಕಾಬಾರ’ ಮೆಚ್ಚುಗೆ

‘ಚೌಕಾಬಾರ’ ಮೆಚ್ಚುಗೆ

kannada movie mary review

ಚಿತ್ರ ವಿಮರ್ಶೆ; ಥ್ರಿಲ್ಲರ್ ‘ಮೇರಿ’ಯ ಜಾಡು ಹಿಡಿದು..

dddooradarshana kannada movie

ದೂರದರ್ಶನ ಚಿತ್ರ ವಿಮರ್ಶೆ; ಟಿವಿಯ ಸದ್ದು, ಅಹಂಗೊಂದು ಗುದ್ದು

kadala theerada bhargava movie

ಕಡಲ ತೀರದ ಭಾರ್ಗವ ಚಿತ್ರ ವಿಮರ್ಶೆ: ಕಡಲ ತೀರದ ಭಾವಯಾನ

MUST WATCH

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

ಹೊಸ ಸೇರ್ಪಡೆ

ಮಾಸ್‌ ಲುಕ್‌ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್‌ ರಾಜ್‌

ಮಾಸ್‌ ಲುಕ್‌ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್‌ ರಾಜ್‌

G PARAMESHWAR

ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ

MI

ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್

1-sadsadsadasd

ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.